Asianet Suvarna News Asianet Suvarna News

ಅಗಸ್ಟಾ ವೆಸ್ಟ್​`ಲ್ಯಾಂಡ್ ಹಗರಣ: ಮಾಜಿ ಏರ್​ ಚೀಫ್ ಮಾರ್ಷಲ್ ಎಸ್.ಪಿ. ತ್ಯಾಗಿ ಅರೆಸ್ಟ್

ಅಗಸ್ಟಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್​ ತೀರ್ಪಿನಲ್ಲಿ ತ್ಯಾಗಿ ಹೆಸರು ಪ್ರಸ್ತಾಪವಾಗಿತ್ತು.  ಹೆಲಿಕಾಪ್ಟರ್ ಖರೀದಿ ವೇಳೆ ಟೆಂಡರ್ ಷರತ್ತು ಬದಲಾಗಿ ಬದಲಾವಣೆಗೆ ತ್ಯಾಗಿಯವರೇ ಕಾರಣ, ಟೆಂಡರ್ ಬದಲಾವಣೆಗೆ ತ್ಯಾಗಿ ಕಮಿಷನ್ ಪಡೆದಿದ್ದ ಆರೋಪವಿತ್ತು.

sp tyagi arrested by cbi

ನವದೆಹಲಿ(ಡಿ.09): ಬಹುಕೋಟಿ ರೂಪಾಯಿ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಏರ್ ಚೀಫ್ ಎಸ್.ಪಿ. ತ್ಯಾಗಿಯವರನ್ನ ಬಂಧಿಸಲಾಗಿದೆ. ಹಲವು ಗಂಟೆಗಳ ವಿಚಾರಣೆ ಬಳಿಕ ತ್ಯಾಗಿ ಮತ್ತವರ ಸೋದರ ಸಂಬಂಧಿ ಸಂಜೀವ್ ತ್ಯಾಗಿ ಮತ್ತು ವಕೀಲ ಗೌತಮ್ ಖೇತಾನ್ ಅವರನ್ನ ಸಿಬಿಐ ಅಧಿಕಾರಿಗಳು ಬಂಧಿಸಿದ್ಧಾರೆ.

ಅಗಸ್ಟಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್​ ತೀರ್ಪಿನಲ್ಲಿ ತ್ಯಾಗಿ ಹೆಸರು ಪ್ರಸ್ತಾಪವಾಗಿತ್ತು.  ಹೆಲಿಕಾಪ್ಟರ್ ಖರೀದಿ ವೇಳೆ ಟೆಂಡರ್ ಷರತ್ತು ಬದಲಾವಣೆಗೆ ತ್ಯಾಗಿಯವರೇ ಕಾರಣ, ಟೆಂಡರ್ ಬದಲಾವಣೆಗೆ ತ್ಯಾಗಿ ಕಮಿಷನ್ ಪಡೆದಿದ್ದಾರೆ ಎಂ ಆರೋಪವಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಹಣ ಪಡೆದಿದ್ದ ಬಗ್ಗೆ ತ್ಯಾಗಿ ಬಂಧುಗಳು ಒಪ್ಪಿಕೊಂಡಿದ್ದರು. 2010ರಲ್ಲಿ ನಡೆದಿದ್ದ 3767 ಕೋಟಿ ರೂ. ಒಪ್ಪಂದ ಇದಾಗಿದ್ದು, ಒಟ್ಟು ಮೊತ್ತದ ಶೇ.12ರಷ್ಟು ಅಂದರೆ 452 ಕೋಟಿ ಲಂಚ ಪಡೆಯಲಾಗಿತ್ತು.