Asianet Suvarna News Asianet Suvarna News

ಪ್ರೀತಿ ಕನಸು ಕೊನೆಗೂ ಈಡೇರಿತು : ಶೂಟಿಂಗ್ ಸ್ಪಾಟ್ಗೆ ಕರೆಸಿಕೊಂಡ ಪುನೀತ್

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕುಮಾರ್​ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಈಕೆ ಕಿರಿಯವಳು. ಹೆಸರು ಪ್ರೀತಿ. ಸಂಕಷ್ಟದಲ್ಲಿರುವ ಈ ಕುಟುಂಬದ ಮುದ್ದು ಮಗಳು ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ.

Punith Meet her Fan

ಎರಡು ಕಿಡ್ನಿ ಕಳೆದುಕೊಂಡಿರುವ ಬಾಲಕಿಗೆ ಪವರ್​ ಸ್ಟಾರ್​​​ ಪುನೀತ್​​ ರಾಜ್​​ಕುಮಾರ್ ಅಂದ್ರೆ ಅಚ್ಚುಮೆಚ್ಚು. ​ಅಪ್ಪುನನ್ನು ನೋಡುವ ಆಸೆ ವ್ಯಕ್ತಪಡಿಸಿದ್ದ ಆ ಬಾಲಕಿಯ ಕನಸು ಕೊನೆಗೂ ಈಡೇರಿದೆ. ​ಮೊನ್ನೆ ಅಪ್ಪು ಹುಟ್ಟುಹಬ್ಬದ ದಿನ ಪ್ಲೀಸ್ ... ಅಪ್ಪು ಸಾರ್ .... ನಿಮ್ಮನ್ನು ನೋಡಬೇಕು ಅಂತ ಅಸೆ ಆಗ್ತಾ ಇದೆ. ವಿಶ್ ಯೂ ಹ್ಯಾಪಿ ಬರ್ತಡೇ ಅಂತ ತನ್ನ ಮನದಾಸೆ ವ್ಯಕ್ತಪಡಿಸಿದ್ದಳು.

ಇದೀಗ ಖುದ್ದು ಪುನೀತ್​ ರಾಜ್​ ಕುಮಾರ್​​ ಆ ಬಾಲಕಿಯನ್ನು ಶೂಟಿಂಗ್​ ಸ್ಪಾಟ್​​ಗೆ ಕರೆಸಿಕೊಂಡು ಆ ಬಾಲಕಿಯ ಕನಸು ಈಡೇರಿಸಿದ್ದಾರೆ. ಎರಡು ಕಿಡ್ನಿ ಕಳೆದುಕೊಂಡಿರುವ ಈ ಬಾಲೆ ಸಾಯುವ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡುವ ಆಸೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕುಮಾರ್​ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಈಕೆ ಕಿರಿಯವಳು. ಹೆಸರು ಪ್ರೀತಿ. ಸಂಕಷ್ಟದಲ್ಲಿರುವ ಈ ಕುಟುಂಬದ ಮುದ್ದು ಮಗಳು ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ.

Click:ಗ್ರಾಹಕರಿಗೆ ಬಂಪರ್ : ನಾಳೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ !

ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿದರೆ ಜೀವಂತವಾಗಿಡಬಹುದು. ಆದರೆ ದುಬಾರಿ ಚಿಕಿತ್ಸೆಗೆ ದುಡ್ಡಿಲ್ಲದೆ, ಡಯಾಲಿಸಿಸ್'ಗೂ ದುಡ್ಡಿಲ್ಲದೆ ಪರದಾಡುತ್ತಿರುವ ಈ ಬಡ ಕುಟುಂಬದ ಗೋಳು ಹೇಳ ತೀರದು. ಜೊತೆಗೆ ಈ ಪುಟ್ಟ ಬಾಲೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಅಚ್ಚು ಮೆಚ್ಚು , ಅವರ ಹಾಡು, ಡ್ಯಾನ್ಸ್  ಎಲ್ಲವನ್ನೂ ನೋಡಿ ಮೆಚ್ಚಿ ಕೊಳ್ಳುವ ಈ ಬಾಲೆಗೆ ಸಾಯುವ ಮೊದಲು ಅವರನ್ನೊಮ್ಮೆ ನೋಡುವ ಕೊನೆಯಾಸೆ ಇತ್ತು. ಇದೀಗ ಆ ಆಸೆ ಈಡೇರಿದೆ. ಆಸ್ಪತ್ರೆಯ ವೆಚ್ಚ ನೀಡೋದಾಗಿ ಪುನೀತ್​ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios