Asianet Suvarna News Asianet Suvarna News

12 ಪ್ರಯತ್ನದ ಬಳಿಕವೂ ಕ್ಲಿಯರ್‌ ಆಗದ ಯುಪಿಎಸ್‌ಸಿ, 'ಜೀವನದ ಮತ್ತೊಂದು ಹೆಸರೇ ಸಂಘರ್ಷ..' ಎಂದು ಟ್ವೀಟ್‌!

ಯುಪಿಎಸ್‌ಸಿ ಫಲಿತಾಂಶ ಮಂಗಳವಾರ ಘೋಷಣೆಯಾಗಿದೆ. ಒಂದೆಡೆ ಪರೀಕ್ಷೆ ಪಾಸ್‌ ಆದ ಆಕಾಂಕ್ಷಿಗಳ ಸಂಭ್ರಮ ಮನೆ ಮಾಡಿದ್ದರೆ, ಇನ್ನೊಂದೆಡೆ ಈ ಬಾರಿಯ ಪರೀಕ್ಷೆಯಲ್ಲಿ ಸೆಲಕ್ಷನ್‌ ಆಗಲು ವಿಫಲವಾಗಿದ್ದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

Kunal Virulkar Viral Tweet After UPSC Results 12 attempt no Selection san
Author
First Published Apr 16, 2024, 5:26 PM IST

ಬೆಂಗಳೂರು (ಏ.16): ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮೀಷನ್‌ನ ಫಲಿತಾಂಶಗಳು ಮಂಗಳವಾರ ಘೋಷಣೆಯಾಗಿದೆ. ಲಖನೌನ ಆದಿತ್ಯ ಶ್ರೀವಾತ್ಸವ ಆಲ್‌ ಇಂಡಿಯಾ ನಂ.1 ಶ್ರೇಯಾಂಕ ಪಡೆದುಕೊಂಡಿದ್ದಾರೆ. ಟಾಪ್‌ 5 ಸ್ಥಾನ ಪಡೆದವರ ಪೈಕಿ ಮೂವರು ಈಗಾಗಲೇ ಐಪಿಎಸ್‌ ಅಧಿಕಾರಿಯಾಗಿ ಸೆಲೆಕ್ಟ್‌ ಆದವರಾಗಿದ್ದಾರೆ. 2013ರ ಬಳಿಕ ಇದೇ ಮೊದಲ ಬಾರಿಗೆ ಐಪಿಎಸ್‌ ಆಗಿರುವ ವ್ಯಕ್ತಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಿದ್ದಾರೆ. ಒಂದೆಡೆ ಪರೀಕ್ಷೆ ಕ್ಲಿಯರ್‌ ಮಾಡಿರುವ ಆಕಾಂಕ್ಷಿಗಳ ಸಂಭ್ರಮ ಮುಗಿಲು ಮುಟ್ಟಿದ್ದರೆ, ಇನ್ನೊಂದೆಡೆ ಸೆಲೆಕ್ಷನ್‌ ಆದ 1016 ಮಂದಿಯಲ್ಲಿ ಸ್ಥಾನಪಡೆಯಲು ವಿಫಲರಾಗಿರುವ ವ್ಯಕ್ತಿಗಳು ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಕೃಣಾಲ್ ಆರ್‌ ವಿರುಲ್ಕರ್‌ ಈ ಬಾರಿಯೂ ಸೆಲೆಕ್ಷನ್‌ ಆಗಲು ವಿಫಲವಾಗಿದ್ದಾರೆ. ಇದು ಅವರ 12ನೇ ಪ್ರಯತ್ನವಾಗಿತ್ತು ಎಂದೂ ಹೇಳಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯ ಸಂಘರ್ಷವನ್ನು ಬರೆದುಕೊಂಡಿರುವ ಕೃಣಾಲ್‌ ಆರ್‌ ವಿರುಲ್ಕರ್‌, '12 ಪ್ರಯತ್ನ, 7 ಮೇನ್ಸ್‌, 5 ಸಂದರ್ಶನ. ಆದ್ರೂ ಸೆಲೆಕ್ಷನ್‌ ಇಲ್ಲ' ಎಂದು ವಿರುಲ್ಕರ್‌ ಬರೆದುಕೊಮಡಿದ್ದಾರೆ. ಅದರೊಂದಿಗೆ ದೆಹಲಿಯ ಯುಪಿಎಸ್‌ಸಿ ಕೇಂದ್ರ ಕಚೇರಿಯ ಹೊರಗಡೆ ತೆಗೆಸಿಕೊಂಡಿರುವ ತಮ್ಮ ಚಿತ್ರವನ್ನೂ ಅದರಲ್ಲಿ ಪೋಸ್ಟ್‌ ಮಾಡಿದ್ದಾರೆ. ಯುಪಿಎಸ್‌ಸಿ ಸಿಎಸ್‌ಇ ಮೆಂಟರ್‌ ಆಗಿರುವುದಾಗಿ ಬರೆದುಕೊಂಡಿರುವ ವಿರುಲ್ಕರ್‌, ಬಹುಶಃ ಜೀವನದ ಇನ್ನೊಂದು ಹೆಸರೇ ಸಂಘರ್ಷ' ಎಂದು ಅವರು ವಿಷಾದವಾಗಿ ಬರೆದುಕೊಂಡಿದ್ದಾರೆ.

ಪ್ರತಿವರ್ಷ ಯುಪಿಎಸ್‌ಸಿ ಫಲಿತಾಂಶ ಬಂದಾಗ ಯಶಸ್ಸಿನ ಕಥೆಗಳು ಸಾಲುಸಾಲಾಗಿ ಬರುತ್ತವೆ. ಪರೀಕ್ಷೆ ಕ್ಲಿಯರ್‌ ಮಾಡಿದ ವ್ಯಕ್ತಿಗಳು ಐಎಎಸ್‌ ಆಗಿ ಮುಂದುವರಿಯುತ್ತಾರೆ. ಆದರೆ ಅನೇಕ ಪ್ರಯತ್ನಗಳ ಹೊರತಾಗಿಯೂ, ಸಣ್ಣ ಅಂತರದಿಂದ ಆಯ್ಕೆಯಿಂದ ವಂಚಿತರಾದ ಕಥೆಗಳಿಗೆ ಕೃಣಾಲ್‌ ವಿರುಲ್ಕರ್‌ ಸೇರಿದ್ದಾರೆ. ಕೃಣಾಲ್‌ ಹಲವು ಬಾರಿ ಸೆಲೆಕ್ಷನ್‌ ಆಗುವ ತೀರಾ ಸನಿಹ ಬಂದಿದ್ದರು. ಆದರೆ,ಅದೃಷ್ಟ ಕೈಕೊಟ್ಟಿದ್ದರಿಂದ ಐಎಎಸ್‌ ಆಗುವ ಅವರ ಕನಸು ಕನಸಾಗಿಯೇ ಉಳಿದಿತ್ತು. ಈ ವರ್ಷವೂ ಕೃಣಾಲ್‌ ವಿರುಲ್ಕರ್‌ ಸಂದರ್ಶನ ಸುತ್ತಿನವರೆಗೂ ಆಯ್ಕೆಯಾಗಿದ್ದರು. ಆದರೆ, ಸೆಲೆಕ್ಷನ್‌ ಆಗಲು ವಿಫಲರಾಗಿದ್ದಾರೆ.

ಇನ್ನು ಕೃಣಾಲ್‌ ವಿರುಲ್ಕರ್‌ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದೆ. 'ಸರ್‌ ನೀವು ಮಾಡಿರುವ ತಪ್ಪುಗಳ ಬಗ್ಗೆ ನಮಗೆ ತಿಳಿಸಿದೆ. ಸಂದರ್ಶನಕ್ಕೆ ಪ್ರತಿ ಬಾರಿ ಹಾಜರಾದಾಗಲೂ ನೀವು ಸೆಲೆಕ್ಷನ್‌ ಆಗಲು ವಿಫಲವಾಗಿರುವುದರ ಹಿಂದಿನ ಕಾರಣವೇನು ಅನ್ನೋದನ್ನು ತಿಳಿಸಿ. ನಮ್ಮ ಪಾಲಿಗೆ ನೀವೇ ಯುಪಿಎಸ್‌ಸಿ ಟಾಪರ್‌' ಎಂದು ಟ್ವೀಟ್‌ ಮಾಡಿದ್ದಾರೆ. ನನ್ನ ಪ್ರಕಾರ ಐದು ಸಂದರ್ಶನದ ಬಳಿಕವೂ ನೀವು ಸೆಲೆಕ್ಟ್‌ ಆಗಿಲ್ಲ ಎಂದರೆ, ಅದು ನಿಮ್ಮ ಮಿಸ್ಟೇಕ್‌ ಅಲ್ಲವೇ ಅಲ್ಲ. ಅದೃಷ್ಟ ನಿಮ್ಮ ಕೈಹಿಡಿಯಲಿಲ್ಲವಷ್ಟೇ ಎಂದು ಬರೆದಿದ್ದಾರೆ.

ಇನ್ನೂ ಕೆಲವರು ಕೃಣಾಲ್‌ ವಿರುಲ್ಕರ್‌ ಅವರ 12 ಪ್ರಯತ್ನಗಳ ಬಗ್ಗೆಯೇ ಚಕಾರವೆತ್ತಿದ್ದಾರೆ. ಮೀಸಲಾತಿ ಇರೋ ಕಾರಣಕ್ಕೆ 12 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೀರಿ. ಆದರೆ, ಜನರಲ್‌ ಕೆಟಗರಿಯಲ್ಲಿ ನೋಡಿ ಬರೀ 6 ಪ್ರಯತ್ನಗಳು. ಇದೇ ಕಾರಣಕ್ಕೆ ನಾವು ಮೀಸಲಾತಿಯನ್ನು ಕೊನೆ ಮಾಡ್ಬೇಕು ಅಂತಾ ಹೇಳೋದು ಎಂದಿದ್ದಾರೆ. ನೀವು ತುಂಬಾ ಪಾಸಿಟಿವ್‌ ವ್ಯಕ್ತಿ. ಸೆಲೆಕ್ಷನ್‌ ಆಗದೇ ಇದ್ರೆ ಏನೆಂತೆ, ನೀವು ತುಂಬಾ ವ್ಯಕ್ತಿಗಳಿಗೆ ಪ್ರೇರಣೆ ಆಗಿದ್ದೀರಿ ಎಂದು ಕೃಣಾಲ್‌ ಟ್ವಟ್‌ಗೆ ಪ್ರತಿಕ್ರಿಯಿಸಿದ್ದಾರೆ.

UPSC Civil Services Exam Result 2023: ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್

ಕೃಣಾಲ್‌ ಅವರ ಟ್ವೀಟ್‌ಗೆ ಈವರೆಗೂ 1 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಬಂದಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಇವರ ಪೋಸ್ಟ್‌ಅನ್ನು ರೀಟ್ವೀಟ್‌ ಮಾಡಿದ್ದಾರೆ. 14 ಸಾವಿರ ಮಂದಿ ಲೈಕ್‌ ಒತ್ತಿದ್ದರೆ, 71 ಲಕ್ಷ ಮಂದಿ ಈ ಪೋಸ್ಟ್‌ಅನ್ನು ನೋಡಿದ್ದಾರೆ.

ಭಾರತದ ಅತೀ ಕಿರಿಯ ಐಎಎಸ್‌ ಅಧಿಕಾರಿ, 24 ವರ್ಷದಲ್ಲಿ ಎರಡು ಬಾರಿ UPSC ಎಕ್ಸಾಂ ಪಾಸ್ ಮಾಡಿದ ಐಶ್ವರ್ಯಾ!

Follow Us:
Download App:
  • android
  • ios