Asianet Suvarna News Asianet Suvarna News

ಯಶ್​ ಚಿತ್ರದಲ್ಲಿ ಕರೀನಾ ಕಪೂರ್​ ನಟಿಸ್ತಿರೋದು ನಿಜನಾ? ಕೊನೆಗೂ ನಟಿಯಿಂದ ಬಂದಿದೆ ಈ ಉತ್ತರ...

ರಾಕಿಂಗ್​ ಸ್ಟಾರ್​ ಯಶ್​ ಜೊತೆ ಟಾಕ್ಸಿಕ್​ನಲ್ಲಿ ಕರೀನಾ ಕಪೂರ್​ ನಟಿಸ್ತಾ ಇರೋದು ನಿಜನಾ? ನಟಿ ನೀಡಿದ ಅಪ್​ಡೇಟ್​ ಏನು?
 

Kareena Kapoor is starring in Toxic with rocking star Yash  update given by the actress suc
Author
First Published Mar 17, 2024, 4:46 PM IST

ನಟ ಯಶ್​ ಫ್ಯಾನ್ಸ್​   ಟಾಕ್ಸಿಸ್​ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್’ ಭರ್ಜರಿ ಯಶಸ್ಸಿನ ಬಳಿಕ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಚಿತ್ರದಲ್ಲಿ  ಬಾಲಿವುಡ್​ ಬೇಬೋ,  ಕರೀನಾ ಕಪೂರ್​ ಖಾನ್​ ಅವರು  ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಈ ಮೂಲಕ ನಟಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ.  ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿ, ಬಳಿಕ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಯಿತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಗುತ್ತಿದೆ. ಈ ವಿಷಯ ತಿಳಿದಾಗಿನಿಂದಲೂ ಅತ್ತ ಕರೀನಾ ಕಪೂರ್​ ಅಭಿಮಾನಿಗಳು ಹಾಗೂ ಯಶ್​ ಅವರ ಫ್ಯಾನ್ಸ್​ ಈ ಸುದ್ದಿ ನಿಜನಾ ಎನ್ನುವ ಗೊಂದಲದಲ್ಲಿದ್ದಾರೆ.

ಕೆಲ ತಿಂಗಳ ಹಿಂದೆ ಕರೀನಾ ಕಪೂರ್​ ಖುದ್ದು ಇದರ ಹಿಂಟ್​ ನೀಡಿದ್ದರು.  ಕಾಫಿ ವಿತ್ ಕರಣ್ ಟಾಕ್‌ ಶೋನಲ್ಲಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ಆಗ ಕರಣ್​ ಅವರು, ಕರೀನಾರನ್ನು ಕುರಿತು ನಿಮಗೆ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಪ್ರಶ್ನಿಸಿದ್ದರು. ಆಗ ಕರೀನಾ ಅವರು,  ತಕ್ಷಣ 'ಯಶ್' ಎಂದಿದ್ದರು.  ನೀವು ಹೇಳಿದ ಎಲ್ಲಾ ಸ್ಟಾರ್​ಗಳೂ ಸೂಪರ್​...  ಆದ್ರೆ ನಾನು ಕೆಜಿಎಫ್​ ಹುಡುಗಿ. ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ ಎಂದಿದ್ದರು. ತಾವು ಈ ಚಿತ್ರವನ್ನು ನೋಡಿರುವುದಾಗಿಯೂ ತಿಳಿಸಿದ್ದರು. ಅದರ ಬೆನ್ನಲ್ಲೇ ಯಶ್​ ಅವರ ಮುಂಬರುವ ಚಿತ್ರದಲ್ಲಿ ನಟಿ ನಟಿಸುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗುತ್ತಿದೆ. 

ಬ್ರಾಲೆಸ್​ ಕರೀನಾ ಕಪೂರ್​ ಖಾನ್​ಗೆ ಇದು ಮದುಮಗಳ ಡ್ರೆಸ್​ ಅಂತೆ! ನಿಮ್ಮಲ್ಲಿ ಹೀಗೇನಾ ಕೇಳ್ತಿದ್ದಾರೆ ನೆಟ್ಟಿಗರು...

ರೆಡ್ಡಿಟ್ ಖಾತೆ BollyBlindsNGossip ಕರೀನಾ ತನ್ನ ದಕ್ಷಿಣ ಭಾರತದ ಚಲನಚಿತ್ರದ ಚೊಚ್ಚಲ ಅಭಿನಯದ ಕುರಿತು ಮಾತನಾಡುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ಇದರಲ್ಲಿ ಕರೀನಾ ಕಪೂರ್​, ಇದಾಗಲೇ  ನಾನು ಹೇಳಿದಂತೆ, ನಾನು ದೊಡ್ಡ ಸೌತ್ ಚಲನಚಿತ್ರವನ್ನು ಮಾಡಲಿದ್ದೇನೆ.  ಈ ಚಿತ್ರವು   ಪ್ಯಾನ್-ಇಂಡಿಯಾ ಮಟ್ಟದ್ದಾಗಿದೆ. ಹಾಗಾಗಿ ನಾನು ಎಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿಲ್ಲ, ಆದರೆ ದಕ್ಷಿಣದ ಚಿತ್ರವನ್ನು  ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಫ್ಯಾನ್ಸ್​ಗೆ ತಿಳಿಸಲು ಉತ್ಸುಕಳಾಗಿದ್ದೇನೆ ಎಂದು  ಹೇಳಿದ್ದಾರೆ ಎಂದು ರೆಡ್ಡಿಟ್​ ಖಾತೆಯಲ್ಲಿ ಬರೆಯಲಿದೆ. ಈ ಹಿನ್ನೆಲೆಯಲ್ಲಿ ಕರೀನಾ ಕಪೂರ್​ ಯಶ್​ ಚಿತ್ರದಲ್ಲಿ ನಟಿಸುತ್ತಿರುವುದು ಕನ್​ಫರ್ಮ್​ ಆಗಿದೆ ಎಂದೇ ಹೇಳಲಾಗುತ್ತಿದೆ.  

ಅಷ್ಟಕ್ಕೂ ನಟಿಯ ಫ್ಯಾನ್ಸ್​ ಕ್ಲಬ್ ಈ ಹಿಂದೆ,  ‘ ನಟಿ ಶೀಘ್ರವೇ ಎಗ್ಸೈಟಿಂಗ್ ವಿಚಾರ ಹೇಳುತ್ತಾರೆ’ ಎಂದಿದ್ದರು.  ಅಭಿಮಾನಿಗಳ ಉತ್ಸಾಹ ಮತ್ತು ಆಸೆಗಳನ್ನು ನಾವು ಅರ್ಥಮಾಡಿಕೊಂಡಿದ್ದರೂ, ನಟಿಯ ಮುಂದಿನ ಸಿನಿಮಾ ಮತ್ತು ಅದರ ತಾರಾ ಬಳಗದ ಮೇಲೆ ಕಾಯುವಂತೆ ಮಾಧ್ಯಮಗಳಿಗೆ ವಿನಂತಿಸುತ್ತೇವೆ. ಸುಖಾಸುಮ್ಮನೆ ಯಾವುದೇ ಊಹೆ ಊಹೆ ಮಾಡಬೇಡಿ. ಅರೆಬರೆ ಗೊತ್ತಿರುವ ವಿಚಾರ ಪ್ರಕಟಿಸಬೇಡಿ. ಆದರೆ ಬಹಳ ಎಕ್ಸೈಟಿಂಗ್ ವಿಚಾರ ಕಾದಿದೆ. ಅಧಿಕೃತ ಮಾಹಿತಿಗಾಗಿ ಕಾಯಿರಿ ಎಂದು ವಿನಂತಿಸುತ್ತೇವೆ ಎಂದು ಬರೆಯಲಾಗಿತ್ತು. ಇದೀಗ ಖುದ್ದು ನಟಿಯೇ ಇದನ್ನು ಕನ್​ಫರ್ಮ್​ ಮಾಡಿರುವ ಬಗ್ಗೆ ಹೇಳಲಾಗುತ್ತಿದ್ದು, ಅಧಿಕೃತ ಮಾಹಿತಿ ಹೊರಬರಬೇಕಿದೆ. 

ಸೈಫ್​ ಪುತ್ರಿ ಸಾರಾ ಹೊಟ್ಟೆಯ ಮೇಲೆ ಸುಟ್ಟಗಾಯ! ಎದೆಗುಂದದೇ ಮಾರ್ಜಾಲ ನಡಿಗೆ ಮಾಡಿದ ನಟಿಗೆ ಜೈಜೈಕಾರ...
 

Follow Us:
Download App:
  • android
  • ios