Asianet Suvarna News Asianet Suvarna News

Karl Erivan Haub: ಸಾವು ಕಂಡಿದ್ದಾರೆ ಎಂದು ಘೋಷಿಸಲಾಗಿದ್ದ 30 ಸಾವಿರ ಕೋಟಿ ಒಡೆಯ ರಷ್ಯಾದಲ್ಲಿ ಪತ್ತೆ!

ಜರ್ಮನ್-ಅಮೆರಿಕನ್ ಬಿಲಿಯನೇರ್ ಆಗಿದ್ದ ಕಾರ್ಲ್-ಎರಿವಾನ್ ಹಾಬ್, 2018 ರಲ್ಲಿ ಆಲ್ಪ್ಸ್‌ನಲ್ಲಿನ ಹೈಕ್‌ ಸಮಯದಲ್ಲಿ ನಾಪತ್ತೆಯಾಗಿದ್ದರು. 6 ವರ್ಷಗಳ ಬಳಿಕ ಅವರು ರಷ್ಯಾದಲ್ಲಿ ತಮ್ಮ ಪ್ರೇಯಸಿ ಜೊತೆ ವಾಸವಾಗಿರುವುದು ಪತ್ತೆಯಾಗಿದೆ.

Billionaire Karl Erivan Haub Who disappeared during hike found living with mistress 6 years later san
Author
First Published Apr 19, 2024, 2:11 PM IST

ನವದೆಹಲಿ (ಏ.19): ಆರು ವರ್ಷಗಳ ಹಿಂದೆ ಸ್ವಿಜರ್ಲೆಂಡ್‌ನ ಆಲ್ಫ್ಸ್‌ ಪರ್ವತಶ್ರೇಣಿಯಲ್ಲಿ ಹೈಕ್‌ನಲ್ಲಿ ಭಾಗವಹಿಸಿದ್ದ ವೇಳೆ ನಾಪತ್ತೆಯಾಗಿದ್ದ ಜರ್ಮನ್‌ ಅಮೇರಿಕನ್‌ ಬಿಲಿಯನೇರ್‌ ಹಾಗೂ ಟೆಂಗಲ್‌ಮನ್ ಗ್ರೂಪ್‌ನ ( Tengelman Group) ಮಾಲೀಕ  ಕಾರ್ಲ್-ಎರಿವಾನ್ ಹಾಬ್ ರಷ್ಯಾದಲ್ಲಿ ಪತ್ತೆಯಾಗಿದ್ದಾರೆ. ಕಾರ್ಲ್‌ ಎರಿವಾನ್‌ ಹಾಬ್‌ಗಾಗಿ ದೊಡ್ಡ ಮಟ್ಟದ ಹುಡುಕಾಟವನ್ನು ಸ್ವಿಸ್‌ ಹಾಗೂ ಜರ್ಮನಿ ಸರ್ಕಾರಗಳು ನಡೆಸಿದ್ದವು. ಕೊನೆಗೆ ಜರ್ಮನಿ ಕೋರ್ಟ್‌, ಕಾರ್ಲ್-ಎರಿವಾನ್ ಹಾಬ್ ಸಾವು ಕಂಡಿದ್ದಾರೆ ಎಂದು ಘೋಷಣೆ ಮಾಡಿತ್ತು. ಈಗ ಕಾರ್ಲ್‌ ಎರಿವಾನ್‌ ಹಾಬ್‌ ರಷ್ಯಾದಲ್ಲಿ ತಮ್ಮ ಪ್ರೇಯಸಿಯ ಜೊತೆಗೆ ಇರುವುದು ಪತ್ತೆಯಾಗಿದೆ. 2018ರ ಏಪ್ರಿಲ್‌ನಲ್ಲಿ ಸ್ವಿಜರ್ಲೆಂಡ್‌ನ ಝೆರ್ಮಟ್‌ನಲ್ಲಿ ಕೊನೆಯ ಬಾರಿಗೆ ಹಾಬ್‌ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ಸ್ವಿಸ್‌ ರಜೆಯನ್ನು ಆನಂದಿಸುತ್ತಿದ್ದರು. ಹಾಬ್‌ ನಾಪತ್ತೆ ಸುದ್ದಿ ಬೆಳಕಿಗೆ ಬಂದ ನಂತರ, ಸ್ವಿಸ್ ಮತ್ತು ಜರ್ಮನ್ ಸರ್ಕಾರವು ಭಾರೀ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಹಬ್ ಪತ್ತೆಗಾಗಿ ಐದು ಹೆಲಿಕಾಪ್ಟರ್‌ಗಳು 6 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದವು.

ಹಾಬ್ ಟೆಂಗಲ್‌ಮನ್ ಗ್ರೂಪ್‌ನ ಮಾಲೀಕ: ಶೋಧ ಕಾರ್ಯಾಚರಣೆಯ ಸಮಯದಲ್ಲಿ ಹಾಬ್ ಪತ್ತೆಯಾಗದಿದ್ದಾಗ, 2021 ರಲ್ಲಿ ಜರ್ಮನ್ ನ್ಯಾಯಾಲಯವು ಅವರು ಸಾವು ಕಂಡಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿತ್ತು. Karl Erivan Haub ರಿಟೇಲ್‌ ದೈತ್ಯ ಟೆಂಗಲ್‌ಮನ್‌ ಗ್ರೂಪ್ ಮಾಲೀಕರಾಗಿದ್ದರು, ಇದು ವಿಶ್ವದಾದ್ಯಂತ 75 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ನ್ಯಾಯಾಲಯದ ತೀರ್ಪಿನ ನಂತರ, ಕಂಪನಿಯನ್ನು ಅವರ ಸಹೋದರ ಕ್ರಿಶ್ಚಿಯನ್ ನಡೆಸುತ್ತಿದ್ದಾರೆ. ಹಾಬ್‌ಗೆ ಇಬ್ಬರು ಮಕ್ಕಳಿದ್ದಾರೆ.

ಹಾಬ್ ನಾಪತ್ತೆಯಾದ ದಿನ ಪ್ರೇಯಸಿ ಎರ್ಮಿಲೋವಾಗೆ 13 ಬಾರಿ ಕರೆ ಮಾಡಿ ಒಂದು ಗಂಟೆ ಮಾತನಾಡಿದ್ದರು. ಇದು ಉಭಯ ದೇಶಗಳ ಜಂಟಿ ತನಿಖಾ ಸಂಸ್ಥೆಗೆ ಆಕೆಯ ಮೇಲೆ ಅನುಮಾನ ಮೂಡಿಸಿತ್ತು. ಬಹುಶಃ ಕೋಟ್ಯಧಿಪತಿ ಉದ್ಯಮಿ ಸಾವು ಕಂಡಿರುವುದೇ ಸುಳ್ಳು ಎಂದು ಏಜೆನ್ಸಿಗೂ ಅನುಮಾನ ಬಂದಿತ್ತು. ಅದರಂರೆ, ಏಜೆನ್ಸಿ ಮಾಸ್ಕೋದಲ್ಲಿ ತನಿಖೆ ನಡೆಸಿದಾಗ, ಹಾಬ್ ತನ್ನ ಪ್ರೇಯಸಿ ವೆರೋನಿಕಾ ಎರ್ಮಿಲೋವಾ ಅವರೊಂದಿಗೆ ರಷ್ಯಾದಲ್ಲಿಯೇ ವಾಸವಿದ್ದಾರೆ ಎನ್ನುವುದು ಗೊತ್ತಾಗಿದೆ. 2008 ರಲ್ಲಿ, ಹಾಬ್ ಮತ್ತು ಎರ್ಮಿಲೋವಾ ಮಾಸ್ಕೋದಲ್ಲಿ ಒಟ್ಟಿಗೆ ಈ ಯೋಜನೆ ರೂಪಿಸಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ಇದರ ನಂತರ, ಹಾಬ್ ಮತ್ತೆ ಮತ್ತೆ ರಷ್ಯಾಕ್ಕೆ ಭೇಟಿ ನೀಡುತ್ತಿದ್ದರು. ಎರ್ಮಿಲೋವಾ ರಷ್ಯಾದ ಭದ್ರತಾ ಸಂಸ್ಥೆ ಎಫ್‌ಎಸ್‌ಬಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಹಾಬ್ ರಷ್ಯಾದಲ್ಲಿಯೇ ವಾಸವಿದ್ದಾರೆ.

'ಅತಿಯಾದ ಪೆಸ್ಟಿಸೈಡ್‌..' ಎವರೆಸ್ಟ್‌ ಫಿಶ್‌ ಕರಿ ಮಸಾಲಾ ವಿರುದ್ಧ ಸಿಂಗಾಪುರ ಕ್ರಮ!

ಆರ್‌ಟಿಎಲ್‌ ಪತ್ರಿಕೆಯ ತನಿಖಾ ಪತ್ರಕರ್ತ ಲಿವ್ ವಾನ್ ಬೊಟ್ಟಿಚರ್ ಅವರು 2021 ರಲ್ಲಿ ಮಾಸ್ಕೋದಲ್ಲಿ ಹಾಬ್ ಇದ್ದ ಛಾಯಾಚಿತ್ರಗಳನ್ನು ತೆಗೆದಿದ್ದಾಗಿ ಹೇಳಿದ್ದಾರೆ. "ನನಗೆ ತಿಳಿದಿರುವಂತೆ, ಈ ಫೋಟೋಗಳನ್ನು ಕ್ರಿಶ್ಚಿಯನ್ ಹಾಬ್ ಮತ್ತು ಇಬ್ಬರು ಆಂತರಿಕ ತನಿಖಾಧಿಕಾರಿಗಳ ಪರವಾಗಿ ಇಸ್ರೇಲಿ-ಅಮೆರಿಕನ್ ಕಂಪನಿಯಿಂದ ಪಡೆಯಲಾಗಿದೆ' ಎಂದು ತಿಳಿಸಿದ್ದರು.

ಮದುವೆಗೂ ಮುನ್ನ ದೇಶದ ಎರಡು ಪ್ರಮುಖ ದೇವಸ್ಥಾನಕ್ಕೆ 5 ಕೋಟಿ ದಾನ ನೀಡಿದ ಅನಂತ್‌ ಅಂಬಾನಿ!

Follow Us:
Download App:
  • android
  • ios