Asianet Suvarna News Asianet Suvarna News

ರೇಖಗಣಿತ ಪಾಠದಲ್ಲಿ ಇರಲಿದೆ ಕೊಹ್ಲಿ ಹೊಡೆತಗಳು: ಗಣಿತವನ್ನ ಹೇಳಿಕೊಡಲು ಬರ್ತಿದ್ದಾರೆ ಕೊಹ್ಲಿ

ನಿಮ್ಮ ಮಕ್ಕಳು ಗಣಿತದ ವಿಷಯದಲ್ಲಿ ವೀಕಾ? ಗಣಿತ ಎಂದರೆ ದೂರ ಅಂದರೆ ದೂರ ಓಡುತ್ತಾರಾ? ಇನ್ನು ಮೆಲೆ ಹಾಗಿರುವುದಿಲ್ಲ. ಇನ್ನು ಮುಂದೆ ಗಣಿತ​​​ ಸಬ್ಜೆಕ್ಸ್​​​ ಅಂದ್ರೆ ಮಕ್ಕಳೆಲ್ಲಾ ಸಖತ್​​ ಖುಷಿ ಪಡ್ತಾರೆ. ಕಾರಣ ಇನ್ಮೇಲೆ ಅವರ ಇಷ್ಟವಾದ ಕ್ರಿಕೆಟರ್​​, ಗಣಿತದ ಪಾಠದಲ್ಲಿ ಇರ್ತಾರೆ. ಯಾರಪ್ಪಾ ಆ ಕ್ರಿಕೆಟರ್​​ ನಿಮ್ಮ ಮಕ್ಕಳ ಗಣಿತ ಪುಸ್ತಕದಲ್ಲಿ ಕಾಣಿಸಿಕೊಳ್ಳುವುದು ಅಂತೀರಾ..?

Kohlis Shots In Mathematics

ನಿಮ್ಮ ಮಕ್ಕಳು ಗಣಿತದ ವಿಷಯದಲ್ಲಿ ವೀಕಾ? ಗಣಿತ ಎಂದರೆ ದೂರ ಅಂದರೆ ದೂರ ಓಡುತ್ತಾರಾ? ಇನ್ನು ಮೆಲೆ ಹಾಗಿರುವುದಿಲ್ಲ. ಇನ್ನು ಮುಂದೆ ಗಣಿತ​​​ ಸಬ್ಜೆಕ್ಸ್​​​ ಅಂದ್ರೆ ಮಕ್ಕಳೆಲ್ಲಾ ಸಖತ್​​ ಖುಷಿ ಪಡ್ತಾರೆ. ಕಾರಣ ಇನ್ಮೇಲೆ ಅವರ ಇಷ್ಟವಾದ ಕ್ರಿಕೆಟರ್​​, ಗಣಿತದ ಪಾಠದಲ್ಲಿ ಇರ್ತಾರೆ. ಯಾರಪ್ಪಾ ಆ ಕ್ರಿಕೆಟರ್​​ ನಿಮ್ಮ ಮಕ್ಕಳ ಗಣಿತ ಪುಸ್ತಕದಲ್ಲಿ ಕಾಣಿಸಿಕೊಳ್ಳುವುದು ಅಂತೀರಾ..?

ಡೋಂಟ್​​ ವರಿ... ಇನ್ಮುಂದೆ ಮ್ಯಾಥ್ಸ್​​​ ಅವರ ಫೇವರೇಟ್​​​ ಸಬ್ಜೆಕ್ಟ್​​ ಆಗಲಿದೆ..!

ಇನ್ಮುಂದೆ ನಿಮ್ಮ ಮಕ್ಕಳ ಮೆಥಮೆಟಿಕ್ಸ್​​​ ಮಾರ್ಕ್ಸ್​ ಕಮ್ಮಿ ಬಂತು ಎನ್ನುವ ಯೋಚನೆ ಇರುವುದಿಲ್ಲ. ಮ್ಯಾಥ್ಸ್​​​ ಅಂದ್ರೆ ಕಿಲೋಮೀಟರ್​​ ದೂರ ಓಡುತ್ತಿದ್ದ ಮಕ್ಕಳಿಗೆ ಇನ್ಮುಂದೆ ಮ್ಯಾಥ್ಸ್​​​ ಅವರ ಫೇವರೇಟ್​​​ ಸಬ್ಜೆಕ್ಸ್​​​ ಆಗಲಿದೆ. ಕಾರಣ ಅವರ ಗಣಿತದ ಪಾಠಕ್ಕೆ ಟೀಂ ಇಂಡಿಯಾದ ಲೆಜೆಂಡ್​​ ಒಬ್ಬರು ಸಹಾಯ ಮಾಡಲಿದ್ದಾರೆ. ಗಣಿತವನ್ನ ಅರ್ಥ ಮಾಡಿಕೊಳ್ಳಲು ಟೀಂ ಇಂಡಿಯಾದ ಬ್ಯಾಟ್ಸ್​​'ಮನ್​ನ ಶಾಟ್​​ಗಳನ್ನೇ ಉದಾಹರಣೆಯಾಗಿ ಕಲಿಯಲಿದ್ದಾರೆ ನಿಮ್ಮ ಮಕ್ಕಳು.

ಗಣಿತ ಪಾಠಕ್ಕೆ ವಿರಾಟ್​​ ಕೊಹ್ಲಿ ಮಾರ್ಗದರ್ಶನ: ಕೊಹ್ಲಿಯ ಶಾಟ್​​ಗಳೇ ಜೋಮೆಟ್ರಿ ಪಾಠ..!

ವಿರಾಟ್​​ ಕೊಹ್ಲಿ, ಸದ್ಯ ಭಾರತದ ಯೂತ್​​ ಐಕಾನ್​​. ಕೇವಲ ಕ್ರಿಕೆಟ್​​ ಅಭಿಮಾನಿಗಳಷ್ಟೇ ಅಲ್ಲ ಭಾರತದ ಪ್ರತೀ ಪ್ರಜೆಯೂ ವಿರಾಟ್​​​ ಕೊಹ್ಲಿಯನ್ನ ಇಷ್ಟ ಪಡ್ತಾರೆ. ಅದರಲ್ಲೂ ಚಿಕ್ಕ ಮಕ್ಕಳ್ಳಂತೂ ಕೊಹ್ಲಿಯನ್ನು ದೇವರಂತೆ ಆರಾಧಿಸುತ್ತಾರೆ. ತಮ್ಮ ಪುಸ್ತಕಗಳಲ್ಲೆಲ್ಲಾ ಕೊಹ್ಲಿಯ ಚಿತ್ರಗಳನ್ನೇ ಇಟ್ಟುಕೊಂಡಿರುತ್ತಾರೆ. ಎಲ್ಲೇ ಹೋದ್ರೂ ಕೊಹ್ಲಿಯ ಜಪವನ್ನೇ ಮಾಡ್ತಿರ್ತಾರೆ. ಕೊಹ್ಲಿಯ ಪ್ರತೀ ಶಾಟನ್ನೂ ಇಮಿಟೇಟ್​​ ಮಾಡುತ್ತಿರುತ್ತಾರೆ. ಅಷ್ಟು ಸೊಗಸಾಗಿ ಇರುತ್ತದೆ ಕೊಹ್ಲಿಯ ಶಾಟ್'​​​​ಗಳು.

ಇಂತಹ ಕೊಹ್ಲಿ ತಮ್ಮ ಅದ್ಭುತ ಶಾಟ್'​​ಗಳ ನೆರವಿನಿಂದ ಪುಟ್ಟ ಪುಟ್ಟ ಅಭಿಮಾನಿಗಳಿಗೆ ಗಣಿತ ಪಾಠ ಮಾಡಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಹೇಟೆಸ್ಟ್​​​ ಸಬ್ಜೆಕ್ಟ್ ಆದ ಮ್ಯಾಥ್ಸ್​​ ಅನ್ನ ಸುಲಭಗೊಳಿಸಲು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆದ್ರೆ ಕೊಹ್ಲಿ ಸ್ವತಃ ಮಕ್ಕಳಿಗೆ ಟ್ಯೂಷನ್ಸ್​​​ ಮಾಡುವುದಿಲ್ಲ ಬದಲಿಗೆ ಅವರ ಶಾಟ್​​​ಗಳು ಮಕ್ಕಳಿಗೆ ಗಣಿತ ಪಾಠಕ್ಕೆ ನೆರವಾಗುತ್ತಿವೆ.

ನಿಮಗೆ ಆಶ್ಚರ್ಯವಾಗಬಹುದು ಕೊಹ್ಲಿಯ ಹೊಡೆತಗಳು ಮಕ್ಕಳಿಗೆ ಸಹಾಯವಾಗುತ್ತೆ ಅಂತ. ಇಲ್ಲೇ ಇರೋದು ನೋಡಿ ಟ್ವಿಸ್ಟ್​​​. ಸದ್ಯ ಮಕ್ಕಳಿಗೆ ಆನ್'​ಲೈನ್​​​ ಮೂಲಕ ಪಾಠ ಹೇಳಿಕೊಡುವ ಆ್ಯಪ್​​ ಒಂದು ಕೊಹ್ಲಿಯ ಶಾಟ್​ಗಳನ್ನ ಬಳಸಿಕೊಂಡು ಮಕ್ಕಳಿಗೆ  ಟ್ಯೂಷನ್​ ಮಾಡುತ್ತಿದೆ.

ಹೇಳಿ ಕೇಳಿ ಕೊಹ್ಲಿ ಸದ್ಯ ಮಕ್ಕಳ ಹಾಟ್​​ ಫೇವರೇಟ್​​​​ ಇದನ್ನೇ ಮನದಲ್ಲಿಟ್ಟುಕೊಂಡು ಆನ್​ಲೈನ್​​ ಶೈಕ್ಷಣಿಕ ಆ್ಯಪ್​​​ ಆದ ಬಿಜುಸ್. ಜಿಯೋಮೆಟ್ರಿ ಪಾಠಕ್ಕಾಗಿ ಕೊಹ್ಲಿಯ ಶಾಟ್​​ಗಳನ್ನ ಉದಾಹರಣೆಗೆ ಬಳಸಿಕೊಂಡು ಮಕ್ಕಳಿಗೆ ಇಷ್ಟವಾಗುವಂತೆ, ಅವರಿಗೆ ಅರ್ಥವಾಗುವಂತೆ ಭೋಧಿಸುತ್ತಿದ್ದಾರೆ.

ವಿರಾಟ್​​ ಕೊಹ್ಲಿಯ ಕವರ್​​​ ಡ್ರೈವ್​​, ರಿವರ್ಸ್​​​ ಸ್ವೀಪ್​​, ಅಪ್ಪರ್​​​ ಕಟ್​​​, ಇನ್​ಸೈಡ್​​​ ಔಟ್​​ ಶಾಟ್​​​ಗಳನ್ನ ಶಿಕ್ಷಕರು ರೇಖಾ ಗಣಿತದ ಕೋನವನ್ನ ಮತ್ತು ವಕ್ರಾಕೃತಿಗಳನ್ನ ವಿವರಿಸಲು ಬಳಸುತ್ತಿದ್ದಾರೆ. ಮಕ್ಕಳಿಗೆ ಕೊಹ್ಲಿಯ ಶಾಟ್​​ಗಳ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವುದರಿಂದ ಅವರ ಶಾಟ್​​ಗಳು ಈಗ ಅವರ ರೇಖಾಗಣಿತದ ಪಾಠದಲ್ಲೂ ಬಳಸಲಾಗುತ್ತಿದೆ.

ಒಟ್ಟಿನಲ್ಲಿ ಇದುವರೆಗೂ ತಮ್ಮ ಅದ್ಭುತ ಹೊಡೆತಗಳಿಂದ ಇಡೀ ವಿಶ್ವವನ್ನೇ ರಂಜಿಸಿದ್ದ ವಿರಾಟ್​​ ಕೊಹ್ಲಿ ಈಗ ಮಕ್ಕಳ ಪಾಠದಲ್ಲೂ ರಾರಾಜಿಸೋ ಮೂಲಕ ಕಲಿಕೆಗೆ ನೆರವಾಗ್ತಿರೋದು ನಿಜಕ್ಕೂ ಖುಷಿಯ ವಿಚಾರ. ಒಟ್ಟಿನಲ್ಲಿ ನಮ್ಮ ಡೆಲ್ಲಿ ಡ್ಯಾಷರ್​​​ ಯಾವ ಯಾವ ರೀತಿಯಲೆಲ್ಲಾ ಉಪಯೋಗವಾಗ್ತಾರೋ ದೇವರೇ ಬಲ್ಲ.

 

Follow Us:
Download App:
  • android
  • ios