Asianet Suvarna News Asianet Suvarna News

Paris Olympics 2024: ಭಾರತ ಪುರುಷ ಹಾಗೂ ಮಹಿಳಾ ರಿಲೇ ತಂಡಗಳಿಗೆ ಒಲಿಂಪಿಕ್ ಟಿಕೆಟ್ ಕನ್ಫರ್ಮ್

ಪ್ರತಿ ರೇಸ್ ಹೀಟ್‌ನ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಒಲಿಂಪಿಕ್ಸ್‌ನ ರಿಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಳ್ಳಲಿವೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 26ರಿಂದ ಆಗಸ್ಟ್ 11ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ.

Paris Games 2024 Indian mens and Womens relay team qualifies for Olympics kvn
Author
First Published May 6, 2024, 11:10 AM IST

ನಾಸೌ(ಮೇ.06): ಭಾರತದ ಪುರುಷರ 4*400 ಹಾಗೂ ಮಹಿಳಾ 4*400 ತಂಡಗಳು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಲಿಂಪಿಕ್ಸ್ ಅರ್ಹತೆ ಪಡೆಯಲು ಭಾರತದ ತಂಡಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದವು. ಮೊದಲ ಸುತ್ತಿನಲ್ಲಿ ಅರ್ಹತೆಗಿಟ್ಟಿಸಲು ಭಾರತದ ಮೂರು ರಿಲೇ ತಂಡಗಳು ವಿಫಲವಾಗಿದ್ದವು. ಆದರೆ ಇದೀಗ ಎರಡನೇ ಸುತ್ತಿನಲ್ಲಿ ಭಾರತದ ಎರಡು ರಿಲೇ ತಂಡಗಳು ಪ್ಯಾರಿಸ್ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿವೆ.

ರೂಪಾಲ್ ಚೌಧರಿ, ಎಂ ಆರ್ ಪೂವಮ್ಮ, ಜ್ಯೋತಿಕ ಶ್ರೀ ದಂಡಿ ಹಾಗೂ ಶುಭ ವೆಂಕಟೇಶನ್ ಅವರಿದ್ದ ಭಾರತದ ಮಹಿಳಾ ರಿಲೇ ತಂಡವು 3.29.35 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಎರಡನೇ ಸ್ಥಾನ ಪಡೆದು ಒಲಿಂಪಿಕ್ ಟಿಕೆಟ್ ಖಚಿತಪಡಿಸಿಕೊಂಡಿತು. ಇನ್ನ ಜಮೈಕಾ ಮಹಿಳಾ ತಂಡವು 3.28.54 ನಿಮಿಷಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆಯಿತು.

ಇನ್ನು ಇದಾದ ಬಳಿಕ ಮೊಹಮದ್ ಅನಾಸ್ ಯಾಹಿಯಾ, ಮೊಹಮದ್ ಅಜ್ಮಲ್, ಅರೋಕಿಯಾ ರಾಜೀವ್ ಹಾಗೂ ಅಮೋಜ್ ಜೇಕಬ್ ಅವರಿದ್ದ ಭಾರತ ಪುರುಷರ ರಿಲೇ ತಂಡವು 3.3.23 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಎರಡನೇ ಸ್ಥಾನಿಯಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿತು. ಈ ವಿಭಾಗದಲ್ಲಿ ಯುಎಸ್‌ಎ ಪುರಷರ ರಿಲೇ ತಂಡವು 2.59.95 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದು ಪ್ಯಾರಿಸ್ ಒಲಿಂಪಿಕ್ ಕೋಟಾಗಿಟ್ಟಿಸಿಕೊಂಡಿತು.

ಪ್ರತಿ ರೇಸ್ ಹೀಟ್‌ನ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಒಲಿಂಪಿಕ್ಸ್‌ನ ರಿಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಳ್ಳಲಿವೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 26ರಿಂದ ಆಗಸ್ಟ್ 11ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ.  

ವಿಶ್ವ ರಿಲೇ: ಭಾರತದ 3 ತಂಡಗಳಿಗೂ ಮೊದಲ ಸುತ್ತಿನಲ್ಲಿ ನಿರಾಸೆ!

ನಾಸೌ: ಒಲಿಂಪಿಕ್ಸ್‌ ಅರ್ಹತೆಯ ನಿರೀಕ್ಷೆಯೊಂದಿಗೆ ರಿಲೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದಿದ್ದ ಭಾರತದ 3 ತಂಡಗಳೂ ನಿರಾಸೆ ಅನುಭವಿಸಿದ್ದವು. ಭಾನುವಾರ ಮೊದಲ ಸುತ್ತಿನಲ್ಲಿ 3 ತಂಡಕ್ಕೂ ಒಲಿಂಪಿಕ್ಸ್‌ ಅರ್ಹತೆ ಗಳಿಸಲಾಗಿರಲಿಲ್ಲ. ಪುರುಷರ 4*400 ಮೀ. ತಂಡದ ರಾಜೇಶ್‌ ರಮೇಶ್‌ ಓಟದ ನಡುವೆ ಗಾಯಗೊಂಡಿದ್ದರಿಂದ ರೇಸ್‌ ಪೂರ್ತಿಗೊಳಿಸಲಾಗಲಿಲ್ಲ. 4*400 ಮೀ. ಮಿಶ್ರ ತಂಡ 3 ನಿಮಿಷ 20.36 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೀಟ್ಸ್‌ನಲ್ಲಿ 6ನೇ ಸ್ಥಾನ ಪಡೆದರೆ, 4*400 ಮಹಿಳಾ ತಂಡ 3 ನಿಮಿಷ 29.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೀಟ್ಸ್‌ನಲ್ಲಿ 5ನೇ ಸ್ಥಾನಿಯಾಯಿತು. 
 

Follow Us:
Download App:
  • android
  • ios