ಏಪ್ರಿಲ್​​ 5ರಿಂದ ಐಪಿಎಲ್‌ ಹಬ್ಬ
sports
By Suvarna Web Desk | 06:28 AM February 16, 2017

47 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಪ್ರತಿ ತಂಡ 14 ಪಂದ್ಯಗಳಲ್ಲಿ ಸೆಣೆಸಲಿವೆ.

ನವದೆಹಲಿ (ಫೆ.16): ಬಹು ನಿರೀಕ್ಷಿತ ಐಪಿಎಲ್'ನ 10ನೇ ಆವೃತ್ತಿ ಏಪ್ರಿಲ್ 5 ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

ಏಪ್ರಿಲ್ 5ರಿಂದ ಮೇ 21ರವರೆಗೆ ಪಂದ್ಯಾವಳಿ ನಡೆಯಲಿದೆ. ಉದ್ಘಾಟನಾ ಪಂದ್ಯವು ಹೈದರಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ ರೈಜರ್ಸ್‌ ಹೈದರಾಬಾದ್ ತಂಡದ ನಡುವೆ ನಡೆಯಲಿದೆ.

47 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಪ್ರತಿ ತಂಡ 14 ಪಂದ್ಯಗಳಲ್ಲಿ ಸೆಣೆಸಲಿವೆ.

10 ಅಂಕಣಗಳಲ್ಲಿ ನಡೆಯಲಿರುವ ಪಂದ್ಯಗಳು ತವರು ನೆಲದಲ್ಲಿ 7 ಪಂದ್ಯಗಳನ್ನು ಆಡಲು ಅವಕಾಶ ಪಡೆದಿವೆ.

Show Full Article