Asianet Suvarna News Asianet Suvarna News

(ವಿಡಿಯೋ) ನಕಲಿ ವಿಡಿಯೋ ಮೂಲಕ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ತೇಜೋವಧೆಗೆ ಸಂಚು?

ನಿಜ ಸಂಗತಿ ಅಂದ್ರೆ, ಇದಾವುದೂ ಫೋಟೋಗಳಲ್ಲ. ವಿಡಿಯೋವೊಂದರ ಸ್ಕ್ರೀನ್​ ಶಾಟ್​​ಗಳು..

Yogi Fake video

ಉತ್ತರ ಪ್ರದೇಶ ನೂತನ ಸಿಎಂ ಯೋಗಿ ಆದಿತ್ಯನಾಥ್​, ಯುವತಿ ಜತೆ ರಾಸಲೀಲೆಯಲ್ಲಿ ತೊಡಗಿದ್ದಾರೆ ಅನ್ನೋ ಫೋಟೋಗಳನ್ನು ಫೇಸ್​ಬುಕ್​, ಟ್ವಿಟರ್​​ನಲ್ಲಿ ಹರಿದಾಡುತ್ತಿವೆ.

ಕಾವಿಧಾರಿಯೊಬ್ಬ ಯುವತಿಯ ಜತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವ ಫೋಟೋಗಳನ್ನು, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡಲಾಗಿದೆ. ಅದನ್ನು, ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಫೋಟೋ ಎಂದು ಬಿಂಬಿಸಲಾಗುತ್ತಿದೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಾದ, ವಿವಾದ, ಆರೋಪ ಪ್ರತ್ಯಾರೋಪದ ಚರ್ಚೆ ನಡೆಯುತ್ತಿದೆ... ‘ಉತ್ತರಪ್ರದೇಶದ ಮುಖ್ಯಮಂತ್ರಿ  ತಮ್ಮ ಆಶ್ರಮದ ಬೆಡ್ ರೂಮನ್ನು ಮುಖ್ಯಮಂತ್ರಿ ಕಚೇರಿಯ ಆಂಟಿ ರೂಮಿಗೇ ವರ್ಗಾಯಿಸಿಕೊಂಡರೆ ಅದನ್ನೂ ಬದಲಾವಣೆಯ ಗಾಳಿ ಎಂದು ಕರೆಯುವರೆ?’ ಎಂಬ ಫೇಸ್​ಬುಕ್​​ ಬರಹಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಿಜ ಸಂಗತಿ ಅಂದ್ರೆ, ಇದಾವುದೂ ಫೋಟೋಗಳಲ್ಲ. ವಿಡಿಯೋವೊಂದರ ಸ್ಕ್ರೀನ್​ ಶಾಟ್​​ಗಳು..2016ರ ಆಗಸ್ಟ್​ 12ರಂದು ಯೂಟ್ಯೂಬ್​ನಲ್ಲಿ ಅಪ್​ಲೋಡ್​​ ಆಗಿರುವ ವಿಡಿಯೋ.ಕಾಮಿಡಿ ಮಸಾಲ ಅನ್ನೋ ಹೆಸರಿನ ಈ ವಿಡಿಯೋದಲ್ಲಿ ಕಾವಿಧಾರಿಯೊಬ್ಬ ಹುಡುಗಿ ಜತೆ ಅಶ್ಲೀಲವಾಗಿ ನಡೆದುಕೊಳ್ಳುವ ಚಿತ್ರಣವಿದೆ.ಆದರೆ, ನಿಜಸಂಗತಿ ಅರಿಯದ ಕೆಲವು ವಿರೋಧಿಗಳು, ಇದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರದ್ದೇ ಫೋಟೋ ಅನ್ನೋ ರೀತಿಯಲ್ಲಿ ಬಿಂಬಿಸಿದ್ದಾರೆ.

Follow Us:
Download App:
  • android
  • ios