Asianet Suvarna News Asianet Suvarna News

ಆರೋಗ್ಯ ಕ್ಷೇತ್ರಕ್ಕೆ ಬಜೆಟ್'ನಲ್ಲೇನಿದೆ?

ದೇಶದಲ್ಲಿರುವ  1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸುಧಾರಣಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು. ಪರಿಣತ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ವೈದ್ಯಕೀಯ ಸ್ನಾತಕೋತ್ತರ ಪದವಿಗಳಲ್ಲಿ ಪ್ರತಿ ವರ್ಷಕ್ಕೆ 5000 ಹೆಚ್ಚು ಸೀಟುಗಳನ್ನು ಸೇರ್ಪಡೆ  ಮಾಡಲು ನಿರ್ಧರಿಸಲಾಗಿದೆ. 

This is What Health Sector has Got in Budget

ನವದೆಹಲಿ (ಫೆ.01): ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡನೆ ಮಾಡಿರುವ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್'ನಲ್ಲಿ ಆರೋಗ್ಯ ವಲಯಕ್ಕೆ ಏನೇನು ಸಿಕ್ಕಿದೆ ಎಂದು ನೋಡುವುದಾದರೆ.  ಜಾರ್ಖಂಡ್ ಮತ್ತು ಗುಜರಾತ್‍'ನಲ್ಲಿ 2 ಏಮ್ಸ್ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.

ದೇಶದಲ್ಲಿರುವ  1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸುಧಾರಣಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು. ಪರಿಣತ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ವೈದ್ಯಕೀಯ ಸ್ನಾತಕೋತ್ತರ ಪದವಿಗಳಲ್ಲಿ ಪ್ರತಿ ವರ್ಷಕ್ಕೆ 5000 ಹೆಚ್ಚು ಸೀಟುಗಳನ್ನು ಸೇರ್ಪಡೆ  ಮಾಡಲು ನಿರ್ಧರಿಸಲಾಗಿದೆ. 

ಜನರಿಗೆ ರಿಯಾಯಿತಿ ದರದಲ್ಲಿ ಔಷಧಿ ಕೈಗೆಟುಕುವಂತೆ ಮಾಡಲು ಔಷಧಿ ಮತ್ತು ಪ್ರಸಾದನ ಕಾಯ್ದೆಯಡಿಯಲ್ಲಿ ಬದಲಾವಣೆಗೆ ಪ್ರಸ್ತಾಪ. ವೈದ್ಯಕೀಯ ಉಪಕರಣಗಳಿಗೆ ಸಂಬಂಧಪಟ್ಟಂತೆ ಹೊಸ ಕಾಯ್ದೆಗಳನ್ನು ರೂಪಿಸಲಾಗುವುದು ಎಂದಿದ್ದಾರೆ.

Follow Us:
Download App:
  • android
  • ios