Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ಮೇಲೆ ಶಿಸ್ತು ಕ್ರಮಕ್ಕೆ ಹೆಚ್ಚಿದ ಒತ್ತಡ; ಶಾಸಕ ಸಮೃದ್ಧಿ ಮಂಜುನಾಥ್ 24 ಗಂಟೆ ಗಡುವು!

19 ಜನ ಶಾಸಕರ ಭವಿಷ್ಯ ಬೇಕೋ, ತಮ್ಮ ಕುಟುಂಬದ ರೇವಣ್ಣರವರು ಪ್ರಜ್ವಲ್ ರವರು ಮುಖ್ಯವೋ ತೀರ್ಮಾನಿಸಬೇಕಿದೆ. 24ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ವರಿಷ್ಠರಿಗೆ 24 ಗಂಟೆಗಳ ಗಡುವು ನೀಡಿದ ಶಾಸಕ ಸಮೃದ್ಧಿ ಮಂಜುನಾಥ್

Hassan sex tapes pressure for disciplinary action on Prajwal revanna and HD Revanna mla samriddhi manjunath tweet rav
Author
First Published Apr 29, 2024, 9:37 PM IST

ಹಾಸನ (ಏ.29): ಹಾಸನ ಜೆಡಿಎಸ್‌ ಸಂಸದ, ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಇದೀಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ಪ್ರಕರಣ ಸಂಬಂಧ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಇತ್ತ ಪ್ರಜ್ವಲ್ ರೇವಣ್ಣರ ಮೇಲೆ ಶಿಸ್ತು ಕ್ರಮ ಜರುಗಿಸಲು ಜೆಡಿಎಸ್ ಪಕ್ಷದ ಮುಖಂಡರು ವರಿಷ್ಠರ ಮೇಲೆ ಒಬ್ಬೊಬ್ಬರೇ ಒತ್ತಡ ತರುತ್ತಿದ್ದಾರೆ. ಶಾಸಕ ಕಂದಕೂರು ಈ ಬಗ್ಗೆ ನೇರವಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಇದೀಗ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ ಸಹ ಟ್ವೀಟ್ ಮಾಡಿ ಪ್ರಜ್ವಲ್ ರೇವಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ತೀವ್ರ ಮುಜುಗರಕ್ಕೆ ಒಳಗಾಗುವಂತೆ ಆಗಿದೆ. ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ಹೇಳಲು ಆಗುತ್ತಿಲ್ಲ. ಜನಪ್ರತಿನಿಧಿಯಾಗಿ ನನಗೇ ಇಂತಹ ಪರಿಸ್ಥಿತಿ ಆದ್ರೆ ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡು ಏನು? ಪಕ್ಷದ ಶಾಸಕರು ಮುಖ್ಯವೋ ಅಥವಾ ನಿಮ್ಮ ಕುಟುಂಬದ ಸದಸ್ಯರು ಮುಖ್ಯವೋ ತೀರ್ಮಾನ ಮಾಡಿ ಮುಂದಿನ 24 ಗಂಟೆಗಳಲ್ಲಿ ತೀರ್ಮಾನ ಮಾಡುವಂತೆ ಸಮೃದ್ಧಿ ಮಂಜುನಾಥ ಗಡುವು ನೀಡಿದ್ದಾರೆ.

ಪ್ರಧಾನಿ ಮೋದಿ ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ? ಪ್ರಿಯಾಂಕಾ ಗಾಂಧಿ

ಟ್ವಿಟ್‌ನಲ್ಲಿ ಏನಿದೆ?

ಇತ್ತೀಚಿನ  ದಿನಗಳಲ್ಲಿ ಹಾಸನದ ಲೀಲೆಗಳು ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ  ರಾಜ್ಯದಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೆ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದೆ. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿಗೆ ಶಾಸಕನಾಗಿರುವ ನನಗೆ ಬಂದಿದೆ. ನನಗೇ ಈ ಕಷ್ಟಕರ ಸನ್ನಿವೇಶಗಳು ಎದುರಾಗುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿಯಾದರೇನು ಯೋಚಿಸಿ?

Prajwal Revanna: ಮಗನ ಪೆನ್‌ಡ್ರೈವ್‌ ಬಗ್ಗೆ ಮೌನ ಮುರಿದ ರೇವಣ್ಣ: ಅಶ್ಲೀಲ ವಿಡಿಯೋ ಬಗ್ಗೆ ಹೇಳಿದ್ದೇನು..?

ಮಾನ್ಯ ವರಿಷ್ಠರು ರಾಷ್ಟ್ರಾಧ್ಯಕ್ಷರು ಶ್ರೀ ಹೆಚ್.ಡಿ.ದೇವೇಗೌಡ ಅಪ್ಪಾಜಿ ಅವರು, ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಣ್ಣ ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯವಿದಾಗಿದೆ. ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 19ಜನ ಶಾಸಕರ ಭವಿಷ್ಯ ಬೇಕೋ, ತಮ್ಮ ಕುಟುಂಬದ ರೇವಣ್ಣರವರು ಪ್ರಜ್ವಲ್ ರವರು ಮುಖ್ಯವೋ ತೀರ್ಮಾನಿಸಬೇಕಿದೆ. 24ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನ ಉಳಿಸಿ ಕಾರ್ಯಕರ್ತರನ್ನು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

Follow Us:
Download App:
  • android
  • ios