Asianet Suvarna News Asianet Suvarna News

ಎಸ್‌ಪಿ ನೇತಾರ ಅಖಿಲೇಶ್‌ ಯಾದವ್‌ ದಿಢೀರ್‌ ಲೋಕಸಭೆ ಅಖಾಡಕ್ಕೆ

ಅಖಿಲೇಶ್‌ ಯಾದವ್‌ 2000, 2004 ಹಾಗೂ 2009 ರಲ್ಲಿ ಸಂಸದರಾಗಿ ಕನೌಜ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2012ರಲ್ಲಿ ಮುಖ್ಯಮಂತ್ರಿಯಾದಾಗ ಲೋಕಸಭಾ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಪತ್ನಿ ಡಿಂಪಲ್ ಯಾದವ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 2019 ರಲ್ಲಿ ಬಿಜೆಪಿಯ ಸುಬ್ರತ್ ಪಾಠಕ್ ವಿರುದ್ಧ ಡಿಂಪಲ್‌ ಸೋತಿದ್ದರು. 

Akhilesh Yadav Announced his Contest from Kanauj in Lok Sabha Elections 2024 grg
Author
First Published Apr 25, 2024, 11:35 AM IST

ಲಖನೌ(ಏ.25):  ಅಚ್ಚರಿಯ ವಿದ್ಯಮಾನವೊಂದರಲ್ಲಿ ಉತ್ತರ ಪ್ರದೇಶದ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಎಸ್ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸ್ಪರ್ಧೆ ಘೋಷಿಸಿದ್ದಾರೆ.

2 ದಿನದ ಹಿಂದೆ ಎಸ್‌ಪಿ ತೇಜ್‌ ಪ್ರತಾಪ್‌ ಯಾದವ್‌ ಅವರನ್ನು ಕನೌಜ್‌ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಈಗ ನಿರ್ಧಾರ ಬದಲಿಸಿ ಅಖಿಲೇಶ್‌ ಹೆಸರು ಘೋಷಿಸಲಾಗಿದೆ. ಅವರ ಚಿಕ್ಕಪ್ಪ ರಾಮ್‌ಗೋಪಾಲ್‌ ಯಾದವ್‌ ಅವರು, ‘ಅಖಿಲೇಶ್‌ ಯಾದವ್‌ ಇಂದು (ಏ.25) ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

News Hour: ಮುಖ್ತಾರ್‌ ಮನೆಗೆ ಅಖಿಲೇಶ್‌ ಭೇಟಿ, 'ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ ನಿಧನವಾದಾಗ ಎಲ್ಲಿದ್ರಿ' ಪ್ರಶ್ನಿಸಿದ BJP

ಅಖಿಲೇಶ್‌ ಯಾದವ್‌ 2000, 2004 ಹಾಗೂ 2009 ರಲ್ಲಿ ಸಂಸದರಾಗಿ ಕನೌಜ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2012ರಲ್ಲಿ ಮುಖ್ಯಮಂತ್ರಿಯಾದಾಗ ಲೋಕಸಭಾ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಪತ್ನಿ ಡಿಂಪಲ್ ಯಾದವ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 2019 ರಲ್ಲಿ ಬಿಜೆಪಿಯ ಸುಬ್ರತ್ ಪಾಠಕ್ ವಿರುದ್ಧ ಡಿಂಪಲ್‌ ಸೋತಿದ್ದರು. ಕನೌಜ್‌ ಕ್ಷೇತ್ರದಲ್ಲಿ ಮೇ. 13ರಂದು ಮತದಾನ ನಡೆಯಲಿದೆ.

Follow Us:
Download App:
  • android
  • ios