Asianet Suvarna News Asianet Suvarna News

ಕುಂಬ್ಳೆ ದಾಖಲೆ ಸರಿಗಟ್ಟಿದ ಹೆರಾತ್..!

ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಹೆರಾತ್ ಈ ಸಾಧನೆ ಮಾಡಿದರು.

Rangana Herath bagged his 8th ten wicket haul in Tests

ಕೊಲಂಬೋ(ಜು.17): ಶ್ರೀಲಂಕಾ ಟೆಸ್ಟ್ ತಂಡದ ಅನುಭವಿ ಬೌಲರ್ ರಂಗನಾ ಹೆರಾತ್ ಟೆಸ್ಟ್ ಕ್ರಿಕೆಟ್'ನಲ್ಲಿ 8 ಬಾರಿ 10 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ್ದಾರೆ.

ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಹೆರಾತ್ ಈ ಸಾಧನೆ ಮಾಡಿದರು. ಮೊದಲ ಇನಿಂಗ್ಸ್'ನಲ್ಲಿ 5 ವಿಕೆಟ್ ಕಿತ್ತಿದ್ದ ಎಡಗೈ ಸ್ಪಿನ್ನರ್ ಎರಡನೇ ಇನಿಂಗ್ಸ್'ನಲ್ಲಿ ಸಿಕಂದರ್ ರಾಜಾ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ 8 ಬಾರಿ 10 ವಿಕೆಟ್ ಕಿತ್ತ ಸಾಧನೆ ಮಾಡಿದರು. ಶ್ರೀಲಂಕಾದ ಕ್ರಿಕೆಟ್ ದಂತಕತೆ ಮುತ್ತಯ್ಯಾ ಮುರುಳಿಧರನ್ ಈ ಪಟ್ಟಿಯಲ್ಲಿ ಅಗ್ರಸ್ಥಾನ(22 ಬಾರಿ)ದಲ್ಲಿದ್ದಾರೆ.

ಕೇವಲ 80 ಟೆಸ್ಟ್ ಪಂದ್ಯಗಳಲ್ಲೇ ಹೆರಾತ್ 10 ಬಾರಿ ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್'ನಲ್ಲಿ ಅತಿಹೆಚ್ಚು ಬಾರಿ 10 ವಿಕೆಟ್ ಕಿತ್ತ ಟಾಪ್ 5 ಆಟಗಾರರು ಇವರು:

ಮುತ್ತಯ್ಯ ಮುರುಳಿಧರನ್ : 22

ಶೇನ್ ವಾರ್ನ್ : 10

ರಿಚರ್ಡ್ ಹ್ಯಾಡ್ಲಿ : 9

ರಂಗನಾ ಹೆರಾತ್ : 8*

ಅನಿಲ್ ಕುಂಬ್ಳೆ : 8

* ಟಾಪ್ 5 ಪಟ್ಟಿಯಲ್ಲಿ ರಂಗನಾ ಹೆರಾತ್ ಹೊರತುಪಡಿಸಿದಂತೆ ಉಳಿದೆಲ್ಲಾ ಆಟಗಾರರು ಕ್ರಿಕೆಟ್'ಗೆ ನಿವೃತ್ತಿ ಹೇಳಿದ್ದಾರೆ.

Follow Us:
Download App:
  • android
  • ios