ಸಿನಿಮಾ ಹಾಗೂ ಕ್ರಿಕೆಟ್ ಪ್ರಿಯರಿಗೊಂದು ಸಿಹಿಸುದ್ದಿ
sports
By Suvarna Web Desk | 05:43 PM Tuesday, 14 February 2017

ಸಚಿನ್ ಬಾಲ್ಯದಿಂದ ಹಿಡಿದು ಜೀವನದ ವಿವಿಧ ಮಗ್ಗುಲುಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಬೆಂಗಳೂರು(ಫೆ.14):  ಸಿನೆಮಾ ಹಾಗೂ ಕ್ರಿಕೆಟ್ ಪ್ರಿಯರೇ ನಿಮಗೊಂದು ಸಿಹಿಸುದ್ದಿ ಸಿಕ್ಕಿದೆ. ಮೇ. 26 ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಿತ್ರ 'ಸಚಿನ್; ಎ ಬಿಲಿಯನ್ ಡ್ರೀಮ್ಸ್' ತೆರೆಗೆ ಅಪ್ಪಳಿಸಲಿದೆ.

ಹೌದು ಈ ವಿಚಾರವನ್ನು ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಟ್ವಿಟ್ಟರ್'ನಲ್ಲಿ ಹಂಚಿಕೊಂಡಿದ್ದಾರೆ. 24 ವರ್ಷಗಳ ಕಾಲ ಸುದೀರ್ಘ ಕ್ರೀಡಾಜೀವನ ಸವೆಸಿರುವ ಸಚಿನ್ 2013ರಲ್ಲಿ ಕ್ರಿಕೆಟ್'ಗೆ ವಿದಾಯ ಹೇಳಿದ್ದರು.

ಖುದ್ದು ಸಚಿನ್ ಅವರೇ ತಮ್ಮ ಪಾತ್ರವನ್ನು ನಿರ್ವಹಿಸಿರುವುದು ಈ ಚಿತ್ರದ ವಿಶೇಷವಾಗಿದೆ. 

ಸಚಿನ್ ಬಾಲ್ಯದಿಂದ ಹಿಡಿದು ಜೀವನದ ವಿವಿಧ ಮಗ್ಗುಲುಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಈಗಾಗಲೇ ಮಾಜಿ ನಾಯಕರುಗಳಾದ ಮೊಹಮ್ಮದ್ ಅಜರುದ್ದಿನ್ ಹಾಗೂ ಎಂಎಸ್ ಧೋನಿಯ ಜೀವನವನ್ನಾಧರಿಸಿದ ಚಿತ್ರಗಳು ತೆರೆಕಂಡಿದ್ದು, ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಬಾಕ್ಸ್ ಆಫೀಸ್'ನ್ನು ಕೊಳ್ಳೆಹೊಡೆದಿತ್ತು. ಇದೀಗ ಕ್ರಿಕೆಟ್ ದೇವರು ಎಂದೇ ಕರೆಯಲಾಗುವ ಸಚಿನ್ ಸಿನೆಮಾ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Show Full Article