ಮೋದಿಯವರು ಪದ್ಮಾಸನ ಹಾಕಿರುವುದನ್ನು ನೋಡಿದ್ದೀರಾ?
news
By Suvarna Web Desk | 11:04 AM January 11, 2017

ರಜೆ ಮುಗಿಸಿಕೊಂಡು ವಾಪಸ್ಸಾಗಿರುವ ರಾಹುಲ್ ಗಾಂಧಿ ಮತ್ತೆ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಮೋದಿಯವರಿಗೆ ಪದ್ಮಾಸನ ಹಾಕುವುದಕ್ಕೆ ಸಾಧ್ಯವಾಗಿಲ್ಲವೆಂದು ತಮಾಷೆ ಮಾಡಿದ್ದಾರೆ.

ನವದೆಹಲಿ (ಜ.11): ರಜೆ ಮುಗಿಸಿಕೊಂಡು ವಾಪಸ್ಸಾಗಿರುವ ರಾಹುಲ್ ಗಾಂಧಿ ಮತ್ತೆ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಮೋದಿಯವರಿಗೆ ಪದ್ಮಾಸನ ಹಾಕುವುದಕ್ಕೆ ಸಾಧ್ಯವಾಗಿಲ್ಲವೆಂದು ತಮಾಷೆ ಮಾಡಿದ್ದಾರೆ.

ಯೋಗ ದಿನ ಪ್ರಧಾನಿ ಮೋದಿ ಯೋಗ ಮಾಡುವುದನ್ನು ನಾನು ನೋಡಿದ್ದೇನೆ. ಎಲ್ಲಾ ರೀತಿಯ ಆಸನಗಳನ್ನು ಹಾಕಿದರು ಆದರೆ ಪದ್ಮಾಸನ ಮಾತ್ರ ಹಾಕಿಲ್ಲ ಎಂದು ರಾಹುಲ್ ಗಾಂಧಿ ತಮಾಷೆಯಾಗಿ ಹೇಳಿದ್ದಾರೆ.

ನಾನು ಕೆಲವೊಂದು ಯೋಗಗಳನ್ನು ಮಾಡಿದೆ. ನನಗೆ ತುಂಬಾ ಚೆನ್ನಾಗಿ ಮಾಡುವುದಕ್ಕೆ ಬರುವುದಿಲ್ಲ. ನಿರಂತರವಾಗಿ ಯೋಗಾಭ್ಯಾಸ ಮಾಡಿದರೆ ಪದ್ಮಾಸನ ಹಾಕುವುದು ಸುಲಭವೆಂದು ನನ್ನ ಯೋಗಗುರು ಹೇಳಿದರು.

ನಾನು ಯಾವಾಗಲೂ ಯೋಗಾಭ್ಯಾಸ ಮಾಡುತ್ತೇನೆಂದು ಮೋದಿ ಹೇಳುತ್ತಾರೆ ಆದರೆ ಸರಳವಾದ ಪದ್ಮಾಸನವನ್ನು ಹಾಕುವುದಕ್ಕೆ ಬರುವುದಿಲ್ಲವೆಂದು ರಾಹುಲ್ ಹೇಳಿದ್ದಾರೆ.

Show Full Article