Asianet Suvarna News Asianet Suvarna News

ಕಾಂಗ್ರೆಸ್‌ಗೆ ಶಾಕ್ ನೀಡಿದ ಆಯೋಗ, 2 ದಿನ ಚುನಾವಣಾ ಪ್ರಚಾರದಿಂದ ಸುರ್ಜೆವಾಲ ಬ್ಯಾನ್!

ಲೋಕಸಭಾ ಚುನಾವಣೆಯ ಸ್ಟಾರ್ ಪ್ರಚಾರಕರಾಗಿರುವ ರಂದೀಪ್ ಸಿಂಗ್ ಸುರ್ಜೆವಾಲಗೆ ಕೇಂದ್ರ ಚುನಾವಣಾ ಆಯೋಗ ಶಾಕ್ ನೀಡಿದೆ. ಬಿಜೆಪಿ ಸಂಸದೆ ಹೇಮಾಮಾಲಿನಿ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದ ಸುರ್ಜೆವಾಲಾಗೆ 2 ದಿನ ಪ್ರಚಾರದಿಂದ ಬ್ಯಾನ್ ಮಾಡಲಾಗಿದೆ.
 

Election Commission impose 2 days ban on Congress Randeep Surjewala from campaign for remarks against Hema malini km
Author
First Published Apr 16, 2024, 6:55 PM IST

ನವದೆಹಲಿ(ಏ.16) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಾಯಕರು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದರ ಪರಿಣಾಮ ಗಂಭೀರವಾಗುತ್ತಿದೆ. ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾಗೆ ಕೇಂದ್ರ ಚನಾವಣಾ ಆಯೋಗ ಶಾಕ್ ನೀಡಿದೆ. ಬಿಜೆಪಿ ಸಂಸದೆ ಹೇಮಾಮಾಲಿನಿ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದ ಸುರ್ಜೆವಾಲ ಅವರನ್ನು 2 ದಿನಗಳ ಕಾಲ ಚುನಾವಣಾ ಪ್ರಚಾರದಿಂದ ನಿರ್ಬಂಧಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗದ ಆದೇಶದ ಪ್ರಕಾರ ರಂದೀಪ್ ಸುರ್ಜೆವಾಲಾ ಮುಂದಿನ 48 ಗಂಟೆಗಳ ಕಾಲ ಪ್ರಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ. ಆಯೋಗ ನೀಡಿದ ಶಿಕ್ಷೆ ಇಂದು(ಏ.16) ಸಂಜೆ 6 ಗಂಟೆಯಿಂದ ಆರಂಭಗೊಳ್ಳಲಿದೆ. ಏಪ್ರಿಲ್ 18ರ ಸಂಜೆ 6 ಗಂಟೆ ವರೆಗೆ ಸುರ್ಜೇವಾಲಾ ಯಾವುದೇ ಪ್ರಚಾರ ಸಭೆ, ರ್ಯಾಲಿ, ಸಮಾವೇಶ, ಸಂದರ್ಶನ, ವಿಡಿಯೋ ಸಂದೇಶ, ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ 2 ದಿನಗಳ ನಿಷೇಧ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ತಂದಿದೆ. ಜೊತೆಗೆ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ.

'ನೆಕ್ಕೋಕೆ ಹೇಮಾ ಮಾಲಿನಿಯನ್ನ ಎಂಪಿ ಮಾಡಿದ್ದಾರೆ..' ಎಂದ ಸುರ್ಜೇವಾಲಾ, 'ಸೆಕ್ಸಿಸ್ಟ್‌' ಹೇಳಿಕೆಗೆ ಬಿಜೆಪಿ ಟೀಕೆ!

ಹೇಮಾ ಮಾಲಿನಿ ಕುರಿತು ರಂದೀಪ್ ಸಿಂಗ್ ಸುರ್ಜೆವಾಲ ಆಡಿದ ಕೀಳು ಮಟ್ಟದ ಹೇಳಿಕೆಯಿಂದ ಇದೀಗ ಶಿಕ್ಷೆ ಅನುಭವಿಸುಂತಾಗಿದೆ. ಜನರು ತಮ್ಮ ಶಾಸಕರು, ಸಂಸದರನ್ನು ಯಾಕೆ ಆರಿಸುತ್ತಾರೆ? ಸಾರ್ವಜನಿಕರ ಪರವಾಗಿ ಧ್ವನಿ ಎತ್ತಲ್ಲಿ, ಆವರ ಸಮಸ್ಯೆಗಳನ್ನು ಮುಟ್ಟಿಸಿ ಪರಿಹಾರ ತರಲಿ ಅನ್ನೋ ಕಾರಣಕ್ಕೆ ಆರಿಸತ್ತಾರೆ. ಆದರೆ ಹೇಮಾ ಮಾಲಿನಿ ರೀತಿ ನೆಕ್ಕುವುದಕ್ಕಲ್ಲ ಎಂದು ಕೀಳು ಮಟ್ಟದ ಹೇಳಿಕೆ ನೀಡಿದ್ದರು..  

ಈ ಹೇಳಿಕೆ ಭಾರಿ ವಿವಾದ ಸೃಷ್ಟಿಸುತ್ತಿದ್ದಂತೆ ಸುರ್ಜೆವಾಲ ಸ್ಪಷ್ಟನೆ ನೀಡಿದ್ದರು. ಹೇಳಿಕೆಯನ್ನು ಬಿಜೆಪಿ ಐಟಿ ಸೆಲ್‌ನವರು ತಿರುಚಿದ್ದಾರೆ. ಜನರು ತಮ್ಮ ಹೇಳಿಕೆಯ ಸಂಪೂರ್ಣ ವಿಡಿಯೋ ನೋಡಬೇಕು. ಮೋದಿ ಸರ್ಕಾರದ ಜನ ವಿರೋಧಿ ನೀತಿಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಗರು ಈ ರೀತಿ ಮಾಡಿದ್ದಾರೆ. ಹೇಮಾ ಮಾಲಿನಿ ಅವರು ನಟ ಧರ್ಮೇಂದ್ರ ಅವರನ್ನು ವಿವಾಹವಾಗಿದ್ದಾರೆ. ಅವರು ಹರ್ಯಾಣದ ಸೊಸೆ. ಅವರ ಬಗ್ಗೆ ಅಪಾರ ಗೌರವವಿದೆ ಎಂದು ಸುರ್ಜೇವಾಲಾ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಬದಲಾವಣೆ ಖರ್ಗೆ, ಸೋನಿಯಾ ಗಾಂಧಿಗಷ್ಟೇ ಗೊತ್ತು: ಬಿ.ಕೆ.ಹರಿಪ್ರಸಾದ್
 

Follow Us:
Download App:
  • android
  • ios