Asianet Suvarna News Asianet Suvarna News

ಸಿಂಧು, ಗಂಗಾ, ಬ್ರಹ್ಮಪುತ್ರ ನದಿಗಳಿಗೆ ಅಪಾಯ; ಹಿಮಾಲಯದ ಹಿಮನದಿಗಳ ಬಗ್ಗೆ ದೊಡ್ಡ ಎಚ್ಚರಿಕೆ ನೀಡಿದ ಇಸ್ರೋ!

ಹಿಮಾಲಯದಲ್ಲಿ 2431 ಗ್ಲೇಶಿಯಲ್ ಸರೋವರಗಳಿವೆ. ಈ ಪೈಕಿ 676 ಕೆರೆಗಳ ಗಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಇವುಗಳಲ್ಲಿ 130 ಭಾರತೀಯ ಭೂಪ್ರದೇಶದಲ್ಲಿವೆ.ಈ ಸರೋವರಗಳು ನಿರಂತರವಾಗಿ ಕುಸಿಯುವ ಅಪಾಯವಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಹಿಮನದಿ ಸರೋವರಗಳು ಅಪಾಯದಲ್ಲಿದೆ ಎಂದು ಇಸ್ರೋದ ಹೊಸ ವರದಿ ಬಹಿರಂಗಪಡಿಸಿದೆ.
 

ISRO big revelation regarding Himalaya icy lakes Trouble over Indus Ganga and Brahmaputra san
Author
First Published Apr 22, 2024, 10:19 PM IST

ನವದೆಹಲಿ (ಏ.22):  ಹಿಮಾಲಯ ಪರ್ವತಗಳನ್ನು ವಿಶ್ವದ ಮೂರನೇ ಧ್ರುವ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ದೊಡ್ಡ ಪ್ರಮಾಣದಲ್ಲಿಇಲ್ಲಿರುವ ಹಿಮನದಿಗಳ ಉಪಸ್ಥಿತಿ. ಮತ್ತು ಸಾಕಷ್ಟು ಹಿಮ. ಆದರೆ ಜಾಗತಿಕ ತಾಪಮಾನದಿಂದ ಈ ಪ್ರದೇಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹಿಮ ಕರಗುತ್ತಿದೆ. ಹಿಮನದಿಗಳು ಕುಗ್ಗುತ್ತಿವೆ. ಹಿಮನದಿಗಳ ಕುಗ್ಗುವಿಕೆ ಎಂದರೆ ಮಂಜುಗಡ್ಡೆಯ ತ್ವರಿತ ಕರಗುವಿಕೆ ಎಂದರ್ಥ. ಅಂದರೆ, ಪರ್ವತಗಳಿಂದ ಹರಿದು ಬರುವ ನೀರು ಎಲ್ಲೆಲ್ಲಿ ಶೇಖರಣೆಯಾಗುತ್ತದೆಯೋ ಅಲ್ಲಿ ಹಿಮದ ಸರೋವರಗಳು ರೂಪುಗೊಳ್ಳುತ್ತವೆ. ನೀರಿನ ಸೇರ್ಪಡೆಯಿಂದಾಗಿ, ಹಿಮಾಲಯದ ಹಳೆಯ ಗ್ಲೇಶಿಯಲ್ ಸರೋವರಗಳ ಗಾತ್ರವೂ ಹೆಚ್ಚಾಗುತ್ತದೆ. ಈ ಹಿಮನದಿಗಳು ಮತ್ತು ಮಂಜುಗಡ್ಡೆಗಳು ಭಾರತದ ನದಿಗಳ ಮೂಲವಾಗಿದೆ. ಆದರೆ ಈ ಹಿಮಾವೃತ ಸರೋವರಗಳು ಅಪಾಯಕಾರಿಯೂ ಹೌದು.

ಈ ಗ್ಲೇಶಿಯಲ್ ಸರೋವರಗಳು ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್ಸ್ (GLOFS) ಅಪಾಯವನ್ನುಂಟುಮಾಡುತ್ತವೆ. ಕೇದಾರನಾಥ, ಚಮೋಲಿ ಮತ್ತು ಸಿಕ್ಕಿಂನಲ್ಲಿ ಅಪಘಾತಗಳು ಈಗಾಗಲೇ ಇಂಥ ಅಪಘಾತಗಳು ಆಗಿವೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಪ್ರವಾಹ ಮತ್ತು ಭೂಕುಸಿತದ ಭೀತಿ ಎದುರಿಸುತ್ತಿದ್ದಾರೆ. ಗ್ಲೇಶಿಯಲ್ ಸರೋವರಗಳ ಮೇಲೆ ಭಾರವಾದ ವಸ್ತು ಬಿದ್ದಾಗ ಒಡೆದುಹೋಗುತ್ತವೆ ಅಥವಾ ನೀರಿನ ಪ್ರಮಾಣ ಹೆಚ್ಚಾದಾಗ ಅವುಗಳ ಗೋಡೆಗಳು ಬಿರುಕುಬಿಡುತ್ತದೆ.

ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟಿದೆ ಇಸ್ರೋ: ಉಪಗ್ರಹಗಳ ಮೂಲಕ, ರಚನೆಯಾಗುತ್ತಿರುವ ಹೊಸ ಸರೋವರಗಳ ಮೇಲೆ ಹಾಗೂ ಹಳೆಯ ಸರೋವರಗಳ ಹೆಚ್ಚುತ್ತಿರುವ ಗಾತ್ರದ ಮೇಲೆ ಇಸ್ರೋ ಕಟ್ಟಿಟ್ಟಿದೆ. ಇದರಿಂದ ಅಪಾಯಕಾರಿ ಗ್ಲೇಶಿಯಲ್ ಸರೋವರ ಒಡೆದು ಹೋಗುವ ಮುನ್ನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಸಾಧ್ಯವಾಗಲಿದೆ. ಹಿಮಾಲಯದಲ್ಲಿರುವ ಗ್ಲೇಶಿಯಲ್ ಸರೋವರಗಳ ಬಗ್ಗೆ ಭಾರತವು 3-4 ದಶಕಗಳ ಡೇಟಾವನ್ನು ಹೊಂದಿದೆ.

ನಾವು 1984 ರಿಂದ 2023 ರವರೆಗಿನ ಡೇಟಾವನ್ನು ನೋಡೋದಾದರೆ, ಹಿಮಾಲಯದಲ್ಲಿ 2431 ಸರೋವರಗಳಿವೆ, ಅವುಗಳು 10 ಹೆಕ್ಟೇರ್ಗಿಂತ ದೊಡ್ಡದಾಗಿದೆ. ಆದರೆ 1984 ರಿಂದ ಇಲ್ಲಿಯವರೆಗೆ 676 ಕೆರೆಗಳಿದ್ದು, ಅವುಗಳ ವಿಸ್ತೀರ್ಣ ಹೆಚ್ಚಾಗುತ್ತಿದೆ. ಇವುಗಳಲ್ಲಿ 130 ಭಾರತದಲ್ಲಿವೆ. ಸಿಂಧೂ ನದಿಯಲ್ಲಿ 65, ಗಂಗಾನದಿಯಲ್ಲಿ ಏಳು ಮತ್ತು ಬ್ರಹ್ಮಪುತ್ರದಲ್ಲಿ 58 ಗ್ಲೇಶಿಯಲ್ ಸರೋವರಗಳು ರೂಪುಗೊಂಡಿವೆ.

ಈ 676 ಸರೋವರಗಳಲ್ಲಿ, 601 ಎರಡು ಪಟ್ಟು ಹೆಚ್ಚು ಗಾತ್ರದಲ್ಲಿ ವಿಸ್ತರಿಸಿದೆ. ಆದರೆ 10 ಕೆರೆಗಳು ಒಂದೂವರೆ ಪಟ್ಟು ವಿಸ್ತೀರ್ಣವಾಗಿದೆ. 65 ಕೆರೆಗಳಿದ್ದು, ಒಂದೂವರೆ ಪಟ್ಟು ಹೆಚ್ಚಾಗಿದೆ. ನಾವು ಈ ಸರೋವರಗಳ ಎತ್ತರದ ಬಗ್ಗೆ ಮಾತನಾಡೋದಾದರೆ, 314 ಸರೋವರಗಳು 4 ರಿಂದ 5 ಸಾವಿರ ಮೀಟರ್ (13 ರಿಂದ 16 ಸಾವಿರ ಅಡಿ) ಎತ್ತರದಲ್ಲಿವೆ. ಆದರೆ 296 ಗ್ಲೇಶಿಯಲ್ ಸರೋವರಗಳು 5 ಸಾವಿರ ಮೀಟರ್‌ಗಿಂತ ಹೆಚ್ಚಿವೆ. ಈ ಸರೋವರಗಳನ್ನು ನಾಲ್ಕು ವಿಭಿನ್ನ ವರ್ಗಗಳಾಗಿ ವಿಂಗಡಿಸಲಾಗಿದೆ. ಮೊರೇನ್ ಅಣೆಕಟ್ಟು ಎಂದರೆ ನೀರಿನ ಸುತ್ತ ಕಸದ ಗೋಡೆ. ಐಸ್ ಡ್ಯಾಮ್ ಎಂದರೆ ನೀರಿನ ಸುತ್ತಲಿನ ಮಂಜುಗಡ್ಡೆಯ ಗೋಡೆ, ಸವೆತ ಎಂದರೆ ಮಣ್ಣಿನ ಸವೆತ, ಸರೋವರಗಳಿಂದ ರೂಪುಗೊಂಡ ಹಳ್ಳದಲ್ಲಿ ಸಂಗ್ರಹವಾದ ಹಿಮನದಿಯ ನೀರು, ಮತ್ತು ಇತರ ಹಿಮನದಿ.

ISRO big revelation regarding Himalaya icy lakes Trouble over Indus Ganga and Brahmaputra san

ಬಾಹ್ಯಾಕಾಶದಿಂದ ಮನೆಯ ಮೇಲೆ ಬಿದ್ದ ಲೋಹದ ಕಸ, ಸ್ಪೇಸ್‌ ಸ್ಟೇಷನ್‌ನ ವಸ್ತು ಎಂದ ನಾಸಾ!

ಈ 676 ಸರೋವರಗಳಲ್ಲಿ 307 ಮೊರೆನ್ ಅಣೆಕಟ್ಟು, 265 ಸವೆತ ಮತ್ತು 8 ಮಂಜುಗಡ್ಡೆಯ ಗ್ಲೇಶಿಯಲ್ ಸರೋವರಗಳಾಗಿವೆ. ಸಿಂಧೂ ನದಿಯ ಮೇಲೆ ನಿರ್ಮಿಸಲಾದ ಘೆಪಾಂಗ್ ಘಾಟ್ ಗ್ಲೇಶಿಯಲ್ ಸರೋವರದ ಎತ್ತರ 4068 ಮೀಟರ್. ಇದು ಹಿಮಾಚಲ ಪ್ರದೇಶದಲ್ಲಿದೆ. ಇದರ ಗಾತ್ರವು 178 ಪ್ರತಿಶತದಷ್ಟು ಹೆಚ್ಚಾಗಿದೆ. ಅಂದರೆ ಮೊದಲು 36.40 ಹೆಕ್ಟೇರ್‌ನಲ್ಲಿದ್ದು, ಈಗ 101.30 ಹೆಕ್ಟೇರ್‌ಗೆ ಏರಿಕೆಯಾಗಿದೆ. ಇದು ಪ್ರತಿ ವರ್ಷ 1.96 ಹೆಕ್ಟೇರ್‌ಗಳಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.

ಭೂಮಿಯ ಮೊದಲ ಚಿತ್ರ ಸೆರೆಹಿಡಿದ ಇಸ್ರೋದ ಇನ್ಸಾಟ್‌-3ಡಿಎಸ್‌: ಅದ್ಭುತವಾಗಿ ಕಂಡ ಭಾರತ!

ISRO big revelation regarding Himalaya icy lakes Trouble over Indus Ganga and Brahmaputra san

Follow Us:
Download App:
  • android
  • ios