Asianet Suvarna News Asianet Suvarna News

LIVE: Gulbarga Lok Sabha Elections 2024: ಖರ್ಗೆಗೆ ಕಲಬುರಗಿ ಮರಳಿ ಕೊಡಿಸುವರೇ ರಾಧಾಕೃಷ್ಣ, ಪಟ್ಟು ಬಿಡದ ಜಾಧವ್

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆಯಾಗಿದ್ದ ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಖರ್ಗೆ ಅಳಿಯ ಡಾ. ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿಯಿಂದ ಹಾಲಿ ಸಂಸದ ಉಮೇಶ್ ಜಾಧವ್ ಕಣಕ್ಕಿಳಿದಿದ್ದಾರೆ.

Karnataka Lok Sabha Election 2024 Mallikarjun Kharge native Gulbarga constituency fight Umesh Jadhav sat
Author
First Published May 7, 2024, 12:32 PM IST

ಗುಲ್ಬರ್ಗಾ ಲೋಕಸಭಾ ಕ್ಷೇತ್ರ ಮತದಾನದ ಲೈವ್ ಅಪ್ಡೇಟ್ಸ್: ಸಂಜೆ 5 ಗಂಟೆಗೆ ಶೇ.57.20 ಮತದಾನ

ಕಲಬುರಗಿ (ಮೇ 07): ರಾಜ್ಯದ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರವಾಗಿರುವ ಗುಲಬರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಡಾ. ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿಯಿಂದ ಹಾಲಿ ಸಂಸದ ಉಮೇಶ್ ಜಾಧವ್ ಕಣಕ್ಕಿಳಿದಿದ್ದಾರೆ. ಆದರೆ, ಈ ಬಾರಿ ಭರ್ಜರಿ ಪೈಪೋಟಿ ಎದುರಾಗಿದ್ದು ಮತದಾರರು ಯಾರನ್ನು ಬೆಂಬಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಸಲ ಸೋಲಿಲ್ಲದ ಸರದಾರ ಖ್ಯಾತಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದ ಬಿಜೆಪಿಯ ಡಾ.ಉಮೇಶ ಜಾಧವ್ ಪುನರಾಯ್ಕೆ ಬಯಸಿ ಅಖಾಡದಲ್ಲಿದ್ದರೆ, ಎಐಸಿಸಿ ಅಧ್ಯಕ್ಷ ಖರ್ಗೆ ತಾವು ಚುನಾವಣಾ ಕಣದಿಂದ ಹೊರಗುಳಿದು ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಿ ಸೋಲಿನ ಸೇಡು ತೀರಿಸಿಕೊಳ್ಳಲು ಸಾಕಷ್ಟು ತಂತ್ರ ಹೂಡುತ್ತ ಕಸರತ್ತು ನಡೆಸಿದ್ದಾರೆ. ಮೇಲ್ನೋಟಕ್ಕೆ ಜಾಧವ್-ದೊಡ್ಡಮನಿ ಮಧ್ಯೆ ಸ್ಪರ್ಧೆ ಎನಿಸಿದರೂ ಇಲ್ಲಿರೋದು ಜಾಧವ್ ವರ್ಸಸ್ ಮಲ್ಲಿಕಾರ್ಜುನ ಖರ್ಗೆ ಫೈಟ್ ಎದುರಾಗಿದೆ.

India General Elections 2024 Live: ಬೆಳಗ್ಗೆ 11 ಗಂಟೆಗೆ ದೇಶದಲ್ಲಿ ಶೇ.25ರಷ್ಟು ಮತದಾನ ...

ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ವಿವರ:
ಒಟ್ಟು ಅಭ್ಯರ್ಥಿಗಳು - 14
ಒಟ್ಟು ಮತದಾರರು- 20,98,202
ಪುರುಷ‌ ಮತದಾರರು- 10,49,959 
ಮಹಿಳಾ ಮತದಾರರು- 10,47,961
ನವ ಮತದಾರರು: 36,543
ಒಟ್ಟು ಮತಗಟ್ಟೆಗಳು - 2,166

ಕಲಬುರಗಿಯಲ್ಲಿ ಮತದಾನ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:  ಕಲಬುರಗಿಯ ಬಸವನಗರ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ  ಪತ್ನಿ ರಾಧಾಬಾಯಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಮತದಾನದ ಹಕ್ಕು ಆರಂಭವಾದಗಿನಿಂದ ಕಲಬುರಗಿಯ ಬಸವನಗರದಲ್ಲೇ ಮತದಾನ ಮಾಡುತ್ತಿದ್ದೆನೆ. ಎಷ್ಟೋ ಜನ ಮತದಾನ ವನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ, ನಾನು ಮಾತ್ರ ಬಸವನಗರದ ಇದೇ ಮತಗಟ್ಟೆಯಿಂದಲೇ ಮತದಾನ ಮಾಡುತ್ತಿದ್ದೇನೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಢಮನಿ ಗೆಲ್ಲುತ್ತಾರೆ ಎನ್ನುವ ಭರವಸೆ ಇದೆ.  ನನ್ನನ್ನು ಎಐಸಿಸಿ‌ಅದ್ಯಕ್ಷ ಸ್ಥಾನಕ್ಕೆ ತಂದು‌ ನಿಲ್ಲಿಸಿದ್ದಾರೆ, ಈ ಜನರೇ ಕಾರಣ ಅವರಿಗೆ ಧನ್ಯವಾದಗಳು. ಇಂದು ಚುನಾವಣೆ ನಡೆಯುತ್ತಿರುವ ಎಲ್ಲಾ 14 ಕ್ಷೇತ್ರದಲ್ಲಿ ಒಳ್ಳೆ ವಾತಾವರಣ ಸೃಷ್ಠಿಯಾಗಿದೆ. ದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ಪರ ಹೆಚ್ಚು ಒಲವು ವ್ಯಕ್ತವಾಗುತ್ತಿದೆ ಎಂದು ಹೇಳಿದರು. 

Karnataka Lok Sabha Election 2024 Mallikarjun Kharge native Gulbarga constituency fight Umesh Jadhav sat

ಸಂಸದ ಉಮೇಶ್ ಜಾಧವ್ ಮತದಾನ: ಕಲಬುರಗಿ ನಗರದ ಜವಾಹರ್ ಹಿಂದ್ ಕನ್ನಡ ಶಾಲೆಯಲ್ಲಿ ಮತದಾನ ಮಾಡಿದರು.  ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಇವತ್ತು ನನ್ನ ಲಕ್ಕಿ ದಿನವಾಗಿದೆ. ಮಂಗಳವಾರ ನನ್ನ ಪಾಲಿಗೆ ಶುಭ ದಿನ. ಭಜರಂಗ ಬಲಿ ದಿನ ಮಂಗಳವಾರ.. ನನಗೆ ಗೆಲುವು ದಕ್ಕುತ್ತೆ ಎನ್ನುವ ವಿಶ್ವಾಸ ಇದೆ. ಕಲಬುರಗಿಯಲ್ಲಿ ಬಿಸಿಲು ತೀವ್ರಗೊಳ್ಳುವ ಕಾರಣ ತಂಪಾದ ವಾತಾವರಣ ಇದ್ದಾಗ ಮತದಾನ ಮಾಡಿ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ. ಕಲಬುರಗಿಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಮತದಾರರು ಮೋದಿ ಕೈ ಬಲಪಡಿಸುತ್ತಾರೆಂಬ ವಿಶ್ವಾಸ ಇದೆ ಎಂದರು.

Follow Us:
Download App:
  • android
  • ios