ಗ್ರಾಹಕರಿಗೆ ಮತ್ತೊಂದು ಉಚಿತ ಕೊಡುಗೆ ನೀಡಿದ ಜಿಯೋ
technology
By Suvarna Web Desk | 04:14 PM Monday, 13 February 2017

ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿರುವ ರಿಲಾಯನ್ಸ್ ಜಿಯೋ ಈಗ ಮತ್ತೊಂದು ಉಚಿತ ಕೊಡುಗೆ ನೀಡಲು ಮುಂದಾಗಿದೆ.

ಬೆಂಗಳೂರು(ಫೆ.13): ಕೊಟ್ಯಂತರ ಗ್ರಾಹಕರಿಗೆ 6 ತಿಂಗಳುಗಳ ಕಾಲ ಉಚಿತ ಡಾಟ, ಕರೆ ಹಾಗೂ ಎಸ್ಎಂಎಸ್ ಸೇವೆ ನೀಡಿ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿರುವ ರಿಲಾಯನ್ಸ್ ಜಿಯೋ ಈಗ ಮತ್ತೊಂದು ಉಚಿತ ಕೊಡುಗೆ ನೀಡಲು ಮುಂದಾಗಿದೆ. ಮೈ ಜಿಯೋ ಆ್ಯಪ್'ನಲ್ಲಿರುವ ಜಿಯೋ ಸಿನಿಮಾ ಅಪ್ಲಿಕೇಷನ್'ನಲ್ಲಿ ಗ್ರಾಹಕರು ಇನ್ನು ಮುಂದೆ 1 ಜಿಬಿ ತನಕ 4ಜಿ ವೇಗದಲ್ಲಿ ಸಿನಿಮಾಗಳನ್ನು ಡೌನ್'ಲೋಡ್ ಮಾಡಿಕೊಳ್ಳಬಹುದು.ಇದಕ್ಕಾಗಿ ಆ್ಯಪ್'ನಲ್ಲಿ ನೂತನ ಫೀಚರ್ ಅಪ್'ಲೋಡ್ ಮಾಡಲಾಗಿದ್ದು ಚಿತ್ರದ ವೀಕ್ಷಣೆ ಜೊತೆಗೆ ಡೌನ್'ಲೋಡ್ ಮಾಡಿಕೊಳ್ಳಬಹುದು.

1 ಜಿಬಿ ತನಕ ಉಚಿತವಾಗಿ ಡೌನ್'ಲೋಡ್ ಆದ ನಂತರ ಸ್ಪೀಡ್ ಲಿಮಿಟ್ ಕಡಿಮೆಯಾಗುತ್ತದೆ. ಒಂದು ಜಿಬಿ ನಂತರವೂ ಗ್ರಾಹಕರಿಗೆ ವೇಗದ ಮಿತಿ ಅಷ್ಟೆ ಬೇಕೆಂದರೆ ಜಿಯೋ ಪ್ಯಾಕ್ ಅನ್ನು ಹಣ ಕೊಟ್ಟು ಖರೀದಿಸಬಹುದು. ಬೇರೆ ಸೇವಾ ಕಂಪನಿಗಳಿಗೆ ಹೋಲಿಸಿದರೆ ಇದಕ್ಕೆ ಕಡಿಮೆ ಖರ್ಚು ತಗುಲುತ್ತದೆ. ಈ ಯೋಜನೆ ಮಾರ್ಚ್ 31ರ ತನಕ ಲಭ್ಯ.

Show Full Article