Asianet Suvarna News Asianet Suvarna News

ರಾಧಾಕೃಷ್ಣ ಗೆದ್ರೆ ಕಲಬುರಗಿಗೆ ತ್ರಿಬಲ್‌ ಗ್ಯಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗಿಳಿಸಿದೆ. ಅಗತ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಸರಬರಾಜು ಮಾಡಲಿಲ್ಲ. ಆದರೂ ಕೂಡಾ ರಾಜ್ಯ ಸರ್ಕಾರ ಪ್ರತಿಯೊಬ್ಬರು ಅಕ್ಕಿ ಖರೀದಿ ಮಾಡಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಿದೆ. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿ‌ಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ‌ ಮಾಡಿಕೊಡಲಾಗಿದೆ. ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ದೇವಾಲಯಗಳ ಹುಂಡಿ, ಅರ್ಚಕರ ಆರತಿ ತಟ್ಟೆ ಎರಡೂ ತುಂಬುತ್ತಿವೆ ಎಂದ ಸಚಿವ ಪ್ರಿಯಾಂಕ್ ಖರ್ಗೆ 

Triple Guarantee for Radhakrishna If Win in Kalaburagi says Minister Priyank Kharge grg
Author
First Published Apr 23, 2024, 4:18 PM IST

ಕಲಬುರಗಿ(ಏ.23):  ಇದು ಅತ್ಯಂತ ಮಹತ್ವದ ಚುನಾವಣೆ. ಇದು ಕೇವಲ ನನ್ನ ಚುನಾವಣೆಯಲ್ಲ.‌ ದೇಶ ಹಾಗೂ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆ. ಹಾಗಾಗಿ ಈ ಸಲ ತಮ್ಮನ್ನು ಆಯ್ಕೆ ಮಾಡಿ ಅಭಿವೃದ್ಧಿಗೆ ಸಹಕರಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು. ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದ ಕಪನೂರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮತಯಾಚಿಸಿ ಅವರು ಮಾತನಾಡುತ್ತಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿದ್ದು, ತಮಗೆ ಒಂದು ಅವಕಾಶ ನೀಡಿ ಸಂಸದರನ್ನಾಗಿ ಆಯ್ಕೆ ಮಾಡಿ ಕಳಿಸಿದರೇ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಅವರು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಂಸದರಾಗಿ ಆಯ್ಕೆಯಾಗಿ ಹೋದ ಮೇಲೆ ಉಮೇಶ ಜಾಧವ್ ಐದು ವರ್ಷದಲ್ಲಿ ಏನು ಕೆಲಸ‌ ಮಾಡಿದ್ದೀರಿ ಅದರ ಲೆಕ್ಕ ಕೊಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಜನರಿಗೆ ಉತ್ತರ ನೀಡಲು ಅವರಿಂದ ಆಗುತ್ತಿಲ್ಲ ಹಾಗಾಗಿ ಹೋದಲೆಲ್ಲ ಅವರಿಗೆ ಗೋ ಬ್ಯಾಕ್ ಎಂದು ಅವರ ಪಕ್ಷದ ಕಾರ್ಯಕರ್ತರೇ ಕೂಗುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಕೆಳಗಿಳಿಸಲು ಡಿ.ಕೆ.ಶಿವಕುಮಾರ್‌ ಸಂಚು: ಬಸನಗೌಡ ಯತ್ನಾಳ ಆರೋಪ

ರಾಧಾಕೃಷ್ಣ ಗೆದ್ರೆ ಕಲಬುರಗಿಗೆ ತ್ರಿಬಲ್‌ ಗ್ಯಾರಂಟಿ:

ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗಿಳಿಸಿದೆ. ಅಗತ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಸರಬರಾಜು ಮಾಡಲಿಲ್ಲ. ಆದರೂ ಕೂಡಾ ರಾಜ್ಯ ಸರ್ಕಾರ ಪ್ರತಿಯೊಬ್ಬರು ಅಕ್ಕಿ ಖರೀದಿ ಮಾಡಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಿದೆ. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿ‌ಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ‌ ಮಾಡಿಕೊಡಲಾಗಿದೆ. ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ದೇವಾಲಯಗಳ ಹುಂಡಿ, ಅರ್ಚಕರ ಆರತಿ ತಟ್ಟೆ ಎರಡೂ ತುಂಬುತ್ತಿವೆ ಎಂದರು.

ಮೋದಿ ಪರಿವಾರ ಎಂದು ಜಾಹೀರಾತು ನೀಡಿದ್ದನ್ನು ಪ್ರಸ್ತಾಪಿಸಿದ ಖರ್ಗೆ ಸ್ವಂತ ಪರಿವಾರವನ್ನೆ ನೋಡಿಕೊಳ್ಳಲು ಆಗದ ಮೋದಿ ದೇಶದ ಜನರನ್ನು ತಮ್ಮ ಪರಿವಾರ ಎಂದು ಕರೆದಿದ್ದಾರೆ ಎಂದು ಸಚಿವರು ವ್ಯಂಗ್ಯವಾಡಿದರು.
ಜಾಧವ್ ವಂದೇ ಭಾರತ ಟ್ರೇನ್ ಬಿಡಿಸಿದ್ದೆ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ‘ವಂದೇ ಭಾರತ ನಡೆದಿದ್ದು ಕೇವಲ ಒಂದೇ ವಾರ’ ಎಂದು ಟೀಕಿಸಿದರು. ಕಾಂಗ್ರೆಸ್ ಏನು ಮಾಡಿದೆ ಎಂದು ಜಾಧವ್ ಕೇಳುತ್ತಿದ್ದಾರೆ, ಅವರು ಓದಿದ್ದು ಕಾಂಗ್ರೆಸ್ ಕಟ್ಟಿದ ಕಾಲೇಜಿನಲ್ಲಿ. ನಂತರ ಕೆಲಸ ದೊರಕಿದ್ದು ಕೂಡಾ ಕಾಂಗ್ರೆಸ್ ಸ್ಥಾಪಿಸಿದ ಆಸ್ಪತ್ರೆಗೆ ಯಲ್ಲಿ. ಆಮೇಲೆ ರಾಜಕೀಯ ಪ್ರವೇಶ ಮಾಡಿದ್ದು ಕಾಂಗ್ರೆಸ್ ನಲ್ಲಿ ತದನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಸೇರಿದ್ದು ಕೂಡಾ ಕಾಂಗ್ರೆಸ್ ನಲ್ಲೇ ಹಾಗೂ ಶಾಸಕ ಆಗಿದ್ದು ಕೂಡಾ ಕಾಂಗ್ರೆಸ್ ನಿಂದಲೇ. ಜಾಧವ ಅವರೇ ಕಾಂಗ್ರೆಸ್ ಮತ್ತೇನು ಮಾಡಬೇಕು. ರಾಧಾಕೃಷ್ಣ ದೊಡ್ಡಮನಿ ಅವರಿಗೆ ಒಂದು ಅವಕಾಶ ಕೊಟ್ಟು ನೋಡಿ, ಜಿಲ್ಲೆಗೆ ತ್ರಿಬಲ್ ಗ್ಯಾರಂಟಿ‌ ನಾನು ಕೊಡುತ್ತೇನೆ ಎಂದು ಪ್ರಿಯಾಂಕ್ ಆಶ್ವಾಸನೆ ನೀಡಿದರು. ಸಚಿವ ರಹೀಂ ಖಾನ್, ಶಾಸಕಿ ಕನೀಜ್ ಫಾತೀಮಾ, ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿದರು.

ಎಂಎಲ್‌ಸಿ ಅರವಿಂದ ಅರಳಿ, ಡಿಸಿಸಿ ಅದ್ಯಕ್ಷ ಜಗದೇವ ಗುತ್ತೇದಾರ, ರೇಣುಕಪ್ಪ ಪೊಲೀಸ್ ಪಾಟೀಲ್, ದೇವೇಂದ್ರಪ್ಪ ಮರತೂರು, ರಾಜು ಕಪನೂರು, ದೇವೆಂದ್ರಪ್ಪ ಕಪನೂರು, ರಾಜಗೋಪಾಲರೆಡ್ಡಿ, ಲಚ್ಚಪ್ಪ ಜಮಾದಾರ, ರಮೇಶ ಬಿರಾದಾರ ಸೇರಿದಂತೆ ಹಲವರಿದ್ದರು.

Follow Us:
Download App:
  • android
  • ios