Asianet Suvarna News Asianet Suvarna News

(Video) IPL ಪಂದ್ಯದಲ್ಲಿ ಕನ್ನಡದಲ್ಲೇ ಮಾತನಾಡಿದ ಮನೀಶ್: ಇದಕ್ಕೆ ಜಿಂಬಾಬ್ವೆ ಕಮೆಂಟೇಟರ್ ಕೊಟ್ಟ ಪ್ರತಿಕ್ರಿಯೆ ಕೇಳಿದ್ರೆ ಅಚ್ಚರಿಪಡ್ತೀರಾ!

ನಿನ್ನೆಯ ಪುಣೆ ವಿರುದ್ಧದ ಪಂದ್ಯದಲ್ಲಿ KKR ತಂಡದ ಕನ್ನಡಿಗ ಮನೀಶ್​​ ಪಾಂಡೆ ಮೈದಾನದಲ್ಲಿ ಕನ್ನಡದ ಕಂಪು ಸುರಿಸಿದ್ದಾರೆ. ಅಷ್ಟೇ ಅಲ್ಲ ಜಿಂಬಾಬ್ವೆಯ ಕಾಮೆಂಟೇಟರ್​​​ ಪೊಮಿ ಮಬಾಂಗ್ವೆ ಬಾಯಲ್ಲೂ ಕನ್ನಡವನ್ನು ಮಾತನ್ನಾಡಿಸಿದ್ದಾರೆ.

Manish Pandey Speaks In Kannada

ಪುಣೆ(ಎ.27): ನಿನ್ನೆಯ ಪುಣೆ ವಿರುದ್ಧದ ಪಂದ್ಯದಲ್ಲಿ KKR ತಂಡದ ಕನ್ನಡಿಗ ಮನೀಶ್​​ ಪಾಂಡೆ ಮೈದಾನದಲ್ಲಿ ಕನ್ನಡದ ಕಂಪು ಸುರಿಸಿದ್ದಾರೆ. ಅಷ್ಟೇ ಅಲ್ಲ ಜಿಂಬಾಬ್ವೆಯ ಕಾಮೆಂಟೇಟರ್​​​ ಪೊಮಿ ಮಬಾಂಗ್ವೆ ಬಾಯಲ್ಲೂ ಕನ್ನಡವನ್ನು ಮಾತನ್ನಾಡಿಸಿದ್ದಾರೆ.

KKR ಫೀಲ್ಡಿಂಗ್​​ ಮಾಡುತ್ತಿದ್ದ ವೇಳೆ ಮನೀಶ್​​, ರಾಬಿನ್​ ಉತ್ತಪ್ಪರ ಜೊತೆ ಕನ್ನಡದಲ್ಲಿ ಎದುರಾಳಿ ಬ್ಯಾಟ್ಸ್​ಮನ್​'ನ ವೀಕ್ನೆಸ್​​​ ಬಗ್ಗೆ ಮಾತನ್ನಾಡಿಕೊಂಡರು. ಈ ವೇಳೆ ಮನೀಶ್​​ ಕಾಮೆಂಟೇಟರ್​​ ಬಳಿ ಮಾತನ್ನಾಡಲು ಮೈಕ್​​ ಧರಿಸಿದ್ದರು. ಹೀಗಾಗಿ ಮನೀಶ್​​​ ಕನ್ನಡವನ್ನ ಕಾಮೆಂಟೇಟರ್​​​ ಪಾಮಿ ಮಗಾಂಬ್ವ ಕೇಳಿಸಿಕೊಂಡು ದಂಗಾದ್ರು. ನಂತರ ಮನೀಶ್​​​ ಬಳಿ ತಾವೂ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದರು.

Follow Us:
Download App:
  • android
  • ios