Asianet Suvarna News Asianet Suvarna News

ಸೆಲ್ಫ್ ಡ್ರೈವ್ ಕಾರ್ ಕೇಳಿದ್ರಿ, ಈಗ ಬಂತು ನೋಡಿ ಸೆಲ್ಫ್ ಡ್ರೈವ್ ಟ್ರಕ್

ಸ್ವೀಡನ್ ಮೂಲಕದ ಸಾಫ್ಟವೇರ್ ಕಂಪನಿ ಒಟ್ಟೋ, ಅಮೇರಿಕಾದ ದೈತ್ಯ ವಾಹನ ತಯಾರಿಕ ಕಂಪನಿ ವೋಲ್ವೋ ಜೊತೆಗೂಡಿ ಚಾಲಕ ರಹಿತ ಬೃಹತ್ ಟ್ರಕ್ ನನ್ನು ಅಭಿವೃದ್ಧಿಪಡಿಸಿದ್ದು, ಈ ಟ್ರಕ್ ಈಗಾಗಲೇ ಪರೀಕ್ಷಾರ್ಥವಾಗಿ ಅಮೇರಿಕಾದ ಫೋರ್ಟ ಕಾಲಿನ್ಸ್ ನಿಂದ ಕೊಲೆರ್ಯಾಡೋ ಸ್ಪ್ರಿಂಗ್ ಎಂಬ ಸ್ಥಳದವರೆಗೂ ಯಾವುದೇ ಅಡೆ-ತಡೆಯಲ್ಲದೇ ಸುರಕ್ಷಿತವಾಗಿ ತಲುಪಿಸಿ ದಾಖಲೆ ನಿರ್ಮಿಸಿದೆ.

Self Driving Trucks First Mission

ಕ್ಯಾಲಿಫೋರ್ನಿಯ(ಅ.26): ದಿನ ಕಳೆದಂತೆ ತಂತ್ರಜ್ಞಾನದ ಅವಶ್ಯಕತೆ ಮತ್ತು ಅವಲಂಬನೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸ್ವಯಂ ಚಾಲಿತ ಕಾರುಗಳು ಈಗಾಗಲೇ ರಸ್ತೆಗೆ ಇಳಿದಿವೆ. ಇದರಿಂದ ಈಗಾಗಲೇ ಲಕ್ಷಾಂತರ ಚಾಲಕರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಈಗ ಸ್ವೀಡನ್ ಮೂಲಕದ ಕಂಪನಿಯೊಂದು ಸ್ವಯಂ ಚಾಲಿತ ಟ್ರಕ್'ನ ಆವಿಷ್ಕರಿಸಿದ್ದು, ಈ ಟ್ರಕ್ ಪರೀಕ್ಷಾರ್ಥ ಪ್ರಯಾಣವನ್ನು ಯಶಸ್ವಿಗೊಳಿಸಿದೆ.

ಸ್ವೀಡನ್ ಮೂಲಕದ ಸಾಫ್ಟವೇರ್ ಕಂಪನಿ ಒಟ್ಟೋ, ಅಮೇರಿಕಾದ ದೈತ್ಯ ವಾಹನ ತಯಾರಿಕ ಕಂಪನಿ ವೋಲ್ವೋ ಜೊತೆಗೂಡಿ ಚಾಲಕ ರಹಿತ ಬೃಹತ್ ಟ್ರಕ್ ನನ್ನು ಅಭಿವೃದ್ಧಿಪಡಿಸಿದ್ದು, ಈ ಟ್ರಕ್ ಈಗಾಗಲೇ ಪರೀಕ್ಷಾರ್ಥವಾಗಿ ಅಮೇರಿಕಾದ ಫೋರ್ಟ ಕಾಲಿನ್ಸ್ ನಿಂದ ಕೊಲೆರ್ಯಾಡೋ ಸ್ಪ್ರಿಂಗ್ ಎಂಬ ಸ್ಥಳದವರೆಗೂ ಯಾವುದೇ ಅಡೆ-ತಡೆಯಲ್ಲದೇ ಸುರಕ್ಷಿತವಾಗಿ ತಲುಪಿಸಿ ದಾಖಲೆ ನಿರ್ಮಿಸಿದೆ.

ಅಂದ ಹಾಗೇ ಈ ಟ್ರಕ್ ಖಾಲಿಯಾಗಿ ಪ್ರಯಾಣ ಬೆಳಸಿಲ್ಲ, ಬದಲಾಗಿ ಸುಮಾರು 51,744 ಬೀಯರ್ ಬಾಟಲಿಗಳನ್ನು ಹೊತ್ತು ಸಂಚಾರ ದಟ್ಟನೆ ಇರುವ ದಾರಿಯಲ್ಲಿ 220 ಕಿಮಿ ಕ್ರಮಿಸಿದೆ, ಯಶಸ್ವಿ ಪ್ರಯಾಣದ ಮೂಲಕ ವಿಶ್ವದ ಮೊಟ್ಟ ಮೊದಲ ಚಾಲನಾರಹಿತ ಟ್ರಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ. 

ಈ ಟ್ರಕ್'ನ ಪರೀಕ್ಷಾರ್ಥ ಪ್ರಯಾಣ ಯಶಸ್ವಿಯಾದ ಹಿನ್ನಲೆಯಲ್ಲಿ ಅಮೇರಿಕಾದ ಐವತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಟ್ರಕ್ ಚಾಲಕರ ಕೆಲಸಕ್ಕೆ ಕತ್ತರಿ ಬಿಳುವ ಸಾಧ್ಯತೆ ಇದೆ. ಈಗಾಗಲೇ ಗೂಗಲ್,  ಆಪಲ್ ಮತ್ತು ಟೆಸ್ಲಾ ಕಂಪನಿಗಳು ಚಾಲಕ ರಹಿತ ಸೇವೆ ಒದಗಿಸಲು ಪೈಪೋಟಿ ನಡೆಸುತ್ತಿವೆ. 
 
Follow Us:
Download App:
  • android
  • ios