ಐಸಿಸ್ ಕಾರ್ಯತಂತ್ರ ಬಯಲು ಮಾಡಿದ  ರಿಪಬ್ಲಿಕ್: ಸುದ್ದಿ ಪ್ರಸಾರವಾಗಿ 30 ಗಂಟೆಯಲ್ಲಿ ಮೂವರು ಅಂದರ್
news
By Suvarna Web Desk | 08:45 AM May 18, 2017

ರಿಪಬ್ಲಿಕ್ ಸುದ್ದಿ ವಾಹಿನಿ ಐಸಿಸ್ ಉಗ್ರರ ಇಂಟರ್ ವ್ಯೂ ಮಾಡಿ ಸುದ್ದಿ ಪ್ರಸಾರ ಮಾಡಿದ್ದೇ ತಡ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಸುದ್ದಿ ಪ್ರಸಾರ ಮಾಡಿದ 30 ಗಂಟೆಗಳಲ್ಲೇ ಹೈದರಾಬಾದ್ ಪೊಲೀಸರು ಮೂವರು ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ.

ಹೈದರಾಬಾದ್(ಮೇ.18): ರಿಪಬ್ಲಿಕ್ ಸುದ್ದಿ ವಾಹಿನಿ ಐಸಿಸ್ ಉಗ್ರರ ಇಂಟರ್ ವ್ಯೂ ಮಾಡಿ ಸುದ್ದಿ ಪ್ರಸಾರ ಮಾಡಿದ್ದೇ ತಡ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಸುದ್ದಿ ಪ್ರಸಾರ ಮಾಡಿದ 30 ಗಂಟೆಗಳಲ್ಲೇ ಹೈದರಾಬಾದ್ ಪೊಲೀಸರು ಮೂವರು ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ.

ರಿಪಬ್ಲಿಕ್ ಟಿವಿಯ ಕರ್ನಾಟಕ ಮೂಲದ ವರದಿಗಾರ್ತಿ ಪ್ರೇಮಾ  ರಹಸ್ಯ ಕಾರ್ಯಾಚರಣೆ ನಡೆಸಿ ಐಸಿಸ್ ಏಜಂಟರ ಬಗ್ಗೆ ವರದಿ ಪ್ರಸಾರ ಮಾಡಿದ್ದೇ ತಡ ಕೇಂದ್ರ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಸುದ್ದಿ ಪ್ರಸಾರವಾಗಿ ಮೂವತ್ತು ಗಂಟೆಯಲ್ಲೇ ಸಲ್ಮಾನ್ ಮೊಹಿಯುದ್ದೀನ್, ಅಬ್ದುಲ್ ಅಬ್ರಾರ್ ಮತ್ತು ಅಬ್ದುಲ್ ಹನ್ನಾನ್​ನನ್ನು ಹೈದರಾಬಾದ್ ಪೊಲೀಸರು​ ಬಂಧಿಸಿದ್ದಾರೆ.

ಮುಸ್ಲಿಂ ಯುವಕರಿಗೆ ಬಲೆ ಬೀಸಿ ಫೇಸ್ ಬುಕ್ ಮೂಲಕ ಜಿಹಾದಿ, ಧರ್ಮ ಎಂಬ ಬಗ್ಗೆ ವಿಡಿಯೋಗಳನ್ನ ಶೇರ್ ಮಾಡಿ ಯುವಕರನ್ನ ಐಸಿಸ್​ನತ್ತ ಸೆಳೆಯಲಾಗುತ್ತಿತ್ತು. ಯುವಕರಿಗೆ ಹಣದ ಆಮಿಷವೊಡ್ಡಿ, ತರಬೇತಿ ನೀಡುತ್ತೇವೆಂದು ಸಿರಿಯಾಗೆ ಆಹ್ವಾನಿಸುತ್ತಿದ್ದರು. ಈ ಬಗ್ಗೆ ರಿಪಬ್ಲಿಕ್ ವಾಹಿನಿ ವರದಿಗಾರ್ತಿ ಪ್ರೇಮಾ, ರಹಸ್ಯ ಇಂಟರ್​ ​ವ್ಯೂ ಮಾಡಿದ್ದರು.

ರಿಪಬ್ಲಿಕ್ ಟಿವಿಯ ಈ ಸ್ಟಿಂಗ್ ಪ್ರಸಾರದ ನಂತರ ಕೇಂದ್ರ ಗೃಹ ಸಚಿವಾಲಯ ಟೇಪ್​ಗಳ ಪರಿಶೀಲನೆ ನಡೆಸುತ್ತಿದೆ. ಐಸಿಸ್ ಸಂಘಟನೆಯಲ್ಲಿ ಸೇರಿಕೊಳ್ಳೋದಕ್ಕೆ ಮುಂದಾಗಿರುವವರಿಗಾಗಿ  ಪೊಲೀಸರು ಬಲೆ ಬೀಸಿದ್ದಾರೆ.

Show Full Article