Asianet Suvarna News Asianet Suvarna News

ಪ್ರಧಾನಿ ಮೋದಿ ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ? ಪ್ರಿಯಾಂಕಾ ಗಾಂಧಿ

ಹಾಸನ ಸಂಸದ ಪ್ರಜ್ಚಲ್ ರೇವಣ್ಣಾ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ  ಪ್ರೀಯಾಂಕಾ ಗಾಂಧಿ ಮಾತನಾಡುತ್ತಿದ್ದರು.

Lok sabha election 2024 in Karnataka Priyanka gandhi outraged against PM Modi at Kalaburagi congress convention rav
Author
First Published Apr 29, 2024, 7:50 PM IST

ಕಲಬುರಗಿ ಏ.29:- ಹಾಸನ ಸಂಸದ ಪ್ರಜ್ಚಲ್ ರೇವಣ್ಣಾ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ  ಪ್ರೀಯಾಂಕಾ ಗಾಂಧಿ ಮಾತನಾಡುತ್ತಿದ್ದರು.

'ಎಲ್ಲರಿಗೂ ನನ್ನ ನಮಸ್ಕಾರ' ಎಂದು ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಪ್ರಿಯಾಂಕಾ ಗಾಂಧಿ(Priyanka gandhi)‌‌ ಅವರು ತಾವು ಸಭೆಗೆ ತಡವಾಗಿ ಬಂದಿರುವುದಕ್ಕೆ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರಿಗೆ ಕಾಯಿಸಿದ್ದಕ್ಕೆ ಕ್ಷಮೆ ಕೇಳಿದರು.

ಇದು ಬಸವಣ್ಣನವರ ಹಾಗೂ ಖಾಜಾಬಂದೇವನಾಜರ ಪ್ರವಿತ್ರ ಭೂಮಿ‌ ಇದ್ದು. ಸತ್ಯ ಹಾಗೂ ಕ್ರಾಂತಿ ಮತ್ತು ಖರ್ಗೆ ಅವರ ಕರ್ಮಭೂಮಿಯಾಗಿದೆ. 

ನಮ್ಮ ದೇಶ ಸತ್ಯಮೇವ ಜಯತೇ ಎನ್ನುವ ಮಾತನ್ನು ಅಕ್ಷರಶಃ ‌ಪಾಲಿಸುವ ದೇಶವಾಗಿದೆ. ಮನೆಯಲ್ಲಿ ತಾಯಿ ಮಕ್ಕಳು ಸತ್ಯ ಹೇಳುವಂತೆ ಹೇಳುತ್ತಾಳೆ. ಮಹಾತ್ಮಾಗಾಂಧಿ ಕೂಡಾ ಸತ್ಯದ ಹಾದಿಯಲ್ಲೆ ನಡೆದರು. ರಾಜಕೀಯ ಕೂಡಾ ಸತ್ಯದ ದಾರಿಯಲ್ಲೇ ನಡೆದಿದೆ. ಕಾಂಗ್ರೆಸ್ ಪಕ್ಷ ಸತ್ಯದ ರಾಜಕೀಯದ ಹಾದಿಯಲ್ಲೇ ನಡೆದಿದೆ. ಆದರೆ ಕಳೆದ ಹತ್ತು‌ವರ್ಷಗಳಿಂದ ರಾಜಕೀಯದ ಹಾದಿ‌ ಬದಲಾಗಿದೆ. ಇಲ್ಲಿ ಸತ್ಯಕ್ಕೆ‌ ಜಾಗವಿಲ್ಲದಾಗಿದೆ. 

ರಾಜ್ಯದಲ್ಲಿ ಬೇಜವಾಬ್ದಾರಿ ಸರಕಾರ: ಬಿ.ಎಸ್.ಯಡಿಯೂರಪ್ಪ

ಕಳೆದ ಐದು ವರ್ಷದ ಅವಧಿಯಲ್ಲಿ ಇಲ್ಲಿನ ಸಂಸದ ಒಂದು ರೈಲು ಬಿಡಿಸಿದ್ದು ಬಿಟ್ಟರೇ ಬೇರೆ ಏನು ಮಾಡಿಲ್ಲ ಎಂದು ಆರೋಪಿಸಿದ ಪ್ರಿಯಾಂಕಾ ಗಾಂಧಿ, ಕುಡಿಯುವ ನೀರಿಗೂ ಕೂಡಾ ಕಷ್ಟಪಡುವ ವಾತಾವರಣ‌ ನಿರ್ಮಾಣವಾಗಿದೆ. ದೇಶದಲ್ಲಿ‌ ನಿರುದ್ಯೋಗ ತಾಂಡವವಾಡುತ್ತಿದೆ.‌ ಶಿಕ್ಷಣ ಪಡೆದವರಿಗೆ ಉದ್ಯೋಗ ವಿಲ್ಲದೇ ದೂರದ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. 

ದೇಶದ ಯವಕರು ಸೇನೆಯಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿದ್ದರು ಆದರೆ ಅಗ್ನಿ ವೀರ್ ಯೋಜನೆ ಜಾರಿಗೆ ತಂದು ಸೈನ್ಯಕ್ಕೆ ಸೇರುವ ಯುವಕರಿಗೆ ಯಾವುದೇ ಭರವಸೆ ನೀಡಿಲ್ಲ.

ರೈತರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕಪುಣ್ಣ ವ್ಯಾಪಾರಗಳಿಂದ ಜನರ ಜೀವನ ನಿರ್ವಹಣೆ ನಡೆಯುತ್ತಿತ್ತು. ಜಿಎಸ್ ಟಿ ಯಿಂದಾಗಿ, ನೋಟ್ ಬಂಧಿಯಿಂದಾಗಿ ಎಲ್ಲ ವರ್ಗದವರು‌ ಕಷ್ಟಪಡುವಂತಾಗಿದೆ.

ನೀಮ್ಸ್, ರೇಲ್ವೆ ವಲಯದಂತ ಪ್ರಮುಖ ಯೋಜನೆಗಳು ಜಿಲ್ಲೆಗೆ ಮಂಜೂರಾಗಿದ್ದವು‌ ಆದರೆ ಕೇಂದ್ರ ಸರ್ಕಾರ ಎಲ್ಲ ಯೋಜನೆಗಳನ್ನು ವಾಪಸ್ ಪಡೆದಿದೆ. ಕಾರಣ ಇದು ಖರ್ಗೆ ಅವರ ಜಿಲ್ಲೆಯಾಗಿದೆ.

ಮಹಾಲಕ್ಷ್ಮಿ ಯೋಜನೆ (Mahalakshmi scheme) , ಖಾಲಿ ಹುದ್ದೆಗಳ ಭರ್ತಿ ಮಾಡುತ್ತೇವೆ,  ಅಗ್ನಿವೀರ್ ಯೋಜನೆ ರದ್ದು, ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳ ಹೆಚ್ಚಳ, ರೈತರ ಸಾಲ‌ ಮನ್ನಾ ಮಾಡುವ ಉದ್ದೇಶ ಹೊಂದಲಾಗಿದೆ. ರೈತರ ಸಾಲ ಮನ್ನಾ‌ಮಾಡಲು ಹಣ ವಿಲ್ಲ ಎಂದ ಮೋದಿ ಬಂಡವಾಳಶಾಯಿಗಳ 16 ಲಕ್ಷ‌ಕೋಟಿ ಸಾಲ ಮನ್ನಾ ಮಾಡಿದ್ದಾರೆ.

ಅವರು ಬಹಳ ದೊಡ್ಡ ಭರವಸೆ ನೀಡಿದ್ದರು. ಅವುಗಳಲ್ಲಿ ತೊಗರಿ ಹಬ್ ಮಾಡುವುದು‌ ಕೂಡಾ ಸೇರಿತ್ತು. ಎಂ ಎಸ್ ಪಿ‌ ಫಿಕ್ಸ್ ಮಾಡುವುದಾಗಿ ಹೇಳಿದ್ದರು. ಪೆಟ್ರೋಲ್ ಡಿಸೇಲ್, ಗ್ಯಾಸ್ ಸಿಲಿಂಡರ, ಬೇಳೆ, ದಿನಬಳಕೆ ವಸ್ತುಗಳು ಬಂಗಾರ, ಬೆಳ್ಳಿ ಬೆಲೆ ಏರಿವೆ. ಪ್ರತಿಯೊಂದಕ್ಕೂ ಜಿಎಸ್ ಟಿ‌ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಯಾವುದನ್ನೂ ಮೋದಿ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತರಿಗೆ ಅನುಕೂಲ ಮಾಡಿಕೊಡಲಿದ್ದೇವೆ

ರಾಜ್ಯ ಸರ್ಕಾರದ ಗ್ಯಾರಂಟಿ‌ ಯೋಜನೆಗಳು ಜನರಿಗೆ ಮುಟ್ಟುತ್ತಿರುವ ಬಗ್ಗೆ ಸಭಿಕರಿಗೆ ಕೇಳಿ ಖಾತ್ರಿ ಪಡೆಸಿಕೊಂಡ ಪ್ರಿಯಾಂಕಾ,  ಕಾಂಗ್ರೆಸ್ ಸರ್ಕಾರ ‌ಬಡವರ ಪರವಿರುವ ಪಕ್ಷವಾಗಿದ್ದು, ಬಿಜೆಪಿ ಶ್ರೀಮಂತರ ಪಕ್ಷವಾಗಿದೆ ಎಂದರು.

ಎರಡೆರಡು ಸಿಎಂ ಗಳನ್ನು ಜೈಲಿಗೆ ತಳ್ಳಲಾಗಿದೆ. ಆದರೂ ಕೂಡಾ ಮಿಡಿಯಾಗಳು ಸುಮ್ಮನಿವೆ.‌ಕಾರಣ ಬಹುತೇಕ ಮೀಡಿಯಾಗಳು ಶ್ರೀಮಂತರ ಆಧೀನದಲ್ಲಿವೆ. ರೇವಂತ‌ರೆಡ್ಡಿ ಮನೆಗೆ ದಿಲ್ಲಿ ಪೊಲೀಸರು ಬಂದಿರುವ ಬಗ್ಗೆ ಯಾವ ಮೀಡಿಯಾಗಳು ಪ್ರಶ್ನಿಸುವುದಿಲ್ಲ.

ಬಿಜೆಪಿಗೆ 400 ಸೀಟು ಈ ಸಲ ಸಿಕ್ಕರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು,  ಸಂವಿಧಾನದಿಂದ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ಹಾಗೂ ಹಕ್ಕು‌ಸಿಗುತ್ತದೆ. ಆದರೆ ಸಂವಿಧಾನ ಬದಲಾದರೆ ಎಲ್ಲ ಅವಕಾಶಗಳು ಕಳೆದು ಹೋಗಲಿವೆ. ಕೋಲಿ ಸಮಾಜವನ್ನು ಎಸ್ ಟಿ‌ ಸೇರಿಸಲು ರಾಜ್ಯ ಸರ್ಕಾರ ಕಳಿಸಿದ ಪ್ರಸ್ತಾವನೆಯನ್ನು ಮೋದಿ ಸರ್ಕಾರ ತಿರಸ್ಕಾರ ಮಾಡಿದೆ.

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಮೋದಿ‌ಸುಮ್ಮನೆ ಇದ್ದರು. ಮೋದಿ‌ ಜತೆ ಇರುವ ವ್ಯಕ್ತಿ‌ಇಂದು ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅದೆ ವ್ಯಕ್ತಿಯ ಪರ ಮತಯಾಚಿಸಿದ್ದ‌ ಮೋದಿ ಹಾಗೂ ಅಮಿತ್ ಶಾ ಉತ್ತರಿಸಿಲಿ. ಅದೇ ವ್ಯಕ್ತಿ ಯಾರಿಗೂ ಗೊತ್ತಾಗದಂತೆ ವಿಧೇಶಕಕ್ಕೆ ಪರಾರಿಯಾದ. ಮಂಗಲ ಸೂತ್ರದ ಬಗ್ಗೆ ಮಾತನಾಡುವ ಮೋದಿ ಈಗ ಏನು ಹೇಳುತ್ತಾರೆ? ಈ ದೇಶದಲ್ಲಿ ಬಹಳಷ್ಟು ಪ್ರದಾನಿಗಳು ಆಗಿ ಹೋಗಿದ್ದಾರೆ. ಅವರೆಲ್ಲ ಸತ್ಯದ ಹಾದಿಯಲ್ಲಿ ನಡೆದಿದ್ದಾರೆ. ಆದರೆ ಮೋದಿ ಅವರು ಮಹಿಳೆಯರ ರಕ್ಷಣೆಗೆ ಏನು‌ ಮಾಡಿದ್ದಾರೆ ಹೇಳಲಿ.

ಕ್ಷೇತ್ರದ ಬಗ್ಗೆ ಗೀತಾ ಶಿವರಾಜ್‌ಕುಮಾರ್‌ಗೆ ಯಾವುದೇ ಜ್ಞಾನ ಇಲ್ಲ; ಗೆಲ್ಲಿಸಬೇಡಿ: ಹರತಾಳು ಹಾಲಪ್ಪ ಮನವಿ

ಡಿಆರ್ ಡಿಓ , ಇಸ್ರೋ , ಐಐಟಿ ಸೇರಿದಂತೆ ಪ್ರಮುಖ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ಇಂತಹ ಯಾವುದಾದರೊಂದು ಯೋಜನೆಯನ್ನು ಮೋದಿ‌ಜಾರಿಗೆ ತಂದಿದ್ದರೆ ಹೇಳಲಿ. ಬಡವರು ಬಡವರಾಗಿ‌ ಉಳಿಯುತ್ತಿದ್ದಾರೆ ಶ್ರೀಮಂತರು‌ ಶ್ರೀಮಂತರಾಗಿದ್ದಾರೆ. ಇವುಗಳ ಬಗ್ಗೆ ನೀವು ಪ್ರಶ್ನೆ ಮಾಡಿ‌, ನೀವು ಸುಮ್ಮನಿದ್ದರೆ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ‌ ಮೋದಿ ಮತ ಕೇಳಲು ಬರುತ್ತಾರೆ ಎಂದು ಎಚ್ಚರಿಸಿದರು.

ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸಂವಿಧಾನ ದುರ್ಬಲಗೊಳಿಸುವ ಮಾತು ನಡೆಯುತ್ತಿದೆ. ವಿಚಾರ ಮಾಡಿ ಮತದಾನ ಮಾಡಿ. ನಿಮಗೆ‌ ಟಿವಿಯಲ್ಲಿ ಏನು ತೋರಿಸಲಾಗುತ್ತಿದೆ ಅದು‌ ಸತ್ಯವಲ್ಲ. ಜನರು‌ ಹೇಗೆ ಕಷ್ಟಪಡುತ್ತಿದ್ದಾರೆ ಎನ್ನುವ ಕುರಿತು ಮೋದಿಗೆ ಗೊತ್ತಿಲ್ಲ.‌ ಈ ಸರ್ಕಾರವನ್ನು ತೊಲಗಿಸಿ ನಿಮಗೆ ಅನುಕೂಲವಾಗುವಂತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ಕಳೆದ ಐವತ್ತು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಖರ್ಗೆ ಅವರಿಗೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿಕೊಂಡರು.

Follow Us:
Download App:
  • android
  • ios