Asianet Suvarna News Asianet Suvarna News

ರಾಜ್ಯದಲ್ಲಿ ಕ್ಲೀನ್ ಸ್ವೀಪ್ಗೆ ಮೈತ್ರಿ ರಣತಂತ್ರ- ಸಿಎಂ ಗರ್ವಭಂಗ ಮಾಡೋದಾಗಿ ದೊಡ್ಡಗೌಡರ ಶಪಥ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಡೆ ಅಖಾಡಕ್ಕಿಳಿದಿದೆ. ಮೈತ್ರಿ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಉತ್ಸಾಹ ಹೆಚ್ಚಾಗಿದೆ. ಇದೀಗ 28  ಕ್ಷೇತ್ರ ಗೆಲ್ಲುವ ಶಪಥದೊಂದಿಗೆ ಚುನಾವಣಾ ರಂಗಕ್ಕಿಳಿದಿದೆ. ದೇವೇಗೌಡರೇ ಮೈದಾನಕ್ಕಿಳಿದಿದ್ದು, ಸಿದ್ದರಾಮಯ್ಯಗೆ ಗರ್ವಗಂಭ ಮಾಡಲು ರಣತಂತ್ರ ಹೆಣೆದಿದ್ದಾರೆ.
 

BJP JDS Alliance plan to clean sweep Karnataka in upcoming Lok Sabha Election 2024 ckm
Author
First Published Mar 29, 2024, 10:15 PM IST

ಶಿವರಾಜ್, ಬುಲೆಟಿನ್ ಪ್ರೊಡ್ಯೂಸರ್

ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿ-ಜೆಡಿಎಸ್ ನಾಯಕರು ಮೈ ಕೊಡವಿ ಎದ್ದಿದ್ದು, ಮೈತ್ರಿ  ರಚನೆಯಾದ ಬಳಿಕ ಖಾಸಗಿ ಹೋಟೆಲ್ನಲ್ಲಿ ಮೊದಲ ಸಮನ್ವಯ ಸಭೆ ನಡೆಸಿ.. ಲೋಕಸಭಾ ಚುನಾವಣೆಗೆ ರಣತಂತ್ರ ಹೆಣೆದಿದ್ದಾರೆ.. ಶತಯಗತಾಯ ಈ ಬಾರಿ ರಾಜ್ಯದಲ್ಲಿ 28 ಸ್ಥಾನಕ್ಕೆ 28 ಸ್ಥಾನ ಗಳಿಸೋ ಮೂಲಕ ರಾಜ್ಯ ಸರ್ಕಾರಕ್ಕೆ ಶಾಕ್ ಕೊಡಬೇಕೆಂದು ಬಿಜೆಪಿ-ಜೆಡಿಎಸ್ ಘಟಾನುಘಟಿ ನಾಯಕರು ಶಪಥ ಮಾಡಿದ್ದಾರೆ.. 

ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೊದಲ ಸಮನ್ವಯ ಸಭೆಯಲ್ಲಿ ಯಡಿಯೂರಪ್ಪ, ಹೆಚ್ ಡಿ ದೇವೇಗೌಡ, ವಿಜಯೇಂದ್ರ, ಕುಮಾರಸ್ವಾಮಿ, ರಾಧಾ ಮೋಹನ್ ಅಗರ್ವಾಲ್, ಆರ್ ಅಶೋಕ್‌, ಜಿ.ಟಿ ದೇವೇಗೌಡ, ಕಾರಜೋಳ, ಸಿ.ಸಿ ಪಾಟೀಲ್, ಸಿಟಿ ರವಿ, ಪ್ರೀತಂ ಗೌಡ, ಬಂಡೆಪ್ಪ ಕಾಶಂಪುರ, ಸದಾನಂದಗೌಡ, ಬೊಜೇಗೌಡ, ಶರವಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ 110 ನಾಯಕರು ಭಾಗಿಯಾಗಿದ್ರು.

ಲೋಕಸಭಾ ಚುನಾವಣೆ 2024: ಕರ್ನಾಟಕದ ಬಿಜೆಪಿ- ಕಾಂಗ್ರೆಸ್- ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ...

ಇದೇ ಸಭೆಯಲ್ಲಿ ಮೈತ್ರಿ ನಾಯಕರು ಮುಂಬರುವ ಚುನಾವಣೆಯಲ್ಲಿ.. ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ತರಬೇಕು ಹಾಗೂ ಸ್ಥಳೀಯ ಮಟ್ಟದಲ್ಲಿ ನಾಯಕರ ವಿರೋಧ ಶಮನ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ.. ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಜೆಡಿಎಸ್ಗೆ ಕೆಲ ಬಿಜೆಪಿ ನಾಯಕರು ವಿರೋಧಿಸ್ತಿದ್ದಾರೆ ಇದನ್ನ ಶಮನ ಮಾಡಬೇಕು.. ಬಿಜೆಪಿ-ಜೆಡಿಎಸ್ ಸಮಾನವಾಗಿ ಪ್ರಾಬಲ್ಯ ಸಾಧಿಸಿರುವ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಬೇಕೆಂದು ನಿರ್ಧಾರ ಮಾಡಿದ್ದಾರೆ.. ಚುನಾವಣೆಯಲ್ಲಿ ಮೋದಿ ಸಮಾವೇಶದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಭಾಗಿಯಾಗಬೇಕು.. ಮಂಡ್ಯದಲ್ಲಿ ಒಂದು ಮೋದಿ
ಯಶಸ್ವಿಯಾಗಿ ನಡೆಸುವ ಬಗ್ಗೆ ಚರ್ಚೆ ಮಾಡಿದ್ದಾರೆ.. ಜೊತೆಗೆ ಸುಮಲತಾ ಮನವೊಲಿಸಿ ಮಂಡ್ಯದಲ್ಲಿ ಪ್ರಚಾರಕ್ಕೆ ತರಬೇಕೆಂದು ಸಹ ತೀರ್ಮಾನಿಸಿದ್ದಾರೆ.. ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಳಜಗಳದ ಲಾಭ ಪಡೆಯುವ ಬಗ್ಗೆ ಮೈತ್ರಿ ನಾಯಕರು ರಣತಂತ್ರ ಹೆಣೆದಿದ್ದಾರೆ. 

ಇದೇ ಸಮನ್ವಯ ಸಭೆಯಲ್ಲಿ ಮಾತಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ‘2018ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಬೇಕಿತ್ತು.. ಅಂದು ಮೈತ್ರಿ ಆಗಿದ್ರೆ ಇಂದು ನಮ್ಮದೇ ಸರ್ಕಾರ ಇರುತ್ತಿತ್ತು ಎಂದ್ರು.. 2008ರಲ್ಲಿ ಮೈತ್ರಿ ಆದಾಗ ದೇಶಕ್ಕೆ ಮಾದರಿಯಾಗುವ ಸರ್ಕಾರ ಮಾಡಿದ್ದೇವೆ, 20 ತಿಂಗಳುಗಳ ಆಡಳಿತ ಜನರ ಮನಸ್ಸಿನಲ್ಲೂ ಇದೆ.. ಅದೇ ರೀತಿಯಲ್ಲಿ ಚುನಾವಣೆ ಮೂಲಕ ಮತ್ತೆ ಮಾಡಬೇಕು ಎಂದ್ರು’.

ಇದೇ ಸಭೆಯಲ್ಲಿ ಮಾತಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಎಚ್.ಡಿ ದೇವೇಗೌಡ, ‘ಸಿದ್ದರಾಮಯ್ಯ ನವರು ಜೆಡಿಎಸ್ ಎಲ್ಲಿದೆ ಅಂತಾ ಅಧಿಕಾರದ ಮದದಲ್ಲಿ ಮಾತಾಡ್ತಿದ್ದಾರೆ.. ಎಲ್ಲಿದೆ ಎಂದು ತೋರಿಸುವ ಸಾಮರ್ಥ್ಯ ಈ ದೇವೇಗೌಡನಿಗಿದೆ.. ‘ನನ್ನನ್ನ ತುಮಕೂರಿಗೆ ಕಳಿಸಿ, ನನ್ನನ್ನೇ ಸೋಲಿಸಿದ್ರು.. ‘ಕಾಂಗ್ರೆಸ್ ಅವರು ಏನು ಮಾಡಿದ್ರು ಗೊತ್ತಿದೆ, ಮೈಸೂರು ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ನಿಮಗೆ ಇದೆ.. ಈ ಮೂಲಕ ಸಿದ್ದರಾಮಯ್ಯ ನವರ ಗರ್ವ ಭಂಗ ಆಗಬೇಕು.. ಇದಕ್ಕೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು’ ಎಂದ್ರು.

ಲೋಕಸಭೆ ಚುನಾವಣೆ 2024: ಮಂಡ್ಯದಲ್ಲಿ ಜೆಡಿಎಸ್‌-ಬಿಜೆಪಿ ಒಗ್ಗಟ್ಟು ಪ್ರದರ್ಶನ

ಇನ್ನೂ ಸಭೆಯಲ್ಲಿ ಮಾತಾಡಿದ ಮಾಜಿ ಸಿಎಂ ಯಡಿಯೂರಪ್ಪ, ‘ನಿಮ್ಮ ಕ್ಷೇತ್ರದಲ್ಲಿ ಯಾರೇ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಇರಲಿ ಅವರ ಪರವಾಗಿ ಕೆಲಸ ಮಾಡಿ.. ಬಿಜೆಪಿ ಜೆಡಿಎಸ್ ನಾವು ಬೇರೆ ಅಲ್ಲ, ನಾವೆಲ್ಲರೂ ಒಂದೇ ತಾಯಿ ಮಕ್ಕಳು’ ಎಂದ್ರು.. 

ಇನ್ನೂ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ಮುಗಿಯುತ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೆಪಿ ನಗರದಲ್ಲಿರುವ ಮಂಡ್ಯ ಸಂಸದೆ ಸುಮಲತಾ ಮನೆಗೆ ತೆರಳಿ ಚರ್ಚೆ ಮಾಡಿದ್ರು. ಬಳಿಕ ಮಾತಾಡಿದ ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಟಿಕೆಟ್ ಸಿಗದವವರ ಬಳಿ ಮಾತಾಡೋದು ನನ್ನ ಕರ್ತವ್ಯ ಎಂದ್ರು.. ಸುಮಲತಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ್ರು.. ಇನ್ನೂ ಸುಮಲತಾ ನಾಳೆ ಬೆಂಬಲಿಗರ ಜೊತೆ ಮಾತಾಡಿ ನನ್ನ ನಿರ್ಧಾರ ತಿಳಿಸೋದಾಗಿ ಹೇಳಿದ್ರು.

Follow Us:
Download App:
  • android
  • ios