Asianet Suvarna News Asianet Suvarna News

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನ್ನಿಂಗ್ಸ್ ಜಯ

ಎರಡುವರೆ ದಿನದಲ್ಲೇ ಕನ್ನಡಿಗರು ಭರ್ಜರಿ ಪ್ರದರ್ಶನ ನೀಡಿ ಪಂದ್ಯ ಗೆದ್ದರು. ಈ ಮೂಲಕ ಕರ್ನಾಟಕಕ್ಕೆ 7 ಅಂಕಗಳು ಲಭಿಸಿವೆ. 

Ranji Trophy Karnataka innings win

ಕೋಲ್ಕತ್ತಾ(ಅ.22): ಕೋಲ್ಕತ್ತಾದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕರ್ನಾಟಕ ತಂಡ ಇನ್ನಿಂಗ್ಸ್ ಹಾಗೂ 160 ರನ್​ಗಳ ಜಯ ದಾಖಲಿಸಿದೆ. 

ಎರಡುವರೆ ದಿನದಲ್ಲೇ ಕನ್ನಡಿಗರು ಭರ್ಜರಿ ಪ್ರದರ್ಶನ ನೀಡಿ ಪಂದ್ಯ ಗೆದ್ದರು. ಈ ಮೂಲಕ ಕರ್ನಾಟಕಕ್ಕೆ 7 ಅಂಕಗಳು ಲಭಿಸಿವೆ. 

ಮೊದಲ ಇನ್ನಿಂಗ್ಸ್​​ನಲ್ಲಿ ಡೆಲ್ಲಿಯನ್ನ 90 ರನ್​ಗೆ ಆಲೌಟ್ ಮಾಡಿದ್ದ ಕರ್ನಾಟಕ,  414 ರನ್ ಕೂಡಿಹಾಕಿತ್ತು.

ಬಳಿಕ ಡೆಲ್ಲಿ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ 164 ರನ್​ಗೆ ಆಲೌಟ್ ಆಗಿ ಸೋತಿತು. ಕರ್ನಾಟಕ ಪರ ಕೆ. ಗೌತಮ್ 8, ಅರವಿಂದ್ 5, ಮಿಥುನ್ 4 ಮತ್ತು ಶ್ರೇಯಸ್ ಗೋಪಾಲ್ 3 ವಿಕೆಟ್​ ಪಡೆದರು. 

ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ಮೊದಲ ಪಂದ್ಯವನ್ನ ಡ್ರಾ ಮಾಡಿಕೊಂಡಿತ್ತು.

Follow Us:
Download App:
  • android
  • ios