ಚಾಂಪಿಯನ್ಸ್ ಟ್ರೋಫಿಗೆ ಭಾರತದ ರವಿ ಅಂಪೈರ್
sports
By Suvarna Web Desk | 11:51 PM May 18, 2017

ಸೆಮೀಸ್ ಮತ್ತು ಫೈನಲ್‌'ಗೆ ತಲುಪುವ ದೇಶಗಳನ್ನು ಆಧರಿಸಿ ಅಂಪೈರ್ ಹಾಗೂ ಮ್ಯಾಚ್ ರೆಫ್ರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ.

ದುಬೈ(ಮೇ.18): ಚಾಂಪಿಯನ್ಸ್ ಟ್ರೋಫಿಗೆ ಅಂಪೈರ್, ಮ್ಯಾಚ್ ರೆಫ್ರಿಗಳ ಹೆಸರು ಪ್ರಕಟವಾಗಿದ್ದು, ಭಾರತದ ಸುಂದರಂ ರವಿ ಮೊದಲ ಬಾರಿಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಈ ಬಾರಿ ಆಯ್ಕೆಯಾಗಿರುವ ಅಂಪೈರ್‌'ಗಳ ಪೈಕಿ ರವಿ ಏಕೈಕ ಭಾರತೀಯ. ಜೂ.1ರಂದು ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶಗಳ ನಡುವೆ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ರವಿ ಕಾರ್ಯನಿರ್ವಹಿಸಲಿದ್ದಾರೆ. ಸೆಮೀಸ್ ಮತ್ತು ಫೈನಲ್‌'ಗೆ ತಲುಪುವ ದೇಶಗಳನ್ನು ಆಧರಿಸಿ ಅಂಪೈರ್ ಹಾಗೂ ಮ್ಯಾಚ್ ರೆಫ್ರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ.

ಜೂ.18ರ ತನಕ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು ಮೂವರು ಮ್ಯಾಚ್ ರೆಫ್ರಿಗಳು ಹಾಗೂ 12 ಅಂಪೈರ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ಪಾಕಿಸ್ತಾನದ ಅಲೀಂ ದಾರ್ 5ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ.

Show Full Article