Asianet Suvarna News Asianet Suvarna News

ನಿಂತಲ್ಲಿ ನಿಲ್ಲಲ್ಲ… ಒಂದೇ ಕೆಲಸ ಆಗ್ಬರಲ್ಲ… ವರ್ಷಕ್ಕೆ 80 ಲಕ್ಷ ಸಂಪಾದಿಸ್ತಾಳೆ ಹುಡುಗಿ!

ಕಚೇರಿ ರೂಲ್ಸ್ ಪಾಲಿಸ್ತಾ, ಕೊಟ್ಟ ಕೆಲಸವನ್ನು ನೀಯತ್ತಿನಿಂದ ಮಾಡಿ ಸಂಬಳ ಹೆಚ್ಚಾಗ್ಬಹುದು ಎಂದು ಕಾಯುವ ಅನೇಕ ಉದ್ಯೋಗಿಗಳು ಒಂದೇ ಕೆಲಸ ನೆಚ್ಚಿಕೊಂಡಿರ್ತಾರೆ. ಆದ್ರೆ ಈ ಹುಡುಗಿ ಹಾಗಲ್ಲ. ಆಗಾಗ ಕೆಲಸ ಬದಲಿಸಿದ್ರೂ ಈಕೆ ಸಂಪಾದನೆ ಕಡಿಮೆ ಆಗಿಲ್ಲ.
 

Woman Makes Eighty Lakh In A Year By Freelance Never Wants To Work Nine To Five roo
Author
First Published Apr 20, 2024, 1:42 PM IST

ಓದು ಮುಗಿಯುತ್ತಿದ್ದಂತೆ ಜನರು ಕೆಲಸಕ್ಕೆ ಹುಡುಕಾಟ ನಡೆಸುತ್ತಾರೆ. ಒಂದು ಒಳ್ಳೆ ಸಂಬಳ ಸಿಗುವ ಉದ್ಯೋಗ ಸಿಕ್ಕಿದ್ರೆ ಸಾಕು ಎಂದುಕೊಳ್ಳುವ ಜನರು ಆ ಕೆಲಸ ಗಿಟ್ಟಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಕೆಲಸ ಸಿಕ್ಕಿದ ನಂತ್ರ ಅದೇ ತಮ್ಮ ಜೀವನದ ಕೊನೆಯ ಕೆಲಸ ಎನ್ನುವಂತೆ ದುಡಿಮೆ ಶುರು ಮಾಡ್ತಾರೆ. ಇಡೀ ದಿನ ಕಚೇರ, ಮನೆ ಅಂತ ಕೆಲಸ ಮಾಡಿ ನೆಮ್ಮದಿ ಕಳೆದುಕೊಳ್ತಾರೆಯೇ ವಿನಃ ಈ ಕೆಲಸದಿಂದ ಎಲ್ಲರಿಗೂ ಖುಷಿ ಸಿಗೋದಿಲ್ಲ. ದಿನ ಕಳೆದಂತೆ ಕೆಲಸ ಬೋರ್ ಆಗಲು ಶುರುವಾಗುತ್ತದೆ. ಹೊಸ ಕೆಲಸದ ಹುಡುಕಾಟಕ್ಕಾಗಿ ಹಳೆ ಕೆಲಸ ಬಿಡಲು ಭಯ. ಕೆಲಸ ತೊರೆದು ವ್ಯಾಪಾರ, ಬ್ಯುಸಿನೆಸ್ ಶುರು ಮಾಡುವ ಧೈರ್ಯವೂ ಅನೇಕರಿಗಿರುವುದಿಲ್ಲ. ಹಾಗಾಗಿಯೇ ನಮ್ಮಲ್ಲಿ ಅನೇಕರು ಒಂದೇ ಕೆಲಸಕ್ಕೆ ಸ್ಟಿಕ್ ಆಗಿದ್ದಾರೆ. ಆ ಕೆಲಸ ಬಿಡಬೇಕು ಅಂದ್ರೆ ಸಾವಿರಾರು ಬಾರಿ ಆಲೋಚನೆ ಮಾಡ್ತಾರೆ. ಆದ್ರೆ ಈಗ ನಾವು ಹೇಳಲು ಹೊರಟಿರು ಹುಡುಗಿ ಹಾಗಲ. ಆಕೆ ಯಾವ ಕೆಲಸಕ್ಕೂ ಅಂಟಿಕೊಂಡಿಲ್ಲ. ಎಲ್ಲ ಕೆಲಸ ಮಾಡಲು ಸಿದ್ಧವಿದ್ದು, ವರ್ಷದಲ್ಲಿ 80 ಲಕ್ಷ ದುಡಿಯುತ್ತಾಳೆ. ಕೆಲಸ ಮಾಡ್ತಾ, ಓದು ಮುಂದುವರೆಸಿರುವ ಈ ವಿದ್ಯಾರ್ಥಿನಿ ನಿಮಗೆ ಸ್ಫೂರ್ತಿ ಆಗ್ಬಹುದು. 

ಅಮೆರಿಕ (America) ದ ಹೂಸ್ಟನ್ ನಿವಾಸಿ ಗ್ರೇಸ್ ರ್ಯು, ಬಹುರೂಪಿ ಕೆಲಸ ಮಾಡಿ ಸೈ ಎನ್ನಿಸಿಕೊಂಡವಳು. ವೈಯಕ್ತಿಕ ಹಾಗೂ ವೃತ್ತಿ ಜೀವನ (Career) ವನ್ನು ಸಮತೋಲನದಲ್ಲಿಡುವ ಕೆಲಸವನ್ನು ಆಕೆ ಆಯ್ಕೆ ಮಾಡಿಕೊಳ್ತಾಳೆ. ತನ್ನ ಆಸಕ್ತಿಗೆ ತಕ್ಕಂತೆ ಕೆಲಸ ಮಾಡುವ ಯುವತಿ ಗಳಿಕೆ ಏನೂ ಕೆಡಿಮೆ ಇಲ್ಲ. 

ಅಬ್ಬಬ್ಬಾ ಏನ್ ಸುಂದ್ರಿ ಗುರೂ! ತಿಂಗಳಿಗೆ 9 ಲಕ್ಷ ದುಡಿಯೋ ಈಕೆ ಬಗ್ಗೆ ನಂಬೋಕಾಗ್ದಿರೋ ವಿಷ್ಯ ಹೇಳ್ತೀವಿ ಕೇಳಿ..

ತನ್ನ ಜೀವನದಲ್ಲಿ 9 -5 ಗಂಟೆ ಕೆಲಸ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿರುವ ಗ್ರೇಸ್ ರ್ಯು, ಇಂಥ ಕೆಲಸವನ್ನು ಎಂದಿಗೂ ಒಪ್ಪಿಕೊಳ್ಳೋದಿಲ್ಲ. ವಿಶೇಷ ಅಂದ್ರೆ ಗ್ರೇಸ್ ರ್ಯುಗೆ ಇನ್ನೂ 23 ವರ್ಷ ವಯಸ್ಸು, ಆಗ್ಲೇ ಆಕೆ 96,000 ಡಾಲರ್ ಅಂದರೆ 80 ಲಕ್ಷ 15 ಸಾವಿರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. 

ಗ್ರೇಸ್, ಟೆಕ್ಸಾಸ್‌ (Texas) ನ ವಿಶ್ವವಿದ್ಯಾನಿಲಯದಲ್ಲಿ ಮನರಂಜನೆ, ಪಾರ್ಕ್ ಮತ್ತು ಟೂರಿಸಂ ವಿಜ್ಞಾನದಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಇದ್ರ ಜೊತೆಗೇ ಆಕೆ ಕೆಲಸ ಕೂಡ ಮಾಡ್ತಿದ್ದಾಳೆ. ಗ್ರೇಸ್ ಯಾವುದೇ ಕೆಲಸಕ್ಕೆ ಸ್ಟಿಕ್ ಆಗೋದಿಲ್ಲ. ಇಷ್ಟದ ಕೆಲಸವನ್ನು ಮಾಡ್ತಾ ಹಣ ಸಂಪಾದನೆ ಮಾಡ್ತಿದ್ದಾಳೆ. ಗ್ರೇಸ್ ಈವರೆಗೆ ಟೆಕ್ನಾಲಜಿ, ಸೇಲ್ಸ್, ಆತಿಥ್ಯಕ್ಕೆ ಸಂಬಂಧಿಸಿದ ಎಲ್ಲ ಕೆಲಸವನ್ನು ಮಾಡಿದ್ದಾಳೆ. ಈ ಎಲ್ಲ ಕೆಲಸದಲ್ಲಿ ಗ್ರೇಸ್ ಗೆ ಒಳ್ಳೆ ಅನುಭವವಿದೆ. 

ಸುತ್ತಾಡೋದು ಗ್ರೇಸ್ ಗೆ ತುಂಬಾ ಇಷ್ಟ. ಗ್ರೇಸ್ ತಾನು ಗಳಿಸಿದ ಹಣವನ್ನು ಹೂಡಿಕೆ ಮಾಡ್ತಾಳೆ. ಉಳಿದ ಹಣದಲ್ಲಿ ಸುತ್ತಾಟ ನಡೆಸುತ್ತಾಳೆ. ಆಕೆಯ ಪಾಲಕರು ಕೊರಿಯಾದಲ್ಲಿದ್ದು, ಆಕೆ ಅಲ್ಲಿಗೆ ಹೋಗಿ ಬರ್ತಿರುತ್ತಾಳೆ. ಗ್ರೇಸ್ ಒಂದು ಸ್ವಂತ ಮನೆ ಹೊಂದಿದ್ದು, ಅದರಿಂದಲೂ ಆಕೆ ಹಣ ಗಳಿಸ್ತಿದ್ದಾಳೆ. ತನ್ನ ಮನೆಯನ್ನು ಬಾಡಿಗೆಗೆ ನೀಡಿರುವ ಗ್ರೇಸ್, ಅದ್ರಿಂದ ಬರುವ ಹಣವನ್ನು ಹೂಡಿಕೆ ಮಾಡ್ತಾಳೆ. 

ಇದು ಆ್ಯಂಟಿಲಿಯಾವಲ್ಲ, ಮುಖೇಶ್ ಅಂಬಾನಿಯ ಈ ಬಂಗಲೆಯಲ್ಲಿ ಇವೆ 49 ಬೆಡ್‌ರೂಮ್ಸ್, ಆಸ್ಪತ್ರೆ...

ನ್ಯೂಯಾರ್ಕ್ ನಲ್ಲಿ ಕೆಲ ದಿನಗಳ ಕಾಲ ಲಿವ್ ಇನ್ ದಾದಿಯಾಗಿದ್ದ ಗ್ರೇಸ್ ನಂತ್ರ ಟೆಕ್ಸಾಸ್ ಗೆ ವಾಪಸ್ ಆಗಿದ್ದಳು. ಅಲ್ಲಿಯೂ ಕೆಲ ಕಾಲ ದಾದಿಯಾಗಿ ಕೆಲಸ ಮಾಡಿದಳು. ಟೆಕ್ ಕಂಪನಿಯಲ್ಲೂ ಕೆಲಸ ಮಾಡಿರುವ ಗ್ರೇಸ್, ಡಾಗ್ ವಾಕರ್, ಕ್ರಿಯೇಟರ್, ಟಿಕ್‌ಟಾಕ್ ಪಾರ್ಟರನ್  ಸೇರಿದಂತೆ ಪ್ರಿಲಾಯನ್ಸರ್ ಕೆಲಸವನ್ನೂ ಗ್ರೇಸ್ ಮಾಡಿದ್ದಾಳೆ. ನಿಮಗಿಷ್ಟವಿಲ್ಲದ 9 -5ರ ಕೆಲಸ ಮಾಡುವ ಬದಲು ಖುಷಿಯಾಗಿ, ನಿಮಗೆ ನೆಮ್ಮದಿ ನೀಡುವ ಕೆಲಸ ಮಾಡಿ ಎನ್ನುತ್ತಾಳೆ ಗ್ರೇಸ್. 

Follow Us:
Download App:
  • android
  • ios