(ವಿಡಿಯೋ)RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ ಎಂದ ಅರಣ್ಯ ಸಚಿವರ ಮಾತಿನ ವಿಡಿಯೋ ವೈರಲ್
news
By Suvarna Web Desk | 11:10 AM June 19, 2017

RSS ಮುಖಂಡ ಪ್ರಭಾಕರ್ ಭಟ್ ಒಬ್ಬ ಪುಕ್ಕಲ ಪ್ರಚೋದನಕಾರಿ ಭಾಷಣ ಮಾಡಿದರೆ ಕ್ರಿಮಿನಲ್ ಕೇಸ್ ಹಾಕಿ ಬಂಧಿಸಿ, ಹೀಗಂತ  ಅರಣ್ಯ ಸಚಿವ ರಮಾನಾಥ್ ರೈ, ಎಸ್ಪಿಗೆ ತಾಕೀತು ಮಾಡಿರುವ  ವಿಡಿಯೋ ಇದೀಗ ಬಹಿರಂಗವಾಗಿದೆ. ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂಪುಟದಿಂದ ರೈರನ್ನು ವಜಾಗೊಳಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಮಂಗಳೂರು(ಜೂ.19): RSS ಮುಖಂಡ ಪ್ರಭಾಕರ್ ಭಟ್ ಒಬ್ಬ ಪುಕ್ಕಲ ಪ್ರಚೋದನಕಾರಿ ಭಾಷಣ ಮಾಡಿದರೆ ಕ್ರಿಮಿನಲ್ ಕೇಸ್ ಹಾಕಿ ಬಂಧಿಸಿ, ಹೀಗಂತ  ಅರಣ್ಯ ಸಚಿವ ರಮಾನಾಥ್ ರೈ, ಎಸ್ಪಿಗೆ ತಾಕೀತು ಮಾಡಿರುವ  ವಿಡಿಯೋ ಇದೀಗ ಬಹಿರಂಗವಾಗಿದೆ. ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂಪುಟದಿಂದ ರೈರನ್ನು ವಜಾಗೊಳಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಕಲ್ಲಡ್ಕ ಗಲಭೆ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಮ್ಮ ಕಚೇರಿಗೆ ಎಸ್ಪಿಯನ್ನು ಕರೆಸಿಕೊಂಡು ಉಪದೇಶ ಮಾಡಿದ ಪರಿಯಿದು.

ಎಸ್ಪಿ ಭೂಷಣ್ ಬೊರಸೆಗೆ ಸಚಿವ ರೈ ವಾರ್ನಿಂಗ್

 ನಿನ್ನೆ ಬಂಟ್ವಾಳದ ಐಬಿ ಕಚೇರಿಯಲ್ಲಿ ರಮನಾಥ್ ರೈ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಏಕವಚನದಲ್ಲಿ ನಿಂದಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಸಂಪುಟದಿಂದ ರೈ ಅವ್ರನ್ನು ಕಿತ್ತೆಸೆಯಬೇಕೆಂದು ಆಗ್ರಹಿಸಿದ್ದಾರೆ.

ರಮಾನಾಥ್ ರೈ ಡಿಕ್ಟೆಟರ್ ಆಗೋದು ಬೇಡ, ಯಾರನ್ನ ಬಂಧಿಸಬೇಕು ಅಂತಾ ಪೊಲೀಸರಿಗೆ ಗೊತ್ತಿದೆ ಅಂತಾ  ಪ್ರಮೋದ್ ಮುತಾಲಿಕ್  ಹೇಳಿದರು.

ಒಟ್ಟಿನಲ್ಲಿ ಅಧಿಕಾರದ ಅಮಲಿನಲ್ಲಿ  ಸಚಿವ ರಮಾನಾಥ್ ರೈ , ಪ್ರಭಾಕರ್ ಭಟ್ಟರನ್ನು ಬಂಧಿಸಿ, ಆಮೇಲೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿದೆ. ಇದ್ರಿಂದ ಕಲ್ಲಡ್ಕ ಗಲಭೆ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

Show Full Article