Asianet Suvarna News Asianet Suvarna News

ಕ್ಯಾಂಡಿಡೇಟ್ಸ್‌ ಚೆಸ್‌: ವಿಶ್ವ ನಂ.3 ಹಿಕರು ವಿರುದ್ಧ ವಿದಿತ್‌ಗೆ ಸತತ 2ನೇ ಜಯ

ಭಾನುವಾರ ರಾತ್ರಿ ನಡೆದ ಮುಕ್ತ ವಿಭಾಗದ 9ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಆರ್.ಪ್ರಜ್ಞಾನಂದ ಹಾಗೂ ಡಿ.ಗುಕೇಶ್‌ ಡ್ರಾಗೆ ತೃಪ್ತಿಪಟ್ಟುಕೊಂಡರು. ಇವರಿಬ್ಬರ ನಡುವಿನ ಮೊದಲ ಮುಖಾಮುಖಿಯೂ ಡ್ರಾದಲ್ಲಿ ಅಂತ್ಯಗೊಂಡಿತ್ತು. ಸದ್ಯ ಗುಕೇಶ್‌ 5.5 ಅಂಕದೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 5 ಅಂಕದೊಂದಿಗೆ 2ನೇ ಸ್ತಾನ ಕಾಯ್ದುಕೊಂಡಿದ್ದಾರೆ.

Candidates Chess 2024 Vidit Gujrathi beats Hikaru Nakamura kvn
Author
First Published Apr 16, 2024, 10:21 AM IST

ಟೊರೊಂಟೊ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಗುಜರಾತಿ 2024ರ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ವಿಶ್ವ ನಂ.3, ಅಮೆರಿಕದ ಹಿಕರು ನಕಮುರಾ ವಿರುದ್ಧ ಸತತ 2ನೇ ಗೆಲುವು ಸಾಧಿಸಿದ್ದಾರೆ. ಇದರ ಹೊರತಾಗಿಯೂ ವಿದಿತ್‌ ಅವರು ನಕಮುರಾ ಜೊತೆ ಜಂಟಿ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇಬ್ಬರೂ ತಲಾ 4.5 ಅಂಕಗಳನ್ನು ಹೊಂದಿದ್ದಾರೆ.

ಭಾನುವಾರ ರಾತ್ರಿ ನಡೆದ ಮುಕ್ತ ವಿಭಾಗದ 9ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಆರ್.ಪ್ರಜ್ಞಾನಂದ ಹಾಗೂ ಡಿ.ಗುಕೇಶ್‌ ಡ್ರಾಗೆ ತೃಪ್ತಿಪಟ್ಟುಕೊಂಡರು. ಇವರಿಬ್ಬರ ನಡುವಿನ ಮೊದಲ ಮುಖಾಮುಖಿಯೂ ಡ್ರಾದಲ್ಲಿ ಅಂತ್ಯಗೊಂಡಿತ್ತು. ಸದ್ಯ ಗುಕೇಶ್‌ 5.5 ಅಂಕದೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 5 ಅಂಕದೊಂದಿಗೆ 2ನೇ ಸ್ತಾನ ಕಾಯ್ದುಕೊಂಡಿದ್ದಾರೆ.

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ ಮತ್ತೊಂದು ಸೋಲನುಭವಿಸಿದ್ದಾರೆ. ಅವರು ಚೀನಾದ ಝೊಂಗ್ಯು ಟಾನ್‌ ವಿರುದ್ದ ಪರಾಭವಗೊಂಡರು. ಕೊನೆರು ಹಂಪಿ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಕೊನೆರು 4 ಅಂಕದೊಂದಿಗೆ ಜಂಟಿ 5ನೇ, ವೈಶಾಲಿ 2.5 ಅಂಕದೊಂದಿಗೆ ಕೊನೆ ಸ್ಥಾನದಲ್ಲೇ ಬಾಕಿಯಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ನೇರಳೆ ಬಣ್ಣದ ಟ್ರ್ಯಾಕ್..!

ಡಿಸ್ಕಸ್‌ ಥ್ರೋ: 38 ವರ್ಷದ ವಿಶ್ವ ದಾಖಲೆ ಮುರಿದ ಅಲೆಕ್ನಾ

ರೊಮಾನಾ (ಅಮೆರಿಕ): 1986ರಿಂದ ಇದ್ದ ಡಿಸ್ಕಸ್‌ ಥ್ರೋ ವಿಶ್ವ ದಾಖಲೆಯನ್ನು ಲಿಥುಯೇನಿಯಾದ ಮೈಕೊಲಾಸ್‌ ಅಲೆಕ್ನಾ ಮುರಿದಿದ್ದಾರೆ. ಇಲ್ಲಿ ನಡೆದ ಒಕ್ಲೋಹಾಮ ಎಸೆತಗಳ ಚಾಂಪಿಯನ್‌ಶಿಪ್‌ನಲ್ಲಿ ಅಲೆಕ್ನಾ 74.35 ಮೀ. (243 ಅಡಿ, 11 ಇಂಚು) ದೂರಕ್ಕೆ ಡಿಸ್ಕಸ್‌ ಎಸೆದು, ಜರ್ಮನಿಯ ಜರ್ಗೆನ್‌ ಶ್ಯುಟ್‌ ಹೆಸರಿನಲ್ಲಿದ್ದ 74.08 ಮೀ. (243 ಅಡಿ) ದಾಖಲೆಯನ್ನು ಮುರಿದರು. ಜರ್ಗೆನ್‌ 1986ರ ಜೂ.6ರಂದು ದಾಖಲೆ ಬರೆದಿದ್ದರು.

ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್‌ ವಿರುದ್ಧ ಗೆದ್ದು ಜಂಟಿ ಅಗ್ರಸ್ಥಾನಕ್ಕೇರಿದ ಗುಕೇಶ್‌

ಕೊಡವ ಹಾಕಿ: ಚಂದುರ, ತೀತಮಾಡ ತಂಡಕ್ಕೆ ಜಯ

ನಾಪೋಕ್ಲು: ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯಲ್ಲಿ ಸೋಮವಾರ ವಿವಿಧ ತಂಡಗಳ ನಡುವೆ ಬಿರುಸಿನ ಸ್ಪರ್ಧೆ ನಡೆಯಿತು. ಕುಂಡ್ಯೋಳಂಡ ವಿರುದ್ಧ ತೀತಮಾಡ 5-2 ಅಂತರದ ಜಯ ಗಳಿಸಿತು. ಮಂಡೇಟಿರ ವಿರುದ್ಧ ಮೇವಡ, ಚೆಕ್ಕೆರ ತಂಡ ಪೊಂಜಂಡ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಚಂದುರ ತಂಡಕ್ಕೆ ಕಾಳಿಮಾಡ ವಿರುದ್ಧ 6-5 ಅಂತರದ ಜಯ ಲಭಿಸಿತು. ಮಲ್ಲಜಿರ ವಿರುದ್ಧ ಕಂಬಿರಂಡ, ಬೊಟ್ಟಂಗಡ ವಿರುದ್ಧ ಪುದಿಯೋಕ್ಕಡ, ಅಲ್ಲಾರಮಡ ವಿರುದ್ಧ ಕೊಂಗೆಟಿರ ತಂಡಗಳು ಗೆಲುವು ಸಾಧಿಸಿದವು.
 

Follow Us:
Download App:
  • android
  • ios