Asianet Suvarna News Asianet Suvarna News

ಕೊಹ್ಲಿ ಔಟಾದಾಗ ಪರದಾಡುವ ಟೀಮ್ ಇಂಡಿಯಾ

ವಿಶ್ವದ ಗ್ರೇಟ್ ಫಿನಿಶರ್ ಎಂದು ಹೇಳಲಾಗುವ ಧೋನಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಲಯ ಕಳೆದುಕೊಂಡಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನ ಪಾರು ಮಾಡುತ್ತಿದ್ದ ಧೋನಿಯಿಂದ ಈಗ ಅದು ಸಾಧ್ಯವಾಗುತ್ತಿಲ್ಲ. ಮೊನ್ನೆಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲರ್`ಗೆ ಕ್ಯಾಚ್ ನೀಡಿದ ಧೋನಿ, ತೀರಾ ಕೆಟ್ಟದಾಗಿ ಔಟಾಗಿ ನಿರ್ಗಮಿಸಿದರು.

What happens in team india when Virat Kohli fails

ಮೊಹಾಲಿ(ಅ.22): ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ  ಒಂದು ರೀತಿಯ ಅವಿಭಾಜ್ಯ ಅಂಗ ಎಂದರೆ ತಪ್ಪಿಲ್ಲ. ಯಾಕಂದ್ರೆ, ಟೀಮ್ ಇಂಡಿಯಾ ಬಹುತೇಕ ನಂಬಿಕೊಂಡಿರುವುದು ಇವರನ್ನೇ. ಭಾರತದ ಬ್ಯಾಟಿಂಗ್ ಬೆನ್ನೆಲುಬು ಕೊಹ್ಲಿ. ಒಂದೊಮ್ಮೆ ಕೊಹ್ಲಿ ಆರಂಭದಲ್ಲೇ ಔಟಾದರೆ ತಂಡ ಇಕ್ಕಟ್ಟಿಗೆ ಸಿಲುಕುತ್ತದೆ. ಗೆತಂಡದ ಗೆಲುವಿನ ಆಸೆ ಕಡಿಯಾಗುತ್ತದೆ. ಇದಕ್ಕೆ ಸಾಕ್ಷಿ ಮೊನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯ.

ಆ ಪಂದ್ಯದಲ್ಲಿ 300ರ ಗಡಿ ದಾಟುವ ಸೂಚನೆ ಕೊಟ್ಟಿದ್ದ ನ್ಯೂಜಿಲೆಂಡ್ 242 ರನ್`ಗೆ ಕುಸಿದು ಬಿದ್ದಿತ್ತು. ಆದರೆ, ಬ್ಯಾಟಿಂಗ್ ಪಿಚ್`ನಲ್ಲೂ ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿರುವ ಟೀಮ್ ಇಂಡಿಯಾ ಗುರಿ ತಲುಪಲು ಸಾಧ್ಯವಾಗಲಿಲ್ಲ. ಅಂದು ವಿರಾಟ್ ಕೊಹ್ಲಿ ಕೇವಲ 9 ರನ್`ಗೆ ಔಟಾದ ಬಳಿಕ ಭಾರತ ತಂಡ ಅಕ್ಷರಶಃ ದಿಕ್ಕುತಪ್ಪಿತು. ಬಳಿಕ ಬಂದ ಯಾವೊಬ್ಬ ಬ್ಯಾಟ್ಸ್`ಮನ್ ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತ್ಯದಲ್ಲಿ ಹಾರ್ದಿಕ್ ಪಾಂಡ್ಯ ಹೋರಾಟ ತೋರಿದರೂ ಗೆಲುವು ದಕ್ಕಲಿಲ್ಲ. ನಾಯಕ ಧೋನಿ ಸೇರಿದಂತೆ ಯಾರೊಬ್ಬರೂ ತಂಡವನ್ನ ದಡ ಸೇರಿಸಲಿಲ್ಲ.

ಮುಗೀತಾ ಧೋನಿ ಜಮಾನ..?: ವಿಶ್ವದ ಗ್ರೇಟ್ ಫಿನಿಶರ್ ಎಂದು ಹೇಳಲಾಗುವ ಧೋನಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಲಯ ಕಳೆದುಕೊಂಡಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನ ಪಾರು ಮಾಡುತ್ತಿದ್ದ ಧೋನಿಯಿಂದ ಈಗ ಅದು ಸಾಧ್ಯವಾಗುತ್ತಿಲ್ಲ. ಮೊನ್ನೆಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲರ್`ಗೆ ಕ್ಯಾಚ್ ನೀಡಿದ ಧೋನಿ, ತೀರಾ ಕೆಟ್ಟದಾಗಿ ಔಟಾಗಿ ನಿರ್ಗಮಿಸಿದರು. ಇದೊಂದು ನಿದರ್ಶನ ಮಾತ್ರವಲ್ಲ.ಈ ಹಿಂದಿನ ಹಲವು ಪಂದ್ಯಗಳಲ್ಲಿ ಇದೇ ರೀತಿ ಆಗಿದೆ.