Asianet Suvarna News Asianet Suvarna News

ಹೊಸ ಟ್ವಿಸ್ಟ್..! ಮದುವೆ ರದ್ದಾಗಲು ಊಟ ಕಾರಣವಲ್ಲವೇ? ಹುಡುಗಿಯೇ ಇಲ್ಲಿ ವಿಲನ್ನಾ?

ಶಿಲ್ಪಾಳನ್ನು ಮದುವೆಯಾಗಲು ವರ ನಾಗೇಂದ್ರ ಪ್ರಸಾದ್ ಈಗಲೂ ಸಿದ್ಧರಿದ್ದಾರೆನ್ನಲಾಗಿದೆ. ಆದರೆ, ಹುಡುಗಿ ಕಡೆಯವರೇ ಇದಕ್ಕೆ ಒಪ್ಪಲು ರೆಡಿ ಇಲ್ಲ. ಮೂರು ತಿಂಗಳಿನಿಂದಲೂ ಹುಡುಗಿ ಕಡೆಯವರು ಏನಾದರೂ ತಗಾದೆ ತೆಗೆಯುತ್ತಿದ್ದರೆಂದು ವರನ ಕಡೆಯವರು ಆರೋಪಿಸಿದ್ದಾರೆ.

twist in konanakunte marriage cancel case

ಬೆಂಗಳೂರು(ಏ. 09): ಸೌಧಾಮಿನಿ ಛತ್ರದಲ್ಲಿ ಇಂದು ಮದುವೆ ರದ್ದಾಗದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿವಾಹ ರದ್ದಾಗಲು ವರನ ಕಡೆಯವರು ಮಾಡಿದ ಊಟದ ಕಿತಾಪತಿಯೇ ಕಾರಣ ಎಂದು ವಧುವಿನ ಕಡೆಯವರು ಮಾಡಿರುವ ಆರೋಪ ಸುಳ್ಳು ಎಂಬ ಮಾಹಿತಿ ಸುವರ್ಣನ್ಯೂಸ್'ಗೆ ಸಿಕ್ಕಿದೆ. ವಾಸ್ತವದಲ್ಲಿ, ಶಿಲ್ಪಾ ಮತ್ತು ನಾಗೇಂದ್ರಪ್ರಸಾದ್ ಜೋಡಿಯ ಮದುವೆ ರದ್ದಾಗಲು ವಧುವಿನ ಕಡೆಯವರೇ ಕಾರಣವೆನ್ನಲಾಗಿದೆ. ನಮಗೆ ಸಿಕ್ಕ ಮಾಹಿತಿ ಪ್ರಕಾರ, ವಧು ಶಿಲ್ಪಾಗೆ ಮೊದಲೇ ಒಂದು ಅಫೇರ್ ಇತ್ತೆನ್ನಲಾಗಿದೆ. ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದ ಶಿಲ್ಪಾ ಹೇಗಾದರೂ ಮಾಡಿ ಮದುವೆ ರದ್ದು ಮಾಡಲು ಪ್ಲಾನ್ ಮಾಡಿರುತ್ತಾಳೆ. ವಿವಾಹ ಕಾರ್ಯಕ್ರಮದಲ್ಲಿ ಏನಾದರೂ ನೆವ ಹೂಡಿ ಕಿರಿಕ್ ಮಾಡಿ ಮದುವೆ ಕ್ಯಾನ್ಸಲ್ ಮಾಡುವುದು ಹಾಗೂ ಬೇರೆ ಹುಡುಗನೊಂದಿಗೆ ಅದೇ ಛತ್ರದಲ್ಲಿ ಮದುವೆ ಮಾಡಿಸುವುದು ವಧುವಿನ ಕಡೆಯವರ ಯೋಜನೆಯಾಗಿತ್ತು. ಅದರಂತೆ, ಊಟದ ವಿಚಾರವನ್ನು ಮುಂದಿಟ್ಟುಕೊಂಡು ಮದುವೆ ನಿಲ್ಲಿಸುತ್ತಾರೆ. ಇದು ವರನ ಕಡೆಯವರು ಸುವರ್ಣನ್ಯೂಸ್'ಗೆ ಬಿಚ್ಚಿಟ್ಟ ಮಾಹಿತಿಯಾಗಿದೆ.

ಶಿಲ್ಪಾಳನ್ನು ಮದುವೆಯಾಗಲು ವರ ನಾಗೇಂದ್ರ ಪ್ರಸಾದ್ ಈಗಲೂ ಸಿದ್ಧರಿದ್ದಾರೆನ್ನಲಾಗಿದೆ. ಆದರೆ, ಹುಡುಗಿ ಕಡೆಯವರೇ ಇದಕ್ಕೆ ಒಪ್ಪಲು ರೆಡಿ ಇಲ್ಲ. ಮೂರು ತಿಂಗಳಿನಿಂದಲೂ ಹುಡುಗಿ ಕಡೆಯವರು ಏನಾದರೂ ತಗಾದೆ ತೆಗೆಯುತ್ತಿದ್ದರೆಂದು ವರನ ಕಡೆಯವರು ಆರೋಪಿಸಿದ್ದಾರೆ.

ಊಟದ್ದೇನು ಪ್ರಾಬ್ಲಮ್ಮು?
ತಾವು ಯಾವುದೇ ವರದಕ್ಷಿಣೆ ಪಡೆದಿಲ್ಲ. ಒಳ್ಳೆಯ ಕಡೆ ಮದುವೆ ಮಾಡಿಕೊಡಿ ಎಂದು ಕೇಳಿದ್ದು ಬಿಟ್ಟರೆ ಬೇರೆ ಯಾವ ಡಿಮ್ಯಾಂಡೂ ಮುಂದಿಟ್ಟಿಲ್ಲ. ತಮ್ಮ ಕಡೆಯ 450 ಜನರು ಮದುವೆಗೆ ಬರುತ್ತಾರೆ. ಎಲ್ಲರಿಗೂ ಊಟದ ವ್ಯವಸ್ಥೆಯಾಗಬೇಕು ಎಂದು ಕೇಳಿದ್ದೆವು. ಆದರೆ, ಹುಡುಗಿ ಕಡೆಯವರು ಕೇವಲ 250 ಜನರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಿದ್ದರು. ಇದರಿಂದ ತಮಗೆ ಬೇಸರವಾಯಿತು. ಅದನ್ನು ಕೇಳಿದ್ದಕ್ಕೆ ವಧುವಿನ ಕಡೆಯವರು ರಂಪ ಮಾಡಿದ್ದಾರೆ. ಇದಷ್ಟೇ ನಡೆದದ್ದು ಎಂದು ಹುಡುಗಿ ಕಡೆಯವರು ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ.

ಹುಡುಗಿ ಕಡೆಯವರು ಹೇಳುವುದೇನು?
ಇಷ್ಟೆಲ್ಲಾ ರಾದ್ಧಾಂತ ಆದ ಮೇಲೆ ಗಂಡ ಆಗಬೇಕಾದವನು ಬಂದು "ನಾನು ಇದ್ದೇನೆ ಬಾರೆ" ಎಂದು ಸಮಾಧಾನ ಹೇಳಬಹುದಿತ್ತು. ಅದು ಬಿಟ್ಟು ಇಷ್ಟ ಆದ್ರೆ ಮದುವೆ ಆಗ್ತೀನಿ ಎಂದು ಹೇಳ್ತಾರೆ. ಇಂಥವರ ಜೊತೆ ತಾನು ಹೇಗೆ ಬಾಳೋದು ಎಂದು ಯೋಚಿಸಿ ಕೊನೆಗೆ ಮದುವೆ ರದ್ದು ಮಾಡಲು ನಿರ್ಧರಿಸಿದೆ ಎಂದು ವಧು ಶಿಲ್ಪಾ ಹೇಳಿದ್ದಾಳೆ.

ಇನ್ನು, ಊಟದ ವಿಚಾರವಾಗಿ ಮಾತನಾಡಿದ ವಧುವಿನ ಅಪ್ಪ ಮತ್ತು ಅಣ್ಣ, "450 ಜನರು ಬರುತ್ತೇವೆ ಎಂದು ಹೇಳಿದ್ದರು. ಆದರೆ, 650 ಜನರು ಬಂದರು. ಇನ್ನೂ ಹೆಚ್ಚು ಜನರು ಬರುವುದಿದ್ದರು. ಇದರಿಂದ ಊಟಕ್ಕೆ ಸ್ವಲ್ಪ ಶಾರ್ಟೇಜ್ ಆಯಿತು. ಸ್ವಲ್ಪ ಹೊತ್ತು ಸುಮ್ಮನಿರಿ. ಊಟ ರೆಡಿಯಾಗುತ್ತೆ ಎಂದು ಹೇಳಿದರೂ ವರನ ಕಡೆಯವರು ಕೇಳಲಿಲ್ಲ. ಜಗಳ ಮಾಡಿದರು" ಎಂದು ಹೇಳಿದ್ದಾರೆ.

Follow Us:
Download App:
  • android
  • ios