Asianet Suvarna News Asianet Suvarna News

ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

ಡಿಕೆಶಿ ಕೊತ್ವಾಲ್ ಗರಡಿಯಿಂದ ಬಂದವನೆಂದ ಹೆಚ್‌ಡಿಕೆ
ಕಲ್ಲು ಮಣ್ಣು ಲೂಟಿ ಮಾಡಿದ ಪಾರ್ಟಿ ಎಂದ ಹೆಚ್‌ಡಿಕೆ
ಒಕ್ಕಲಿಗ ವೋಟ್‌ಬ್ಯಾಂಕ್‌ಗಾಗಿ ಜಗಳಕ್ಕೆ ಬಿದ್ರಾ ನಾಯಕರು? 

ಡಿಕೆಶಿ ಮತ್ತು ಎಚ್ಡಿಕೆ.. ಈ ಇಬ್ಬರೂ ರಾಜ್ಯ ಒಕ್ಕಲಿಗ (Vokkaliga) ಸಮುದಾಯದ ಪ್ರಮುಖ ನಾಯಕರು. ಈ ಒಕ್ಕಲಿಗೆ ನಾಯಕರ ಮಧ್ಯೆ ಲೋಕಸಭಾ ಚುಣಾವಣೆ(Lok sabha Eection) ಸಮರ ತುಂಬಾ ಜೋರಾಗಿದೆ. ಈ ಇಬ್ಬರು ಮಾತಲ್ಲೇ ಏಟು-ಎರುರೇಟು ಶುರು ಮಾಡಿದ್ದಾರೆ. ಇಬ್ಬರ ಮಧ್ಯೆದ ವಾಕ್ಸಮರ ನಿನ್ನೆಯಿಂದ ಇನ್ನೂ ಜೋರಾಗಿದೆ. ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕದಲ್ಲಿ(Karnataka) ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಇನ್ನು ಕೆಲವೇ ದಿನಗಳು ಇರುವುದರಿಂದ, ಎಲ್ಲ ಪಕ್ಷಗಳಿಂದ ಪ್ರಚಾರ ತುಂಬಾ ಜೋರಾಗಿದೆ. ಇಲ್ಲಿ ಇದಕ್ಕಿಂತ ಮುಖ್ಯ ವಿಚಾರ ಏನೆಂದ್ರೆ, ಎಲೆಕ್ಷನ್ ಪ್ರಚಾರಕ್ಕಿಂತ ಇಬ್ಬರು ಒಗ್ಗಲಿಗ ನಾಯಕರ ವಾಕ್ಸಮರ ಇನ್ನೂ ಜೋರಾಗಿದೆ. ಎಚ್ಡಿಕೆ(HD Kumaraswamy) ಮತ್ತು ಡಿಕೆಶಿ. ರಾಜ್ಯ ರಾಜಕಾರಣದಲ್ಲಿ ಈ ಇಬ್ಬರು ಒಕ್ಕಲಿಗ ಸಮುದಾಯದ ಬಲಿಷ್ಠ ನಾಯಕರು. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ವೋಟ್ಗಳೇ ಮೈಲುಗೈ ಇರೋದ್ರಿಂದ ಸಹಜವಾಗಿ ಒಕ್ಕಲಿಗ ನಾಯರ ಪ್ರಾಬಲ್ಯವೂ ಹೆಚ್ಚಿರುತ್ತೆ. ಕಾಂಗ್ರೆಸ್‌ನಿಂದ ಡಿಕೆಶಿ(DK Shivakumar) ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಎಚ್ಡಿಕೆ ನಾಯಕರ ಶಕ್ತಿ ಪ್ರದರ್ಶನ ತುಂಬಾ ಜೋರಾಗಿದೆ. ಒಕ್ಕಲಿಗ ವೋಟ್ ಗೆಲ್ಲಲು ಇಬ್ಬರು ನಾಯಕರು ಇನ್ನಿಲ್ಲದ ಸಾಹಸದಲ್ಲಿದ್ದಾರೆ. ಇದರ ಮಧ್ಯೆ ಇಬ್ಬರು ನಾಯಕರ ವಾಕ್ಸಮರು ಸಹ ಜೋರಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: 2014ರ ಲೆಕ್ಕಾಚಾರ ಬದಲಿಸಿತ್ತು ಆ ನಿರ್ಧಾರ..! ವಾರಾಣಸಿಯಲ್ಲೇ ನಡೆಸಿದ್ದೇಕೆ ಮೋದಿ ಅಶ್ವಮೇಧ..?

Video Top Stories