Asianet Suvarna News Asianet Suvarna News

ಸಲ್ಮಾನ್​ ಮನೆ ಮೇಲೆ ಗುಂಡು- ನದಿಯಲ್ಲಿ ಬಂದೂಕು ಪತ್ತೆ: ಶೋಧ ಕಾರ್ಯದ ರೋಚಕ ವಿಡಿಯೋ ವೈರಲ್​

ಇದೇ 14ರಂದು ಸಲ್ಮಾನ್​ ಖಾನ್​ ಮನೆಯ ಮೇಲೆ ಗುಂಡು ಹಾರಿಸಿದ್ದ ಬಂದೂಕುಗಳು ನದಿಯಲ್ಲಿ ಪತ್ತೆಯಾಗಿವೆ. ಇದರ ಶೋಧ ಕಾರ್ಯದ ವಿಡಿಯೋ ವೈರಲ್​ ಆಗಿದೆ. 
 

Divers Retrieve Pistol From River In Salman Khan House Firing Case video viral suc
Author
First Published Apr 23, 2024, 4:57 PM IST

ಇದೇ 14ರಂದು ನಟ ಸಲ್ಮಾನ್​ ಖಾನ್​ ಬಂಗಲೆ ಮೇಲೆ ನಡೆದ ಗುಂಡಿನ ದಾಳಿಗೆ ಇಡೀ ಚಿತ್ರೋದ್ಯಮ ಹಾಗೂ ನಟನ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಇದಾಗಲೇ ಸಲ್ಮಾನ್​ ಖಾನ್​ ವಿರುದ್ಧ ಹಲವಾರು ಬಾರಿ ಕೊಲೆ ಬೆದರಿಕೆ ಒಡ್ಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಇದನ್ನು ತಾವೇ ಮಾಡಿರುವುದಾಗಿ ಹೇಳಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಇದಾಗಲೇ ಕೆಲವರನ್ನು ಬಂಧಿಸಲಾಗಿದೆ.  ಅಷ್ಟಕ್ಕೂ ಲಾರೆನ್ಸ್​ ಹಾಗೂ ಆತನ ಸಂಗಡಿಗರ  ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ.  ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ. 

ಇದೀಗ ಕುತೂಹಲ ಘಟ್ಟದಲ್ಲಿ ಸಲ್ಮಾನ್ ಖಾನ್ ಮನೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಳಸಿರುವ ಬಂದೂಕುಗಳು ನದಿಯಲ್ಲಿ ಪತ್ತೆಯಾಗಿವೆ. ಇದನ್ನು ವಶಪಡಿಸಿಕೊಳ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಸಲ್ಮಾನ್ ಖಾನ್ ಮನೆಗೆ ಒಟ್ಟು 12 ಗುಂಡುಗಳನ್ನು ಹಾರಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಅವರು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸಲ್ಮಾನ್ ಮನೆಗೆ ಕೇವಲ 6 ಗುಂಡುಗಳನ್ನು ಹಾರಿಸಿದ್ದಾರೆ. ಗುಂಡಿನ ದಾಳಿ ಬಳಿಕ ಇಬ್ಬರೂ ಗುಜರಾತ್‌ಗೆ ಪರಾರಿಯಾಗಿದ್ದಾರೆ. ಮುಂಬೈ ಅಪರಾಧ ವಿಭಾಗದ ತಂಡವು  ಗುಜರಾತ್‌ನ ಸೂರತ್ ನಗರದ ತಾಪಿ ನದಿಯಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಳಸಲಾದ ಗನ್​ಗಳನ್ನು ಮತ್ತು ಕೆಲವು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ.  

ನಿನಗೆ ಯುದ್ಧವೇ ಬೇಕಿದ್ರೆ ಇದು ಟ್ರೇಲರ್​ ಅಷ್ಟೇ, ಇನ್ನು ಗುಂಡು ಗೋಡೆಗೆ ಬೀಳಲ್ಲ- ಜೈ ಶ್ರೀರಾಮ್​: ಲಾರೆನ್ಸ್​ ಬಿಷ್ಣೋಯಿ
 
ತಾಪಿ ನದಿಯಲ್ಲಿ ಶೋಧ ಕಾರ್ಯಾಚರಣೆ ವೇಳೆ ಮುಂಬೈ ಕ್ರೈಂ ಬ್ರಾಂಚ್ ತಂಡದೊಂದಿಗೆ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತರಾಗಿರುವ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಕೂಡ ಇದ್ದರು. ಸ್ಥಳೀಯ ಮುಳುಗುಗಾರರು ಮತ್ತು ಮೀನುಗಾರರ ಸಹಾಯದಿಂದ ಶೋಧ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಇಬ್ಬರು ಬಂಧಿತ ವ್ಯಕ್ತಿಗಳನ್ನು - ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಎಂದು ಗುರುತಿಸಲಾಗಿದೆ - ತಾವು ರೈಲಿನಲ್ಲಿ ಭುಜ್‌ಗೆ ಪರಾರಿಯಾಗುತ್ತಿದ್ದಾಗ ರೈಲ್ವೇ ಸೇತುವೆಯಿಂದ ತಾಪಿ ನದಿಗೆ ಶಸ್ತ್ರಾಸ್ತ್ರವನ್ನು ಎಸೆದಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಮನೆಯಲ್ಲಿ ನಡೆದ ಗುಂಡಿನ ದಾಳಿಗೆ ಎರಡೂ ಬಂದೂಕುಗಳನ್ನು ಬಳಸಲಾಗಿದೆ. ಈ ಬಂದೂಕುಗಳ  ಮೊದಲ ವಿಡಿಯೋ ಹೊರಬಿದ್ದಿದೆ.  ಈ ಪ್ರಕರಣದಲ್ಲಿ ಶೂಟರ್ ವಿಕ್ಕಿ ಗುಪ್ತಾ ನೀಡಿದ ಮಾಹಿತಿ ಮೇರೆಗೆ ಅಪರಾಧ ವಿಭಾಗದ ಪೊಲೀಸರು ಏಪ್ರಿಲ್ 22ರಂದು ಗನ್ ವಶಪಡಿಸಿಕೊಂಡಿದ್ದರು. ನಂತರ ಇಂದು ಕ್ರೈಂ ಬ್ರಾಂಚ್ ಮತ್ತೊಂದು ಗನ್‌ಗಾಗಿ ಹುಡುಕಾಟ ನಡೆಸಿದ್ದು, ಮತ್ತೊಂದು ಗನ್ ಕೂಡ ಪತ್ತೆಯಾಗಿದೆ.  3 ಮ್ಯಾಗ್​​ಜಿನ್​ ಮತ್ತು 13 ಬುಲೆಟ್​ ಸಹ ಇದೆ.

 ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳು ಮುಂಬೈ ಕ್ರೈಂ ಬ್ರಾಂಚ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಗುಜರಾತ್ ನಿಂದ ಆರೋಪಿಗಳನ್ನು ಬಂಧಿಸಿ ಕರೆತರಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಗುಂಡಿನ ದಾಳಿಯಾದ ಕೆಲ ದಿನಗಳ ನಂತರ ನಟ ಸಲ್ಮಾನ್ ಖಾನ್ ದುಬೈಗೆ ತೆರಳಿದ್ದಾರೆ. ತಮ್ಮ ನಿಗದಿತ ಕಾರ್ಯಕ್ರಮಗಳಿಗಾಗಿ ದುಬೈಗೆ ತೆರಳಿದ್ದರು ಎನ್ನಲಾಗಿದೆ.

ಬಿಗ್​ಬಾಸ್​ನಲ್ಲಿ ಅವಕಾಶ ಕೊಡ್ತೆನಂದ, ವಿಡಿಯೋ ಕಳಿಸಿದೆ, ಮಧ್ಯರಾತ್ರಿ ಕರೆದ.. ಆಮೇಲೆ.. ಮನಿಷಾ ಕಹಿ ನೆನಪು

 

Follow Us:
Download App:
  • android
  • ios