Asianet Suvarna News Asianet Suvarna News

ಬೆಂಗಳೂರು ಕೇಂದ್ರ Elections 2024; ಶಾಂತಿಯುತವಾಗಿ ನಡೆದ ಮತದಾನ

ಕಳೆದ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಗೆದ್ದ ಸಂಸದ ಪಿ.ಸಿ. ಮೋಹನ್‌ಗೆ ಈ ಬಾರಿ ಮುಸ್ಲಿಂ ನಾಯಕ ಮನ್ಸೂರ್ ಅಲಿ ಖಾನ್ ಅವರಿಂದ ಪ್ರಭಲ ಪೈಪೋಟಿ ಎದುರಾಗಿದೆ. 

Karnataka lok sabha election 2024 Bengaluru Central Constituency PC Mohan Vs Mansoor Ali Khan fight sat
Author
First Published Apr 26, 2024, 12:48 PM IST

ಬೆಂಗಳೂರು ಕೇಂದ್ರ (ಏ.26): ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಪ್ರಭಲ ಪೈಪೋಟಿಯಿಲ್ಲದೇ ಗೆಲ್ಲುತ್ತಿದ್ದ ಹಾಲಿ ಸಂಸದ ಪಿ.ಸಿ. ಮೋಹನ್ ಸತತ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಈ ಬಾರಿ ಬೆಂಗಳೂರು ಕೇಂದ್ರದಲ್ಲಿ ಮುಸ್ಲಿಂ ನಾಯಕ ಮನ್ಸೂರ್ ಅಲಿ ಖಾನ್ ಸ್ಪರ್ಧೆ ಮಾಡಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ.

ರಾಜ್ಯ ರಾಜಧಾನಿಯಲ್ಲಿ ಕಳೆದ ಮೂರು ಲೋಕಸಭಾ ಚುನಾವಣೆಯಿಂದ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ಹಾಲಿ ಸಂಸದ ಪಿ.ಸಿ. ಮೋಹನ್ ಈಗ ನಾಲ್ಕನೇ ಬಾರಿಗೂ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಪಿ.ಸಿ. ಮೋಹನ್ ಗೆಲುವು ಸಾಧಿಸಿದರೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಇನ್ನು ಪ್ರತಿ ಚುನಾವಣೆಯಲ್ಲಿ ಯಾವುದೇ ಗೊಂದಲ ಹಾಗೂ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೇ ಗೆಲುವು ಸಾಧಿಸುತ್ತಿದ್ದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆಂಟ್ರಲ್ ಕಡಿಮೆ ವೋಟಿಂಗ್ 

ಈ ಬಾರಿ ಮುಸ್ಲಿಂ ಮತಗಳು ಒಗ್ಗೂಡಿಸಿಕೊಂಡು ಕೆಲವು ಕಾಂಗ್ರೆಸ್‌ ನಾಯಕರ ಹಿಂದೂ ಮತಗಳನ್ನು ಸೆಳೆದುಕೊಂಡು ಬಿಜೆಪಿಯ ಸಂಸದನಿಗೆ ಸ್ಪರ್ಧೆ ಒಡ್ಡಲು ಮುಸ್ಲಿಂ ನಾಯಕ ಮನ್ಸೂರ್ ಅಲಿಖಾನ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಜೊತೆಗೆ ಇವರಿಗೆ ಸಚಿವ ಜಮೀರ್ ಅಹಮದ್ ಖಾನ್ ಕೂಡ ಹೆಚ್ಚು ಪ್ರಚಾರ ಕೈಗೊಂಡು ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಇವರೊಂದಿಗೆ ಮತ್ತೊಬ್ಬ ಮುಸ್ಲಿಂ ಶಾಸಕ ರಿಜ್ವಾನ್ ಆರ್ಷದ್ ಕೂಡ ಮನ್ಸೂರ್ ಅಲಿಖಾನ್ ಬೆಂಬಲಕ್ಕೆ ನಿಂತಿದ್ದಾರೆ. ಒಟ್ಟಾರೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇಬ್ಬರೂ ಅಭ್ಯರ್ಥಿಗಳು ಪೈಪೋಟಿಯನ್ನು ಎದುರಿಸಲಿದ್ದಾರೆ.

ಬೆಂಗಳೂರು ಕೇಂದ್ರದಲ್ಲಿ ಒಟ್ಟು ಅಭ್ಯರ್ಥಿಗಳು: 24 ಕಣದಲ್ಲಿದ್ದಾರೆ. ಒಟ್ಟು ಮತದಾರರು 24,34,254 ಮತದಾನಕ್ಕೆ ಅರ್ಹರಿದ್ದು, ಶೇ.60 ಮತದಾನ ದಾಟುವ ಸಾಧ್ಯತೆಯೂ ಇಲ್ಲ. ಈ ಪೈಕಿ ಪುರುಷರು 12,54,642 ಹಾಗೂ ಮಹಿಳೆಯರು: 11,78,642 ಇದ್ದಾರೆ. ಜೊತೆಗೆ 29,790 ನವ ಮತದಾರರು ಇದ್ದಾರೆ.

ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ ಮತದಾನ:
ಅಭ್ಯರ್ಥಿಗಳು: 24
ಒಟ್ಟು ಮತದಾರರು: 24,34,254
ಬೆಳಗ್ಗೆ 7 ರಿಂದ 3 ಗಂಟೆವರೆಗೆ ಶೇ.40.10 ಮತದಾನ ಆಗಿದೆ

Follow Us:
Download App:
  • android
  • ios