Asianet Suvarna News Asianet Suvarna News

ಜೆಡಿಎಸ್‌ ಮೂರಕ್ಕೆ ಮೂರೂ ಸ್ಥಾನ ಗೆಲ್ಲೋದು ಖಚಿತ! ಡಾ। ಮಂಜುನಾಥ್‌ ಸ್ಪರ್ಧೆ ಹಿಂದೆ ಇದೆ ತಂತ್ರಗಾರಿಕೆ!

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸಿರುವುದು ಉತ್ತಮ ತಂತ್ರಗಾರಿಕೆಯಾಗಿದೆ. ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಕಾಂಗ್ರೆಸ್‌ ಕೆಟ್ಟ ರೀತಿಯಲ್ಲಿ ಬಿಂಬಿಸಿತು. ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ, ಆನೇಕಲ್‌, ಆರ್‌.ಆರ್‌.ನಗರದಲ್ಲಿ ಉಭಯ ಪಕ್ಷಗಳು ಪ್ರಭಾವವನ್ನು ಹೊಂದಿದ್ದೇವೆ. ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಿದ್ದು, ರಾಜಕೀಯ ಲೆಕ್ಕಾಚಾರ ಮಾಡಲಾಗಿದೆ.

Lok sabha polls 2024 interview with former Chief Minister HD Kumaraswamy at bengaluru rav
Author
First Published Apr 24, 2024, 12:01 PM IST

ಜಿದ್ದಾಜಿದ್ದಿ ಹೋರಾಟ ನಡೆದಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಮೊದಲ ಹಂತದಲ್ಲಿ ಘಟಾನುಘಟಿ ನಾಯಕರು ಅಖಾಡದಲ್ಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೃದಯ ಸಂಬಂಧ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಕೆ ಕಂಡಿದ್ದಾರೆ. ಚಿಕಿತ್ಸೆಗೊಳಗಾದ ಕೆಲವೇ ದಿನದಲ್ಲಿ ಚುನಾವಣಾ ಪ್ರಚಾರದ ಅಖಾಡಕ್ಕಿಳಿದು ವಿರೋಧಿಗಳೊಂದಿಗೆ ಮುಖಾಮುಖಿ ಪೈಪೋಟಿ ನಡೆಸಿರುವ ಕುಮಾರಸ್ವಾಮಿ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮೋದಿ ಅಲೆ ಹೇಗೆ ಕೆಲಸ ಮಾಡಲಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಭವಿಷ್ಯದಲ್ಲಿ ಯಾವ ರೂಪ ತಳೆಯಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

- ಹೃದಯ ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಹೇಗಿದೆ ಸರ್‌?

ಚೆನ್ನಾಗಿದೆ. ಅತ್ಯಾಧುನಿಕ ಚಿಕಿತ್ಸೆಯಿಂದ ಬೇಗ ಗುಣಮುಖನಾದೆ. ಹೀಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.

- ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳ್ತಾರೆ.. ನೀವೇನು ಹೇಳ್ತಿರಿ?

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಲಘುವಾಗಿ ಪರಿಗಣಿಸಿದ್ದಾರೆ. ಫಲಿತಾಂಶ ಬಂದ ಬಳಿಕ ಅವರಿಗೆ ಗೊತ್ತಾಗಲಿದೆ.

ಲೋಕಸಭಾ ಚುನಾವಣೆ 2024: ನನ್ನನ್ನ ಸೋಲಿಸುವ ಶಕ್ತಿ ಸಿದ್ದುಗೂ ಇಲ್ಲ, ಡಿಕೆಶಿಗೂ ಇಲ್ಲ, ಕುಮಾರಸ್ವಾಮಿ

- ಬಿಜೆಪಿ-ಜೆಡಿಎಸ್‌ ಮೈತ್ರಿ ಪ್ರಚಾರದಲ್ಲಿ ಕೆಲವೆಡೆ ಒಗ್ಗಟ್ಟಿನ ಸಮಸ್ಯೆ ಇದೆ ಎಂಬ ಆರೋಪ ಇದೆ?

ರಾಜ್ಯದಲ್ಲಿ 3-4 ಕ್ಷೇತ್ರ ಬಿಟ್ಟರೆ ಬಿಜೆಪಿ-ಜೆಡಿಎಸ್‌ ಮೈತ್ರಿ ವಿಚಾರದಲ್ಲಿ ಸಕಾರಾತ್ಮಕ ವಾತಾವರಣ ಇದೆ. 3-4 ಕ್ಷೇತ್ರದಲ್ಲಿ ಎರಡು ಪಕ್ಷಗಳ ನಡುವೆ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಸರಿಮಾಡಿದರೆ 28 ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಸ್ಥಳೀಯ ನಾಯಕರು ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು. ಆಗ ಯಾವುದೇ ಸಮಸ್ಯೆಯಾಗುವುದು. ಈ ನಿಟ್ಟಿನಲ್ಲಿ ಎರಡು ಪಕ್ಷಗಳ ಮುಖಂಡರು ಸಮನ್ವಯ ಸಾಧಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಎಲ್ಲವನ್ನೂ ಸರಿಪಡಿಸಲಿದ್ದಾರೆ.

- ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡುವ ತಂತ್ರಗಾರಿಕೆ ಏನು?

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸಿರುವುದು ಉತ್ತಮ ತಂತ್ರಗಾರಿಕೆಯಾಗಿದೆ. ಅವರನ್ನು ಕಣಕ್ಕಿಳಿಸಿರುವ ಬಗ್ಗೆ ಕಾಂಗ್ರೆಸ್‌ ಕೆಟ್ಟ ರೀತಿಯಲ್ಲಿ ಬಿಂಬಿಸಿತು. ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ, ಆನೇಕಲ್‌, ಆರ್‌.ಆರ್‌.ನಗರದಲ್ಲಿ ಉಭಯ ಪಕ್ಷಗಳು ಪ್ರಭಾವವನ್ನು ಹೊಂದಿದ್ದೇವೆ. ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಿದ್ದು, ರಾಜಕೀಯ ಲೆಕ್ಕಾಚಾರ ಮಾಡಲಾಗಿದೆ. ಈ ಮೊದಲು ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದಾಗ ಸ್ವಲ್ಪ ಏರು-ಪೇರು ಇತ್ತು. ಆದರೆ, ಈಗ ಮೈತ್ರಿ ಪಕ್ಷದ ಪರವಾಗಿದೆ ಎಂಬ ಸಮೀಕ್ಷೆಗಳು ಸ್ಪಷ್ಟವಾಗಿ ಹೇಳಿವೆ. ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸಿರುವುದು ಡಿ.ಕೆ.ಸಹೋದರಲ್ಲಿ ಭಯ ಮೂಡಿದೆ. ಅದಕ್ಕಾಗಿಯೇ ಅವರ ಕುಟುಂಬ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಡಿ.ಕೆ.ಶಿವಕುಮಾರ್‌ ಪತ್ನಿ ಮತ್ತು ಮಗಳು ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ ಸೆಳೆಯಲು ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಆರೋಪಿಸಿದರು.

- ದೇವೇಗೌಡ ಅವರ ಸೊಸೆಯನ್ನೇ ಸೋಲಿಸಿದ್ದೇವೆ. ಇನ್ನು ಅಳಿಯನನ್ನು ಸೋಲಿಸುವುದು ಕಷ್ಟನಾ..? ಎನ್ನುತ್ತಾರೆ ಡಿ.ಕೆ.ಶಿವಕುಮಾರ್‌.

2013ರಲ್ಲಿ ಇದ್ದ ಘಟನೆ ಈಗ ಇಲ್ಲ. ಬಿಜೆಪಿ-ಜೆಡಿಎಸ್‌ ಒಂದಾಗಿ ಚುನಾವಣೆ ಎದುರಿಸಿದ್ದರೆ 2014ರಲ್ಲಿ ಸಂಸದ ಡಿ.ಕೆ.ಸುರೇಶ್‌ ಜಯಗಳಿಸುತ್ತಿರಲಿಲ್ಲ. 2019ರಲ್ಲಿ ಜೆಡಿಎಸ್‌ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಕ್ಷೇತ್ರದ ಹಲವೆಡೆ ಉತ್ತಮವಾಗಿ ಮತದಾನ ಪ್ರಮಾಣವಾಗಿದೆ. ಆದರೆ ಈ ಬಾರಿ ಹಿಂದೆ ಇದ್ದಂತಹ ವಾತಾವರಣ ಇಲ್ಲ. ಇದಲ್ಲದೇ, ಬೆಂಗಳೂರಿನ ಮೂರು ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಇದೆ. ನಾಲ್ಕು ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇರುವ ಕಾರಣ ಕಾಂಗ್ರೆಸ್‌ಗೆ ಭಯಭೀತಿಗೊಂಡಿದೆ. ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್ಸಿಗರು ತಲೆಕೆಡಿಸಿಕೊಂಡಿದ್ದಾರೆ.

- ಜೆಡಿಎಸ್‌ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಮಾತುಗಳು ಕೇಳಿಬಂದಿವೆ?

ಜೆಡಿಎಸ್‌ ಕಣಕ್ಕಿಳಿದಿರುವ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಈ ಬಗ್ಗೆ ಸಮೀಕ್ಷಾ ವರದಿಗಳೇ ಹೇಳಿವೆ. ಮೊದಲು ಹಾಸನ ಕ್ಷೇತ್ರದಲ್ಲಿ ಕಷ್ಟ ಎಂದು ಹೇಳಲಾಗುತ್ತಿತ್ತು. ಆದರೆ, ಸಮೀಕ್ಷೆ ಗಮನಿಸಿದಾಗ ಬದಲಾವಣೆಯಾಗಿದ್ದು, ಪೂರಕ ವಾತಾವರಣ ಇದೆ. ಕೋಲಾರ ಮತ್ತು ಮಂಡ್ಯದಲ್ಲಿಯೂ ಗೆಲುವು ಸಾಧಿಸುವ ಬಗ್ಗೆ ಸಮೀಕ್ಷೆ ತಿಳಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು. ಮಂಡ್ಯದಲ್ಲಿ ಯಾವ ಅರ್ಹತೆ ಮೇಲೆ ಟಿಕೆಟ್‌ ನೀಡಿದೆ. ಹಣ ಇದ್ದವರಿಗೆ ಮಾತ್ರ ಟಿಕೆಟ್‌ ನೀಡಿದೆ. ಅಂತಹವರೆಲ್ಲಾ ರಾಜಕೀಯ ಬಂದರೆ ವ್ಯವಸ್ಥೆ ಏನಾಗಲಿದೆ?

- ಕಾಂಗ್ರೆಸ್‌ನಲ್ಲಿ ಈ ಬಾರಿ ಕುಟುಂಬ ರಾಜಕೀಯ ಹೆಚ್ಚಾಗಿದೆ ಅನಿಸುವುದಿಲ್ಲವೇ?

ಕಾಂಗ್ರೆಸ್‌ ಬಹುತೇಕರು ಈ ಬಾರಿ ಕುಟುಂಬ ರಾಜಕೀಯ ಹಿನ್ನೆಲೆಯುಳ್ಳವರು ಚುನಾವಣಾ ಕಣಕ್ಕಿಳಿದಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕವಾಗಿರುವವರಿಗೆ ಟಿಕೆಟ್‌ ಕೊಟ್ಟಿಲ್ಲ. ಯಾವುದೇ ಕ್ಷೇತ್ರವನ್ನು ಗಮನಿಸಿದರೂ ದುಡ್ಡಿಗೆ ಮಣೆ ಹಾಕಿರುವುದು ಸ್ಪಷ್ಟವಾಗುತ್ತದೆ. ಅವರ ಬಗ್ಗೆ ಚರ್ಚೆ ಮಾಡಿದರೆ ನಾವು ಹುಚ್ಚರಾಗುತ್ತೇವೆ ಎಂದು ವ್ಯಂಗ್ಯವಾಡಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ಕಾಟೇರಾ ಸಿನಿಮಾದ ವಿಲನ್ ಇದ್ದಂಗಿದ್ದಾರೆ; ಡಾ.ರವೀಂದ್ರ

- ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ಆ ಪಕ್ಷದತ್ತ ಹೆಚ್ಚಿನ ಒಲವು ಹೊಂದಿದ್ದಾರೆ?

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ವಿಚಾರದ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ ಜತೆ ಚರ್ಚೆ ನಡೆಸಿದ್ದೇನೆ. ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿಟ್ಟುಕೊಳ್ಳಬಾರದು ಮತ್ತು ಐದು ಗ್ಯಾರಂಟಿಗಳನ್ನು ಲಘುವಾಗಿ ಪರಿಗಣಿಸಬಾರದು ಎಂದಿದ್ದೇನೆ. ಹೆಣ್ಣುಮಕ್ಕಳ ಮೇಲೆ ಗ್ಯಾರಂಟಿ ಪ್ರಭಾವ ಬೀರಿವೆ ಎಂಬ ಮಾಹಿತಿಯನ್ನಿಟ್ಟಿದ್ದೇನೆ. ಆದರೆ, ಕೇಂದ್ರದ ವರಿಷ್ಠರ ಲೆಕ್ಕಾಚಾರವೇ ಬೇರೆ. ಇದಕ್ಕೆ ಪರ್ಯಾಯವಾಗಿ ತಂತ್ರಗಾರಿಕೆಗಳನ್ನು ಮಾಡಿದ್ದಾರೆ. ಬಿಜೆಪಿಯಲ್ಲಿ ಕೆಲವು ವಿಚಾರದಲ್ಲಿ ದೃಢ ನಿರ್ಧಾರಗಳಿವೆ. ಬಿಜೆಪಿ ಹಿಂದುತ್ವ ಹಿನ್ನೆಲೆಯಲ್ಲಿ ಹೆಚ್ಚಿನ ವೆಚ್ಚ ಇಲ್ಲದೆ ದೃಢವಾಗಿ ಪಕ್ಷಕ್ಕಾಗಿ ಕಾರ್ಯಕರ್ತರು ಶ್ರಮಿಸುತ್ತಾರೆ.

Follow Us:
Download App:
  • android
  • ios