Asianet Suvarna News Asianet Suvarna News

ಬಡವರ ರೇಷನ್ ಕದ್ದು ಮಾರೋ ಕಳ್ಳರು

ಈ ಬಾರಿ ನಮ್ಮ ತಂಡ ಚೇಸ್ ​ಮಾಡಿರೋದು ಭ್ರಷ್ಟರಲ್ಲಿ ಭ್ರಷ್ಟರನ್ನ,ನೀಚರಲ್ಲಿ ನೀಚರನ್ನ. ಜನಸೇವೆಯ ಮುಖವಾಡ ಹಾಕಿಕೊಂಡು ಜನರ ಅನ್ನಭಾಗ್ಯದ ಅನ್ನವನ್ನೇ ಕದಿಯೋ ಖದೀಮರನ್ನ.

Suvarana News reveal Anna Bhagya ration scam

ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ಮತ್ತೊಂದು ಭ್ರಷ್ಟರ ಗುಂಪನ್ನು ಚೇಸ್​ ಮಾಡಿ ಅನ್ನಭಾಗ್ಯವನ್ನ ರೇಷನ್​ ಅಂಗಡಿಯಿಂದಲೇ ಕದಿಯೋ ಭ್ರಷ್ಟರ ಬಣ್ಣ ಬಯಲು ಮಾಡಿದೆ. ಅದು ಹೇಗೆ ಅಂತ ತಿಳಿಯಲು ಈ ವರದಿ ನೋಡಿ.

ಈ ಬಾರಿ ನಮ್ಮ ತಂಡ ಚೇಸ್ ​ಮಾಡಿರೋದು ಭ್ರಷ್ಟರಲ್ಲಿ ಭ್ರಷ್ಟರನ್ನ,ನೀಚರಲ್ಲಿ ನೀಚರನ್ನ. ಜನಸೇವೆಯ ಮುಖವಾಡ ಹಾಕಿಕೊಂಡು ಜನರ ಅನ್ನಭಾಗ್ಯದ ಅನ್ನವನ್ನೇ ಕದಿಯೋ ಖದೀಮರನ್ನ.

ಈ ಬಾರಿ ನಮ್ಮ ತಂಡ ಭ್ರಷ್ಟರ ಬೇಟೆಯಾಡಲು ಹೊರಟಿದ್ದು ತೋಟಗಾರಿಕಾ ಸಚಿವ ಎಸ್​.ಎಸ್​​. ಮಲ್ಲಿಕಾರ್ಜುನ್​ ಅವರ ಜಿಲ್ಲೆ ದಾವಣಗೆರೆಗೆ. ಇಲ್ಲಿ ರೇಷನ್ ಮಾಫಿಯಾ ಭಯಾನಕ ರೂಪದಲ್ಲಿ ನಡೆಯುತ್ತಿದೆ. ಈ ಖದೀಮರ ಬಣ್ಣ ಬಯಲು ಮಾಡೋ ಸಲುವಾಗಿಯೇ ನಮ್ಮ ತಂಡ ರಹಸ್ಯ ಕಾರ್ಯಾಚರಣೆ ಮುಂದಾಗಿ ದಾವಣಗೆರೆಯ ಕೆಲ ಭ್ರಷ್ಟ ನ್ಯಾಯಬೆಲೆ ಅಂಗಡಿಯಿಂದಲೇ ಪ್ರತಿ ನಿತ್ಯ ರಾತ್ರಿ ಹಗಲೆನ್ನದೆ ಆಟೋ ರಿಕ್ಷಾ, ಓಮನಿ ಗಾಡಿಯಲ್ಲಿ ಪಡಿತರ ಪದಾರ್ಥಗಳನ್ನ ಅಕ್ರಮವನ್ನ ಸಾಗಿಸುತ್ತಿರುವುದನ್ನ ಪತ್ತೆ ಹಚ್ಚಿದೆ.

ಈ ಕದ್ದ ರೇಷನ್​ ಎಲ್ಲಾ ದಾವಣಗೆರೆಯ ಜಯಣ್ಣ ಹಾಗೂ ಬಾತಿಯ ಉಮಣ್ಣ ಅಲಿಯಾಸ್​ ಉಮಾಪತಿ ಗೋಡೌನ್​ಗೆ ಬಂದು ಸೇರುತ್ತೆ. ಇದೂ ಕೂಡ ನಮ್ಮ ರಹಸ್ಯ ಕಾರ್ಯಾಚರಣೆಯಿಂದ ಬಯಲಾಯ್ತು.

ಜಯಣ್ಣ ಹಾಗೂ ಉಮಾಪತಿಯವರ ಗೋಡೌನ್​ನಿಂದ ಈ ಅನ್ನಭಾಗ್ಯದ ಅಕ್ಕಿ ಎಲ್ಲಿ ಹೋಗಿ ಸೇರುತ್ತೆ ಅಂತ ಮತ್ತೆ ನಾವು ಚೇಸ್​ ಮಾಡಿದಾಗ ಅದು ಹೊನ್ನಾಳಿಯ ಶಂಕರ್​ ರೈಸ್​ ಮಿಲ್​ಗೆ ಬಂದು ತಲುಪುತ್ತೆ. ಇಲ್ಲಿ ಅನ್ನ ಭಾಗ್ಯದ ಚೀಲದೊಂದಿಗೇ ಲಾರಿ ಅಕ್ಕಿ ಹೊತ್ತು ಬಂದ ದೃಶ್ಯ ಕೂಡ​ ನಮಗೆ ಸಿಕ್ಕಿದೆ. ಈ ರೈಸ್​ ಮಿಲ್​ ಕಾಂಗ್ರೆಸ್​ನ ಪ್ರಭಾವಿ ನಾಯಕರಿಗೆ ಸೇರಿದ್ದು ಎನ್ನಲಾಗಿದೆ.

ಈ ಭಾರೀ ಮಾಫಿಯಾಕ್ಕೆ ಬ್ರೇಕ್​ ಹಾಕೋ ಸಲುವಾಗಿ ಕವರ್​ಸ್ಟೋರಿ ತಂಡ ಇದನ್ನ ಆಹಾರ ಸಚಿವ ಯು.ಟಿ ಖಾದರ್​ ಅವರಿಗೆ ಮಾಹಿತಿ ನೀಡಿತು. ಸಚಿವರು ತಕ್ಷಣ ಎಚ್ಚೆತ್ತುಕೊಂಡು ದಾವಣಗೆರೆಯ ಆಹಾರ ಉಪನಿರ್ದೇಶಕರಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ರು. ಅಧಿಕಾರಿಗಳು ಉಮಾಪತಿ ಗೋಡೌನ್​ ರೈಡ್​ ಮಾಡಿ ಆಹಾರ ಇಲಾಖೆಗೆ ಸೇರಿದ 112 ಕ್ವಿಂಟಾಲ್ ಅಕ್ಕಿ ಹಾಗೂ 4 ಕ್ವಿಂಟಾಲ್  ವಶಪಡಿಸಿಕೊಂಡರು. ಬಳಿಕ ಗೋಡೋನ್ ಮಾಲೀಕ ಬಾತಿ ಉಮಾಪತಿ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ವರದಿ: ರಂಜಿತ್​ ಕುಮಾರ್​ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​

Follow Us:
Download App:
  • android
  • ios