Asianet Suvarna News Asianet Suvarna News

ಬಳ್ಳಾರಿ ಜೀನ್ಸ್‌ಗೆ ಜಾಗತಿಕ ಮಟ್ಟದಲ್ಲಿ ಸ್ಥಾನ: ಪ್ರಧಾನಿ ಮೋದಿ

ಬಳ್ಳಾರಿ ಜೀನ್ಸ್‌ ಜಾಗತಿಕ ಮಟ್ಟದಲ್ಲಿ "ಮೇಡ್‌ ಇನ್‌ ಇಂಡಿಯಾ" ಸ್ಥಾನಮಾನ ಲಭಿಸುವಂತೆ ಮಾಡಲಾಗುವುದು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

Ballari Jeans have a global position Says PM Modi gvd
Author
First Published Apr 29, 2024, 11:24 AM IST

ಹೊಸಪೇಟೆ (ಏ.29): ಬಳ್ಳಾರಿ ಜೀನ್ಸ್‌ ಜಾಗತಿಕ ಮಟ್ಟದಲ್ಲಿ "ಮೇಡ್‌ ಇನ್‌ ಇಂಡಿಯಾ" ಸ್ಥಾನಮಾನ ಲಭಿಸುವಂತೆ ಮಾಡಲಾಗುವುದು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಬಳ್ಳಾರಿ, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ ಅವರು ಈ ಘೋಷಣೆ ಮಾಡಿದರು. ಈ ಭಾಗದಲ್ಲಿ ಜೀನ್ಸ್‌, ಮತ್ತು ಉಕ್ಕು ಉದ್ಯಮ, ಕೃಷಿ ವಲಯದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. 

ಇದರಿಂದ ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕಾಗಿ ಕ್ರಮ ವಹಿಸಲಾಗುವುದು ಎಂದರು. ಕೊಪ್ಪಳದ ಆಟಿಕೆ ಜಾಗತಿಕ ಮಟ್ಟಕ್ಕೆ: ಈ ಹಿಂದೆ ಆಟಿಕೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಆಟಿಕೆಗಳ ಉದ್ಯಮಕ್ಕೆ ಉತ್ತೇಜನ ನೀಡಲಾಯಿತು. ಕೊಪ್ಪಳದ ಆಟಿಕೆಗಳಿಗೆ ಈಗ ಹೊರ ದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಇದರಿಂದ ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಆಟಿಕೆಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಆಮದು ಮಾಡಿಕೊಳ್ಳುವ ಪ್ರಕ್ರಿಯೆ ತಗ್ಗಿದೆ ಎಂದರು.

ಹಾಸನ ರಾಸಲೀಲೆ ರಾಜ್ಯವೇ ತಲೆ ತಗ್ಗಿಸುವ ವಿಚಾರ: ಡಿ.ಕೆ.ಶಿವಕುಮಾರ್‌

ಮೋದಿ ಮೋಡಿಗೊಳಗಾದ ದಾವಣಗೆರೆ ಜನ: ಲೋಕಸಭೆ 2ನೇ ಹಂತದ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಿಂಚಿನ ಸಂಚಾರ ನಡೆಸುವ ಮೂಲಕ ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ-ಹಾವೇರಿ, ವಿಜಯ ನಗರ ಜಿಲ್ಲೆಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಉರಿ ಬಿಸಿಲಿನ ಮಧ್ಯೆಯೂ ಬೆಳಗ್ಗೆಯಿಂದಲೇ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ವಿಪರೀತ ಸೆಕೆ ಮಧ್ಯೆ ನರೇಂದ್ರ ಮೋದಿ ನೋಡುವ, ಮೋದಿ ಮಾತಿನ ಮೋಡಿಗೆ ಒಳಗಾಗುವ, ಹರ್ಷೋದ್ಘಾರ ಮೊಳಗಿಸುವ ಉಮೇದಿನಿಂದಲೇ ಬಂದಿದ್ದ ಜನರಿಗೆ ನರೇಂದ್ರ ಮೋದಿ ನಿರಾಸೆಗೊಳಿಸಲಲ್ಲವಾದರೂ, ಮೋದಿಯ ವಾಗ್ಭಾಣದಿಂದ ಮಾತುಗಳು ಅಷ್ಟಾಗಿ ಬರಲಿಲ್ಲವೆಂಬ ಕೊರಗು ಜನರಲ್ಲಿತ್ತು.

ಬೆಳಗಾವಿ, ಶಿರಸಿಯಲ್ಲಿ ಬಹಿರಂಗ ಸಭೆ ಮುಗಿಸಿಕೊಂಡು ಇಲ್ಲಿನ ಜಿಎಂಐಟಿ ಹೆಲಿಪ್ಯಾಡ್‌ಗೆ ವಿಶೇಷ ಭದ್ರತೆಯಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಬರುವಾಗಲೇ ಜಿಎಂಐಟಿ ಅತಿಥಿ ಗೃಹದಲ್ಲಿ ಬೆಣ್ಣೆದೋಸೆ ಸವಿದು ಬಂದಿದ್ದರೇನೋ ಎಂಬಂತೆ ಐದು ಸಲ ದಾವಣಗೆರೆಗೆ ಬಂದರೂ ಎಂದಿಗೂ ಬೆಣ್ಣೆದೋಸೆ ಬಗ್ಗೆ ಮಾತನಾಡದಿದ್ದ ಮೋದಿ, ಇಂದು ಮಾತ್ರ ಮುಕ್ತವಾಗಿ ಮಾತನಾಡುತ್ತಾ, ಬಿಜೆಪಿ ವಿಜಯೋತ್ಸವವನ್ನು ಬೆಣ್ಣೆದೋಸೆ ಸಂಭ್ರಮೋತ್ಸವವಾಗಿ ಜೂ.4ಕ್ಕೆ ಇಲ್ಲಿ ಆಚರಿಸುವಂತೆ ಮುಖಂಡರಿಗೆ ಕರೆ ನೀಡಿದರು.

ಯುಪಿಎಯಿಂದಲೇ ರಾಜ್ಯಕ್ಕೆ ಹೆಚ್ಚು ಬರ ಪರಿಹಾರ ಅನ್ಯಾಯ: ಎಚ್‌ಡಿಕೆ ಆರೋಪ

ಮೋದಿ ಆಗಮನಕ್ಕಾಗಿ ಇಡೀ ಊರಿನಾದ್ಯಂತ ವಾಹನ ಸಂಚಾರ, ಮಾರ್ಗ ಬದಲಾವಣೆ ಮಾಡಲಾಗಿತ್ತು. ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ, ಸಶಕ್ತರಿಂದ ಅಶಕ್ತರವರೆಗೆ ರಸ್ತೆಯ ಎರಡೂ ಬದಿ ಸಾವಿರಾರು ಸಂಖ್ಯೆಯಲ್ಲಿ ಮೋದಿ ಸಾಗುವುದನ್ನು ನೋಡಲು ಸೇರಿದ್ದರೆ, ಸುಮಾರು ಅಪಾರ ಸಂಖ್ಯೆ ಜನರು ಹೈಸ್ಕೂಲ್ ಮೈದಾನದ ಆವರಣ, ಪೆಂಡಾಲ್ ಒಳಗೆ ಜಮಾಯಿಸಿದ್ದರು. ಹೈಸ್ಕೂಲ್ ಮೈದಾನಕ್ಕೆ ಮೋದಿ ಆಗಮನದೊಂದಿಗೆ ಮಿಂಚಿನ ಸಂಚಲನ ಉಂಟಾಯಿತು. ಗತ್ತು ಗಾಂಭೀರ್ಯದಿಂದ ವೇದಿಕೆಗೆ ಆಗಮಿಸಿದ ಮೋದಿ ಜನರಿಗೆ ಕೈ ಮುಗಿಯುತ್ತಾ, ಕೈ ಬೀಸುತ್ತಾ ವೇದಿಕೆಯಲ್ಲಿ ಹೆಜ್ಜೆ ಹಾಕಿದರೆ ಮೋದಿ ಮೋದಿ ಮೋದಿ ಎಂಬ ಹರ್ಷೋದ್ಘಾರ ಮುಗಿಲು ಮುಟ್ಟಿದವು.

Follow Us:
Download App:
  • android
  • ios