Asianet Suvarna News Asianet Suvarna News

ಕನ್ನಡ ಬಿಗ್'ಬಾಸ್'ಗೆ ಎಂಟ್ರಿ ಕೊಡಲು ಮೂರು ಕೋಟಿ ಮೂರ್ತಿ ಶೂಟ್ ಮಾಡಿದ ವಿಡಿಯೋ ಈಗ ವೈರಲ್

ವಿಜಯ್ ಮಲ್ಯ ಸಾವಿರಾರು ಕೋಟಿ ರೂ ಸಾಲ ಮಾಡಿ ದೇಶ ಬಿಟ್ಟು ಹೋಗಿದ್ಧಾನೆ. ತಾನು 3 ಕೋಟಿ ಸಾಲ ಮಾಡಿ ಊರು ಬಿಟ್ಟು ಊರು ಅಲೆಯುತ್ತಿದ್ದೇನೆ ಎಂದು ಎದೆಯುಬ್ಬಿಸಿ ಹೇಳಿದ್ದಾನೆ. ತನ್ನಂಥ ಸಾಮಾನ್ಯ ಮನುಷ್ಯನಿಗೆ ಬಿಗ್ ಬಾಸ್'ನಲ್ಲಿ ಎಂಟ್ರಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಬಿಗ್ ಬಾಸ್ ಎಂದೂ ರೆಕಾರ್ಡ್ ಮಾಡಿಕೊಂಡಿದ್ದಾನೆ.

viral bigg boss video of mooru koti murthy

ಮೈಸೂರು(ಜುಲೈ 31): ಪೊಲೀಸ್ ಯೂನಿಫಾರ್ಮ್ ಹಾಕಿಕೊಂಡು ಜನರನ್ನು ಯಾಮಾರಿಸುತ್ತಿದ್ದ ಶಿವಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಪೊಲೀಸ್ ಗೆಟಪ್ ಕಂಡ ಸಾಕಷ್ಟು ಮಂದಿ ಈತನಿಂದ ಮೋಸ ಹೋಗಿದ್ದಾರೆನ್ನಲಾಗಿದೆ. ಈತ ಸಿಕ್ಕಿಬೀಳದೇ ಇದ್ದಿದ್ದರೆ ಬಹುಶಃ ಮುಂದಿನ ಬಿಗ್ ಬಾಸ್ ಸೀಸನ್'ನಲ್ಲಿ ಈತನನ್ನು ಒಬ್ಬ ಕಂಟೆಸ್ಟೆಂಟ್ ಆಗಿ ನೋಡುವ ಸಾಧ್ಯತೆಯೂ ಇತ್ತು. ಯಾಕೆಂದರೆ ಈತ ಬಿಗ್'ಬಾಸ್'ಗೆ ಎಂಟ್ರಿ ಕೊಡಲು ಸಾಕಷ್ಟು ಕಸರತ್ತು ನಡೆಸಿದ್ದ. ಅದಕ್ಕಾಗೇ ತಾನು ಥರಹಾವೇರಿ ಮಾತನಾಡಿರುವುದನ್ನು ವಿಡಿಯೋದಲ್ಲಿ ಶೂಟ್ ಮಾಡಿಸಿಕೊಂಡಿದ್ದ. ತಾನು 3 ಕೋಟಿ ಸಾಲ ಮಾಡಿ ಊರಿಂದೂರು ಅಲೆಯುತ್ತಿರುವುದನ್ನು ಈತ ಬಾಯಿಬಿಟ್ಟಿದ್ದಾನೆ. ತನ್ನನ್ನು ವಿಜಯ್ ಮಲ್ಯಗೆ ಹೋಲಿಕೆ ಮಾಡಿಕೊಳ್ಳುತ್ತಾನೆ. ವಿಜಯ್ ಮಲ್ಯ ಸಾವಿರಾರು ಕೋಟಿ ರೂ ಸಾಲ ಮಾಡಿ ದೇಶ ಬಿಟ್ಟು ಹೋಗಿದ್ಧಾನೆ. ತಾನು 3 ಕೋಟಿ ಸಾಲ ಮಾಡಿ ಊರು ಬಿಟ್ಟು ಊರು ಅಲೆಯುತ್ತಿದ್ದೇನೆ ಎಂದು ಎದೆಯುಬ್ಬಿಸಿ ಹೇಳಿದ್ದಾನೆ. ತನ್ನಂಥ ಸಾಮಾನ್ಯ ಮನುಷ್ಯನಿಗೆ ಬಿಗ್ ಬಾಸ್'ನಲ್ಲಿ ಎಂಟ್ರಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಬಿಗ್ ಬಾಸ್ ಎಂದೂ ರೆಕಾರ್ಡ್ ಮಾಡಿಕೊಂಡಿದ್ದಾನೆ.

Follow Us:
Download App:
  • android
  • ios