Asianet Suvarna News Asianet Suvarna News

ಟ್ರಾವಿಸ್ ಹೆಡ್ ಶತಕಕ್ಕೆ ಸುಸ್ತಾದ್ರು ಬೌಲರ್ಸ್, ಔಟ್ ಮಾಡೋಕಾಗದೆ ನೊಂದ್ರು ಆರ್‌ಸಿಬಿ ಫ್ಯಾನ್ಸ್!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಂಡರಿ ಸಿಕ್ಸರ್ ಸುರಿಮಳೆಯಾಗಿತ್ತು. ಆದರೆ ಆರ್‌ಸಿಬಿ ಅಭಿಮಾನಿಗಳಿಗೆ ಅದನ್ನು ಎಂಜಾಯ್ ಮಾಡಲು ಸಾಧ್ಯವಾಗಲಿಲ್ಲ. ಕಾರಣ ಸನ್‌ರೈಸರ್ಸ್ ಹೈದರಾಬಾದ್‌ನ ಟ್ರಾವಿಸ್ ಹೆಡ್ ಒಂದೊಂದೆ ಎಸೆತವನ್ನು ಬೌಂಡರಿ ಗೆರೆ ದಾಟಿಸುವಾಗ ಮೌನ ಆವರಿಸುತ್ತಿತ್ತು. ಈ ಅಬ್ಬರದಲ್ಲಿ ಹೆಡ್ ಸೆಂಚೂರಿ ಪೂರೈಸಿ ದಾಖಲೆ ಬರೆದರು.
 

IPL 2024 SRH Travis Head hit Century against RCB create record ckm
Author
First Published Apr 15, 2024, 8:27 PM IST

ಬೆಂಗಳೂರು(ಏ.15) ಆರ್‌ಸಿಬಿ ವಿರುದ್ಧ ಟ್ರಾವಿಸ್ ಹೆಡ್ ಅಬ್ಬರಕ್ಕೆ ಬೌಂಡರಿ ಸಿಕ್ಸರ್ ಸುರಿಮಳೆಯಾಗಿದೆ.  ಆರ್‌‌ಸಿಬಿ ಐವರು ಬೌಲರ್ಸ್ ಸತತ ಪ್ರಯತ್ನ ಪಟ್ಟರೂ ಹೆಡ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಕೇವಲ 39 ಎಸೆತದಲ್ಲಿ ಹೆಡ್ ಸೆಂಚೂರಿ ಪೂರೈಸಿ ಸಂಭ್ರಮಿಸಿದರು. ಇಷ್ಟೇ ಅಲ್ಲ ಅತೀ ವೇಗದಲ್ಲಿ ಐಪಿಎಲ್ ಶತಕ ಸಿಡಿಸಿದ ಐಪಿಎಲ್‌ನ 4ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಇತ್ತ ಆರ್‌ಸಿಬಿ ಹೈರಣಾಯಿತು. ಈಗಾಗಲೇ 5 ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ಹೈದರಾಬಾದ್ ಕೂಡ ಶಾಕ್ ನೀಡುವ ಸೂಚನೆ ನೀಡಿದೆ.

ಐಪಿಎಲ್ ಟೂರ್ನಿಯ ಅತೀ ವೇಗದ ಶತಕ ಸಾಧಕರು
ಕ್ರಿಸ್ ಗೇಲ್; 30 ಎಸೆತ vs ಪುಣೆ ವಾರಿಯರ್ಸ್(2013)
ಯೂಸುಫ್ ಪಠಾಣ್; 37 ಎಸೆತ vs ಮುಂಬೈ ಇಂಡಿಯನ್ಸ್(2010)
ಡೇವಿಡ್ ಮಿಲ್ಲರ್; 38 ಎಸೆತ vs ಆರ್‌ಸಿಬಿ(2013)
ಟ್ರಾವಿಲ್ ಹೆಡ್; 39 ಎಸೆತ vs ಆರ್‌ಸಿಬಿ(2024)
ಗಿಲ್‌ಕ್ರಿಸ್ಟ್; 42 vs ಮುಂಬೈ ಇಂಡಿಯನ್ಸ್ (2008)

ಹೆಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಹೈದರಾಬಾದ್ ತಂಡ ಬೆಂಗಳೂರಿನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಶತಕದ ಬಳಿಕ ಹೆಡ್ ಅಬ್ಬರಿಸಲಿಲ್ಲ. ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಹೆಡ್ 41 ಎಸೆತದಲ್ಲಿ 102 ರನ್ ಸಿಡಿಸಿ ಔಟಾದರು. ಹೆಡ್ 9 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ ಮಿಂಚಿದರು.

ಲ್ಯೂಕಿ ಫರ್ಗ್ಯೂಸನ್ ಎಸೆತದಲ್ಲಿ ಹೆಡ್ ವಿಕೆಟ್ ಪತನಗೊಂಡಿದೆ. ಇತ್ತ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಅಷ್ಟರಲ್ಲಾಗಲೇ ಹೈದರಾಬಾದ್ ಮೊತ್ತ ಗಗನಕ್ಕೇರಿತ್ತು. ಇತ್ತ ಹೆನ್ರಿಚ್ ಕ್ಲಾಸೆನ್ ಅಬ್ಬರ ಆರಂಭಗೊಂಡಿತು. ಹೆಡ್ ವಿಕೆಟ್ ಕಬಳಿಸಿದ ಆರ್‌ಸಿಬಿ ಬೌಲರ್‌ಗಳಿಗೆ ಕ್ಲಾಸೆನ್ ತಲೆನೋವು ಆರಂಭಗೊಂಡಿತು.

ಆರ್‌ಸಿಬಿ ಈಗಾಗಲೇ 5 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕೇವಲ 1 ಗೆಲುವು ದಾಖಲಿಸಿರುವ ಆರ್‌ಸಿಬಿ 2 ಅಂಕ ಗಳಿಸಿದೆ. ಇನ್ನು ಪ್ಲೇ ಆಫ್ ಸ್ಥಾನಕ್ಕೇರಲು ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೆ ಯಾವುದೇ ಆತಂಕವಿಲ್ಲದೆ ಸಾಗಬಹುದು. ಆದರೆ ಒಂದೊಂದೇ ಪಂದ್ಯಗಳನ್ನು ಕಳೆದುಕೊಂಡರೆ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. 

Follow Us:
Download App:
  • android
  • ios