Asianet Suvarna News Asianet Suvarna News

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌: ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂಗೆ ರಾಹುಲ್‌ ಪತ್ರ

ಕಾಂಗ್ರೆಸ್ ಎಂದೆಂದಿಗೂ ಜನರ ಆಶೋತ್ತರಗಳಿಗಾಗಿ ದುಡಿಯಲಿದೆ, ದೇಶವಂದರೆ ಕೇವಲ ಕಲ್ಲು ಮಣ್ಣಲ್ಲ, ದೇಶವೆಂದರೆ ಜನ, ದೇಶವೆಂದರೆ ಜನರ ಬದುಕು, ದೇಶವೆಂದರೆ ವೈವಿಧ್ಯತೆ. ಜನಕಲ್ಯಾಣದ ಮೂಲಕ ದೇಶ ಕಟ್ಟಿದ ಕಾಂಗ್ರೆಸ್ ಪಕ್ಷ ಜನಜೀವನವನ್ನು ಸುಧಾರಿಸಲು ಪಣ ತೊಟ್ಟಿದೆ. 

Rahul Gandhi Letter to CM Siddaramaiah to take Necessary Legal Action on Prajwal Revanna case grg
Author
First Published May 4, 2024, 4:24 PM IST

ಬೆಂಗಳೂರು(ಮೇ.04): ದೇಶದ ಮಹಿಳೆಯರ ಮಾನ, ಪ್ರಾಣದ ಕಾಳಜಿ ಕಾಂಗ್ರೆಸ್ ಪಕ್ಷದ ಮೊದಲ ಆದ್ಯತೆಯಾಗಿದೆ.  ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಪ್ರಜ್ವಲ್ ರೇವಣ್ಣನ ಅತ್ಯಾಚಾರ ಪ್ರಕರಣದಲ್ಲಿ ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಮಹಿಳೆಯರ ಘನತೆ ಎತ್ತಿ ಹಿಡಿದು ಮಹಿಳಾ ಪೀಡಕರನ್ನು ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲು ನಮ್ಮ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಕರ್ನಾಟಕ ಕಾಂಗ್ರೆಸ್‌ ತಿಳಿಸಿದೆ. 

ಇಂದು (ಶನಿವಾರ) ತನ್ನ ಅಧಿಕೃತ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್‌, ಕಾಂಗ್ರೆಸ್ ಎಂದೆಂದಿಗೂ ಜನರ ಆಶೋತ್ತರಗಳಿಗಾಗಿ ದುಡಿಯಲಿದೆ, ದೇಶವಂದರೆ ಕೇವಲ ಕಲ್ಲು ಮಣ್ಣಲ್ಲ, ದೇಶವೆಂದರೆ ಜನ, ದೇಶವೆಂದರೆ ಜನರ ಬದುಕು, ದೇಶವೆಂದರೆ ವೈವಿಧ್ಯತೆ. ಜನಕಲ್ಯಾಣದ ಮೂಲಕ ದೇಶ ಕಟ್ಟಿದ ಕಾಂಗ್ರೆಸ್ ಪಕ್ಷ ಜನಜೀವನವನ್ನು ಸುಧಾರಿಸಲು ಪಣ ತೊಟ್ಟಿದೆ. ಗೃಹಲಕ್ಷ್ಮಿ ಯೋಜನೆ ನಾಡಿನ ಮಹಿಳೆಯರ ಸಂಕಷ್ಟ ದೂರ ಮಾಡಿರುವ ಕತೆಗಳನ್ನು ಕೇಳಿದಾಗ ಸಾರ್ಥಕ ಭಾವ ಮೂಡುತ್ತದೆ. ಇದೇ ಮಾದರಿಯಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ ಬಂದನಂತರ ಬಡ ಮಹಿಳೆಯರಿಗೆ 1 ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಬಡತನ ನಿವಾರಣೆ ಮಾಡಲು ಬದ್ಧವಾಗಿದೆ ಎಂದು ಹೇಳಿದೆ. 

ಪ್ರಜ್ವಲ್‌ ರೇವಣ್ಣಗೆ ಬ್ಲ್ಯೂ ಕಾರ್ನರ್‌ ನೋಟಿಸ್‌ ಇಶ್ಯು ಮಾಡಲಿರುವ ಸಿಬಿಐ?

ಪ್ರಜ್ವಲ್ ರೇವಣ್ಣನ ವಿರುದ್ಧ SIT ತಂಡ ಬ್ಲೂ ಕಾರ್ನರ್ ನೋಟಿಸ್ ಗೆ ಇಂಟರ್ ಪೋಲ್ ಗೆ ಮನವಿ ಮಾಡಿದೆ. ಮಾತೃಶಕ್ತಿ, ನಾರಿಶಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ಪರ ನಿಂತಿರುವುದೇಕೆ?. SIT ತಂಡ ಸಿಬಿಐ ಮೂಲಕ ಇಂಟರ್ ಪೋಲ್ ಗೆ ಮನವಿ ಮಾಡಿದರೂ ಆರೋಪಿಯ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಕರೆತರುವಲ್ಲಿ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲವೇಕೆ?. ಕೇಂದ್ರ ಸರ್ಕಾರದ ರಾಜತಾಂತ್ರಿಕ ಇಲಾಖೆ ಮನಸು ಮಾಡಿದರೆ ಆರೋಪಿಯನ್ನು ಕರೆತರಬಹುದು, ಆದರೆ ಮೋದಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ತಮ್ಮ ರೇಪಿಸ್ಟ್ ಅಭ್ಯರ್ಥಿಯ ಪರ ನಿಂತಿದೆ. ಪ್ರಧಾನಿ ಮೋದಿಗೆ ಮಹಿಳೆಯರ ಹಿತಾಸಕ್ತಿ ಬೇಕಿಲ್ಲ ಎನ್ನುವುದು ಮಣಿಪುರದ ಘಟನೆಯಿಂದ ಹಿಡಿದು ಪ್ರಜ್ವಲ್ ರೇವಣ್ಣನ ಪ್ರಕರಣದವರೆಗೂ ಸಾಬೀತಾಗಿದೆ ಎಂದು ತಿಳಿಸಿದೆ. 

Follow Us:
Download App:
  • android
  • ios