(ವಿಡಿಯೋ)'ನಾನ್ಯಾವತ್ತೂ ಕನ್ನಡಿಗರ ವಿರುದ್ಧ ಮಾತನಾಡುವುದಿಲ್ಲ' ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಕಟ್ಟಪ್ಪ!
news
By Suvarna Web Desk | 02:24 PM Thursday, 20 April 2017

ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಕನ್ನಡಿಗರ ಸಿಟ್ಟಿಗೆ ಕಾರಣವಾಗಿದ್ದ ನಟ ಸತ್ಯರಾಜ್ ಕೊನೆಗೂ ಕನ್ನಡಿಗರ ಬಳಿ ಕ್ಷಮೆ ಯಾಚಿಸಿದ್ದಾರೆ. ಈ ಕುರಿತಾಗಿ ಸುವರ್ಣ ನ್ಯೂಸ್ ಕಳೆದ ಮಾರ್ಸ್ 24ರಿಂದ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ಕಟ್ಟಪ್ಪ ಕನ್ನಡಿಗರ ಕ್ಮೆ ಯಾಚಿಸಿದ್ದು ಸುವರ್ಣ ನ್ಯೂಸ್ ವರದಿಗೆ ಸಿಕ್ಕ ಫಲಶೃತಿ ಎನ್ನಬಹುದು.  

ಬೆಂಗಳೂರು(ಎ.21): ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಕನ್ನಡಿಗರ ಸಿಟ್ಟಿಗೆ ಕಾರಣವಾಗಿದ್ದ ನಟ ಸತ್ಯರಾಜ್ ಕೊನೆಗೂ ಕನ್ನಡಿಗರ ಬಳಿ ಕ್ಷಮೆ ಯಾಚಿಸಿದ್ದಾರೆ. ಈ ಕುರಿತಾಗಿ ಸುವರ್ಣ ನ್ಯೂಸ್ ಕಳೆದ ಮಾರ್ಸ್ 24ರಿಂದ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ಕಟ್ಟಪ್ಪ ಕನ್ನಡಿಗರ ಕ್ಮೆ ಯಾಚಿಸಿದ್ದು ಸುವರ್ಣ ನ್ಯೂಸ್ ವರದಿಗೆ ಸಿಕ್ಕ ಫಲಶೃತಿ ಎನ್ನಬಹುದು.  

ಇನ್ನು ಕ್ಷಮೆ ಯಾಚಿಸಿರುವ ಸತ್ಯರಾಜ್ 'ನಾನು ಕನ್ನಡಿಗರ ವಿರೋಧಿಯಲ್ಲ. ಕಾವೇರಿ ವಿಚಾರದಲ್ಲಿ ನಾನು ಈ ಹೇಳಿಕೆ ನೀಡಿದ್ದೆ ಆದರೆ ಇನ್ನು ಯಾವತ್ತಿಗೂ ನಾನು ಕನ್ನಡಿಗರ ವಿರುದ್ಧ ಮಾತನಾಡುವುದಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಕರ್ನಾಟಕದಲ್ಲಿ ಬಾಹುಬಲಿ ಬಿಡುಗಡೆಗೆ ಅವಕಾಶ ಮಾಡಿಕೊಡಿ' ಎಂದಿದ್ದಾರೆ.

ನಿನ್ನೆಯಷ್ಟೇ ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ಸತ್ಯರಾಜ್ ಮಾತುಗಳನ್ನು ಕೇಳಿ ಬಾಹುಬಲಿ ರಿಲೀಸ್'ಗೆ ವಿರೋಧ ವ್ಯಕ್ತಪಡಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು ಹಾಗೂ ಕನ್ನಡಿಗರನ್ನು ಓಲೈಸುವ ಯತ್ನ ಮಾಡಿದ್ದರು. ಆದರೆ ಕನ್ನಡಿಗರು ಮಾತ್ರ ಇವರ ಈ ಮನವಿಗೆ ಸ್ಪಂದಿಸದೆ ಖುದ್ದು ಸತ್ಯರಾಜ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದಿದ್ದರು. ಇದೀಗ ಕನ್ನಡಿಗರ ಪ್ರತಿಭಟನೆಗೆ ಜಯ ಲಭಿಸಿದೆ.

Show Full Article