Asianet Suvarna News Asianet Suvarna News

ಅತ್ತೆ ಮಾಳವಿಕಾ ಸಿದ್ಧಾರ್ಥ್‌ ಹೆಗ್ಡೆಗೆ ಥ್ಯಾಂಕ್ಸ್ ಎಂದಿದ್ಯಾಕೆ ಡಿಕೆಶಿ ಮಗಳು!

ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ತನ್ನ ಅತ್ತೆ, ಕಾಫಿ ಡೇ ಒಡತಿ ಮಾಳವಿಕಾ ಹೆಗ್ಡೆ ಅವರನ್ನು ಹಾಡಿ ಹೊಗಳಿದ್ದಾರೆ. ಪಾಡ್ ಕಾಸ್ಟ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅತ್ತೆಯೇ ತನಗೆ ಸ್ಫೂರ್ತಿ ಎನ್ನುವ ಜೊತೆಗೆ ಅವರಿಗೆ ಥ್ಯಾಂಕ್ಸ್ ಕೂಡ ಹೇಳಿದ್ದಾರೆ ಐಶ್ವರ್ಯಾ.  

DK Shivakumar daughter Aisshwarya DKS Hegde thanked her mother in law Malavika Hegde in a podcast why anu
Author
First Published Apr 29, 2024, 5:40 PM IST

ಬೆಂಗಳೂರು (ಏ.29): ಅತ್ತೆ-ಸೊಸೆ ಸಂಬಂಧ ಅಂದ್ರೆ ಅಲ್ಲೊಂಚೂರು ಮನಸ್ತಾಪ, ಮುನಿಸು, ಅಸಮಾಧಾನ ಸಾಮಾನ್ಯ. ಅತ್ತೆ-ಸೊಸೆ ಅನೋನ್ಯವಾಗಿರೋದು ಕಾಣಲು ಸಿಗೋದು ತುಂಬಾ ವಿರಳ. ಈ ಸಂಬಂಧವೇ ಹಾಗೇ. ಶ್ರೀಮಂತರಿಂದ ಹಿಡಿದು ಬಡವರ ತನಕ ಇಲ್ಲೊಂದು ಸಣ್ಣ ಬಿರುಕು ಕಾಮನ್. ಆದರೆ, ಕೆಲವು ಅತ್ತೆ-ಸೊಸೆ ಮಾತ್ರ ತುಂಬಾ ಅನೋನ್ಯವಾಗಿರುವ ಮೂಲಕ ಅಚ್ಚರಿ ಮೂಡಿಸುತ್ತಾರೆ ಕೂಡ. ಇಷ್ಟೆಲ್ಲ ಪೀಠಿಕೆ ಹಾಕೋಕೆ ಕಾರಣ ಇತ್ತೀಚೆಗೆ ಪಾಡ್ ಕಾಸ್ಟ್ ವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ತನ್ನ ಅತ್ತೆ ಮಾಳವಿಕಾ ಸಿದ್ಧಾರ್ಥ ಅವರನ್ನು ಹಾಡಿ ಹೊಗಳಿರುವ ಜೊತೆಗೆ ಅವರಿಗೆ ಥ್ಯಾಂಕ್ಸ್ ಕೂಡ ಹೇಳಿದ್ದಾರೆ. 'ಐಕಾನಿಕ್ ವಿಮೆನ್' ಎಂಬ ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ಐಶ್ವರ್ಯಾ ಡಿಕೆಎಸ್ ಹೆಗ್ಡೆ, ನನ್ನ ಅತ್ತೆ ನನಗೆ ದೊಡ್ಡ ಪ್ರೇರಣೆ. ಅವರು ನನಗೆ ಪ್ರತಿದಿನ ಹೆಚ್ಚಿನ ಕೆಲಸ ಮಾಡಲು ಉತ್ತೇಜನ  ನೀಡುತ್ತಾರೆ ಎಂದು ಹೇಳಿದ್ದಾರೆ.

ನನ್ನ ಅತ್ತೆ ನನ್ನ ದೊಡ್ಡ ಶಕ್ತಿ. ಆ ಕುಟುಂಬದಲ್ಲಿ ಸದಸ್ಯರ ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವ ಕ್ರಮ ನನಗೆ ತುಂಬಾ ಇಷ್ಟ. ಒಂದು ದಿವಸ ಅತ್ತೆ ನನ್ನನ್ನು ಕೂರಿಸಿಕೊಂಡು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂದು ಹೇಳಿದರು. ಅಲ್ಲದೆ, ನನಗೆ ಅಂಬರ್ ವ್ಯಾಲಿ ರೆಸಿಡೆನ್ಷಿಯಲ್ ಸ್ಕೂಲ್ ಅನ್ನು ಮುನ್ನಡೆಸುವ ಜವಾಬ್ದಾರಿ ನೀಡಿದರು. ಅವರ ಈ ಉತ್ತೇಜನವೇ ನನಗೆ ಅಂಬರ್ ವ್ಯಾಲಿ ರೆಸಿಡೆನ್ಷಿಯಲ್ ಸ್ಕೂಲ್ ಅನ್ನು ಮುನ್ನೆಡುಸವ ಶಕ್ತಿ ನೀಡಿದೆ ಎಂದು ಪಾಡ್ ಕಾಸ್ಟ್ ನಲ್ಲಿ ಐಶ್ವರ್ಯಾ ಅತ್ತೆಯನ್ನು ಹಾಡಿ ಹೊಗಳಿದ್ದಾರೆ.

ರಾಜಕೀಯಕ್ಕೆ ಬರ್ತಾರ ಡಿಕೆಶಿ ಪುತ್ರಿ... ಮತ ಚಲಾವಣೆ ಬಳಿಕ ಹೇಳಿದ್ದೇನು?

ಅತ್ತೆ ನನಗೆ ನೀಡಿರುವ ಜವಾಬ್ದಾರಿ, ಅಧಿಕಾರ ಹಾಗೂ ಸ್ವಾತಂತ್ರ್ಯ ಅಂಬರ್ ವ್ಯಾಲಿಯನ್ನು ಸಮರ್ಥವಾಗಿ ಮುನ್ನೆಸಲು ನೆರವು ನೀಡಿದೆ. ಈ ಸ್ಕೂಲ್ ನಲ್ಲಿ ನಾನು ಅನೇಕ ಹೊಸ ವಿಚಾರಗಳನ್ನು ಪರಿಚಯಿಸಲು ಕೂಡ ಇದು ಕಾರಣವಾಗಿದೆ. ಮಾವ ಸಿದ್ಧಾರ್ಥ ಹೆಗ್ಗೆ ಸ್ಮರಣೆಯಲ್ಲಿ ವಿಜಿಎಸ್ ಮೆಮೋರಿಯಲ್ ಕ್ವಿಜ್  ಆಯೋಜನೆ,10 ಹಾಗೂ 12ನೇ ತರಗತಿ ಮಕ್ಕಳಿಗೆ ಉದ್ಯಮ ತರಗತಿಗಳನ್ನು ನಡೆಸಲು ಹಾರ್ವರ್ಡ್ ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಅತ್ತೆಯ ಉತ್ತೇಜನೇ ಕಾರಣ. ಈ ರೀತಿ ಹಾರ್ವರ್ಡ್ ಏಜೆನ್ಸಿ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ದೇಶದ ಏಕೈಕ ಶಾಲೆ ನಮ್ಮದಾಗಿದೆ ಎಂಬ ಮಾಹಿತಿಯನ್ನು ಐಶ್ವರ್ಯಾ ನೀಡಿದ್ದಾರೆ.

ಇನ್ನು ಕಾಫಿ ಡೇ ಉದ್ಯಮದಲ್ಲಿ ಭಾಗಿಯಾಗಲು ನೀವು ಎದುರು ನೋಡುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಐಶ್ವರ್ಯಾ, ನಮ್ಮ ಕುಟುಂಬದ ಪ್ರತಿಯೊಬ್ಬರೂ ಕಾಫಿ ಡೇಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಕೊಂಡಿದ್ದಾರೆ. ಕಷ್ಟದ ಸಮಯದಲ್ಲಿದ್ದಾಗ, ಸ್ಥಿರತೆ ಕಂಡುಕೊಂಡಾಗ ಹಾಗೂ ನಿಧಾನವಾಗಿ ಪ್ರಗತಿ ಕಾಣಲು ಪ್ರಾರಂಭಿಸಿದಾಗ ಈ ಎಲ್ಲ ಸಮಯದಲ್ಲೂ ನಾನು ಆ ಕುಟುಂಬದ ಭಾಗವಾಗಿದ್ದೆ ಎಂದು ತಿಳಿಸಿದ್ದಾರೆ.

ನನಗೆ ಜೀವನದಲ್ಲಿ ತುಂಬಾ ಬೇಗ ಕೆಲವು ಜವಾಬ್ದಾರಿಗಳನ್ನು ನಿಭಾಯಿಸುವ ಅವಕಾಶ ಸಿಕ್ಕಿತು. ಇದಕ್ಕ ನನ್ನ ಕುಟುಂಬ ಕಾರಣ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಕೂಡ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತು. ಕೆಲವು ಆಪ್ ಗಳು ಹಾಗೂ ತಂತ್ರಜ್ಞಾನದಿಂದ ಸರ್ಕಾರಿ ಶಾಲೆ ಮಕ್ಕಳಿಗೂ ಕೂಡ ಕಲಿಯಲು ಅವಕಾಶ ಸಿಗುತ್ತಿದೆ ಎಂದು ಐಶ್ವರ್ಯ ತಿಳಿಸಿದ್ದಾರೆ. 

ಸದ್ಗುರು ಜೊತೆ ಡಿಕೆಶಿ ಪುತ್ರಿ ಐಶ್ವರ್ಯಾ, ತಾಳಿ ಹಾಕ್ಕೊಂಡಿಲ್ಲ ಅಂತ ಕಾಲೆಳೆದ ನೆಟ್ಟಿಗರು!

ನಾನು ಏಳು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಜೀವನ ನಿರ್ವಹಣೆ ಕೌಶಲ್ಯಗಳು, ಸವಾಲುಗಳನ್ನು ಎದುರಿಸುವ ಕಲೆ ಇತ್ಯಾದಿಗಳು ನಮ್ಮ ದೇಶದ ಮಕ್ಕಳಿಗೆ ಸಿಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಐಕಾನಿಕ್ ವಿಮೆನ್ ಎನ್ನೋದೇ ನನಗೆ ಸ್ಫೂರ್ತಿ ನೀಡುವಂತದ್ದು ಎಂದ ಐಶ್ವರ್ಯಾ, ಇದು ಮಹಿಳಾ ಸಮುದಾಯಕ್ಕೆ ಸ್ಫೂರ್ತಿನೀಡುವಂತದ್ದು ಎಂದು ಹೇಳಿದ್ದಾರೆ.

Follow Us:
Download App:
  • android
  • ios