ದಿನಕ್ಕೆ 2ಜಿಬಿ ಇಂಟರ್ನೆಟ್; ಎಷ್ಟು ಬೇಕಾದರೂ ಕಾಲ್ ಮಾಡಿ; ಡೇಟಾ ವಾರ್'ಗೆ ಇಳಿದ ಬಿಎಸ್ಸೆನ್ನೆಲ್
technology
By Suvarna Web Desk | 07:54 PM Friday, 17 March 2017

ದಿನಕ್ಕೆ 2 ಜಿಬಿ ಡೇಟಾ ಕೊಡುವ ಬಿಎಸ್ಸೆನ್ನೆಲ್'ನ ನಿರ್ಧಾರ ನಿಜಕ್ಕೂ ಇಲ್ಲಿ ಮಾಸ್ಟರ್'ಸ್ಟ್ರೋಕ್. ರಿಲಾಯನ್ಸ್ ಜಿಯೋ ಕೂಡ ಇಂಥ ಆಫರ್ ಕೊಟ್ಟಿಲ್ಲ.

ನವದೆಹಲಿ(ಮಾ. 17): ರಿಲಾಯನ್ಸ್ ಜಿಯೋಗೆ ಸೆಡ್ಡು ಹೊಡೆಯುವ ಸ್ಪರ್ಧೆಗೆ ಬಿಎಸ್ಸೆನ್ನೆಲ್ ಕೂಡ ಧುಮುಕಿದೆ. ತನ್ನ ಗ್ರಾಹಕರು ಬೇರೆಡೆ ವಲಸೆ ಹೋಗದಿರಲು ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಹೊಸ ಆಫರ್ ಕೊಟ್ಟಿದೆ. ಅದರಂತೆ 339 ರೂಪಾಯಿ ರೀಚಾರ್ಜ್ ಮಾಡಿಸಿದರೆ 28 ದಿನಗಳ ಕಾಲ ದಿನನಿತ್ಯ 2ಜಿಬಿ 3G ಡೇಟಾ ನೀಡುತ್ತದೆ. ಜೊತೆಗೆ, ಬಿಎಸ್ಸೆನ್ನೆಲ್ ನೆಟ್ವರ್ಕ್'ನ ಮೊಬೈಲ್'ಗೆ ಎಷ್ಟು ಬೇಕಾದರೂ ಕರೆ ಮಾಡಿ ಮಾತನಾಡಬಹುದು. ಅನ್'ಲಿಮಿಟೆಡ್ ಕಾಲ್'ನ ಆಫರ್ ಕೊಟ್ಟಿದೆ. ಈ 339 ರೂಪಾಯಿ ಪ್ಲಾನ್'ನ ಕಾಲಾವಧಿ 90 ದಿನ ಮಾತ್ರ.

ಆದರೆ, ದಿನಕ್ಕೆ 2 ಜಿಬಿ ಡೇಟಾ ಕೊಡುವ ಬಿಎಸ್ಸೆನ್ನೆಲ್'ನ ನಿರ್ಧಾರ ನಿಜಕ್ಕೂ ಇಲ್ಲಿ ಮಾಸ್ಟರ್'ಸ್ಟ್ರೋಕ್. ರಿಲಾಯನ್ಸ್ ಜಿಯೋ ಕೂಡ ಇಂಥ ಆಫರ್ ಕೊಟ್ಟಿಲ್ಲ. ಜಿಯೋ ದಿನಕ್ಕೆ 1ಜಿಬಿ ಡೇಟಾ ಕೊಡುತ್ತಿದೆ.

(ಮಾಹಿತಿ: ಪಿಟಿಐ ಸುದ್ದಿಸಂಸ್ಥೆ)

Show Full Article
COMMENTS

Currently displaying comments and replies