Asianet Suvarna News Asianet Suvarna News

ತುಮಕೂರು: ದಳ’ ತೊರೆದು ‘ಕೈ’ ಸೇರ್ಪಡೆಗೊಂಡ ಮುಖಂಡರು

ತಾವು ಮತ್ತು ಬೆಂಬಲಿಗರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವುದಾಗಿ  ಕಮ್ಯುನಿಸ್ಟ್ ನಾಯಕ, ದಿವಂಗತ ಎಟ್ಟಿ ಮುತ್ಯಾಲಪ್ಪ ಪುತ್ರಿ ಪ್ರಭಾವಿ ನಾಯಕಿ ಮುತ್ಯಾಲಮ್ಮ ಹೇಳಿದರು.

Tumkur  Leaders who left  JDS and joined  Congress snr
Author
First Published Apr 25, 2024, 11:24 AM IST

ಪಾವಗಡ: ಶಾಸಕ ಎಚ್‌.ವಿ.ವೆಂಕಟೇಶ್‌ ರ ಜನಪರ ಆಡಳಿತ ಹಾಗೂ ಪಕ್ಷದ ತತ್ವ, ಸಿದ್ಧಾಂತ ದ ಹಿನ್ನೆಲೆಯಲ್ಲಿ ತಾವು ಮತ್ತು ಬೆಂಬಲಿಗರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವುದಾಗಿ ಪಟ್ಟಣದ 10ನೇ ವಾರ್ಡಿನ ಕಮ್ಯುನಿಸ್ಟ್ ನಾಯಕ, ದಿವಂಗತ ಎಟ್ಟಿ ಮುತ್ಯಾಲಪ್ಪ ಪುತ್ರಿ ಪ್ರಭಾವಿ ನಾಯಕಿ ಮುತ್ಯಾಲಮ್ಮ ಹೇಳಿದರು.

ಮಾಜಿ ಸಚಿವ ವೆಂಕಟರಮಣಪ್ಪ, ತಾಲೂಕು ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್‌ಬಾಬು ಹಾಗೂ ಮುಖಂಡರಾದ ಪಿ.ಎಚ್‌.ರಾಜೇಶ್, ರವಿ ಸಮ್ಮುಖದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಬಳಿಕ ಅವರು ಮಾತನಾಡಿದರು. ಪುರಸಭೆ ಸದಸ್ಯ ಬಾಲಸುಬ್ರಮಣ್ಯ, ಮುಖಂಡರಾದ ಪೊಟ್ಟಿ ಗೋವಿಂದಪ್ಪ, ರಾಮಾಂಜಿನಪ್ಪ, ನಗರ ಎಸ್‌ಸಿ ಘಟಕದ ಅಧ್ಯಕ್ಷ ಶ್ರೀನಿವಾಸ್ ಬಾಬು, ವೇಣು ಗೋಪಾಲ ರೆಡ್ಡಿ, ತಿರುಪತಿ, ಕಡಪಲಕೆರೆ ಮಂಜುನಾಥ್ ಹಾಗೂ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು.

ಸಿಎಂ ಆಗುವ ಆಸೆ ಬಿಚ್ಚಿಟ್ಟ ಡಿಕೆಶಿ

ಕನಕಪುರ(ಏ.25): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆ ಆಸೆ ಬಿಚ್ಚಿಟ್ಟಿದ್ದಾರೆ. ಹಾರೋಹಳ್ಳಿಯಲ್ಲಿ ಮಂಗಳವಾರವಷ್ಟೇ ಸಿಎಂ ಹುದ್ದೆ ವಿಚಾರ ಪ್ರಸ್ತಾಪಿಸಿದ್ದ ಅವರು, ಇದೀಗ ನಾನು ಮುಖ್ಯಮಂತ್ರಿ ಆಗುತ್ತೇನೆಂಬ ನಂಬಿಕೆಯಿಂದ ಮತಹಾಕಿದ್ದೀರಿ, ಈ ವಿಚಾರದಲ್ಲಿ ಯಾರೂ ಹತಾಶರಾಗಬೇಡಿ ಎಂದು ಹೇಳಿದ್ದಾರೆ.

ದೊಡ್ಡಾಲಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಕೊಟ್ಟ ಶಕ್ತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆಂಬ ನಂಬಿಕೆ ಇಟ್ಟುಕೊಂಡಿದ್ದೀರಿ, ಆದರೆ, ಪಕ್ಷ ಉಪಮುಖ್ಯಮಂತ್ರಿ ಮಾಡಿದ್ದು, ಯಾರೂ ಹತಾಶರಾಗಬೇಡಿ ಎಂದು ಹೇಳಿದ್ದಾರೆ. 

ಜನ ಏನು ಬೇಕಾದರೂ ಮಾತಾಡಲಿ; ನಾನು ಒಂದೇ ಒಂದು ರೂಪಾಯಿ ಲಂಚ ಯಾರಿಂದಲೂ ಪಡೆದಿಲ್ಲ: ಡಿಕೆ ಶಿವಕುಮಾರ

ಕಾಂಗ್ರೆಸ್ ಪಕ್ಷ ಯಾವಾಗ ಏನು ಮಾಡ ಬೇಕೋ ಅದನ್ನು ಮಾಡುತ್ತದೆ ಎಂದರು. ಐದು ವರ್ಷಕ್ಕೊಮ್ಮೆ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕನಕಪುರ ದಲ್ಲಿ ಪ್ರವಾಸ ಮಾಡಿ ಹೋಗ್ತಾರೆ. ಅವರು ಎಷ್ಟು ಸಾರಿ ಬೇಕಾದರೂ ಬಂದು ಹೋಗಲಿ, ನನ್ನದೇನೂ ಅಭ್ಯಂ ತರವಿಲ್ಲ. ನಾವು ಮಾತ್ರ ಅವರ ಂತಲ್ಲ. ಈ ತಾಲೂಕಿನ ಜನರ ಮಕ್ಕಳಾಗಿರುವ ನಮ್ಮ ಬದುಕು, ಜೀವನ, ಪಲ್ಲಕ್ಕಿ, ಕೊನೆಗೆ ಹೆಣ ಎಲ್ಲವೂ ಇದೇ ಮಣ್ಣಿನಲ್ಲಿ ಅಡಗಿದೆ ಎಂದು ತಿಳಿಸಿದರು.

ಹಾರೋಹಳ್ಳಿಯಲ್ಲಿ ಹೇಳಿದ್ದೇನು?: ನಾನು ಮುಖ್ಯಮಂತ್ರಿಯಾಗುತ್ತೇನೆಂದು ನೀವು ಮತಹಾಕಿ ಗೆಲ್ಲಿಸಿದ್ದೀರಿ. ನಿಮ್ಮ ನಂಬಿಕೆಗೆ ಮೋಸ ಆಗಲ್ಲ. ನಾನು ನಿಮ್ಮ ಸೇವೆ ಮಾಡಲಿದ್ದೇನೆ. ಡಿ.ಕೆ.ಸುರೇಶ್ ರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಹಾರೋಹಳ್ಳಿ ಚುನಾವಣಾ ಪ್ರಚಾರ ವೇಳೆ ಡಿ.ಕೆ.ಶಿವಕುಮಾ‌ರ್ ಹೇಳಿಕೊಂಡಿದ್ದರು. ನಮಗೆ ಕೆಟ್ಟ ಹೆಸರು ತರಬೇಕು, ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಬೇಕು ಎಂಬ ಉದ್ದೇಶದಿಂದ ಬಿಜೆಪಿ ಐಟಿ ದಾಳಿ ಮಾಡಿಸುತ್ತಿದೆ. ಬಿಜೆಪಿ ಹಾಗೂ ದಳದವರು ಯಾರೂ ಹಣ ಹಂಚುತ್ತಿಲ್ಲವೇ? ಅವರ ಮನೆಗಳ ಮೇಲೆ ಏಕೆ ದಾಳಿಯಾಗುತ್ತಿಲ್ಲ. ಅವರ ವಿಚಾರದಲ್ಲಿ ಐಟಿ ಅಧಿಕಾರಿಗಳು ಕಣ್ಮುಚ್ಚಿಕೂತಿದ್ದಾರೆ ಎಂದು ಕಿಡಿಕಾರಿದರು. ಯಾರ ಮನೆಗಳ ಮೇಲೆ ನಡೆಯಬೇಕು ದಾಳಿ ಎಂದು ಪಟ್ಟಿ ಮಾಡಿಕೊಂಡಿದ್ದಾರೆ. ಬೇರೆ ಕಡೆಗಳಲ್ಲಿ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕರೂ ಇದು ಡಿ.ಕೆ.ಶಿವಕುಮಾರ್‌ ಅವರ ಹಣ ವೆಂದು ಹೇಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

Follow Us:
Download App:
  • android
  • ios