Asianet Suvarna News Asianet Suvarna News

ಬಜೆಟ್ 2017: ರೈಲು ಸ್ವಚ್ಛತೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ

 ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲಿನಗೊಂಡ ಮೊದಲ ಬಜೆಟ್ ಇದಾಗಿದೆ. ನಿರೀಕ್ಷೆಯಂತೆ ಬಜೆಟ್'ನಲ್ಲಿ ರೈಲ್ವೆ ವಲಯ ಅಭಿವೃದ್ಧಿಗೆ 1.31 ಲಕ್ಷ ಕೋಟಿ ಖರ್ಚು ಅಂದಾಜಿಸಲಾಗಿದ್ದು,  51 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಸ್ವಚ್ಛತೆ ಹಾಗೂ  ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು  ಒತ್ತು ನೀಡಲಾಗಿದೆ.

Priority to Cleanliness and Safety in Railway

ನವದೆಹಲಿ (ಫೆ.01): ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಕೆ ಏಕಕಾಲಕ್ಕೆ ರೈಲ್ವೆ ಬಜೆಟ್ ಒಳಗೊಂಡ ಸಾಮಾನ್ಯ ಬಜೆಟ್ ಇದಾಗಿತ್ತು. ಈ ಬಾರಿಯ ಬಜೆಟ್'ನ ಒಟ್ಟು ಗಾತ್ರವು ರೂ. 21 ಲಕ್ಷದ 47 ಸಾವಿರ ಕೋಟಿಯಾಗಿದೆ. ಜೇಟ್ಲಿ ನಾಲ್ಕನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. 

 ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲಿನಗೊಂಡ ಮೊದಲ ಬಜೆಟ್ ಇದಾಗಿದೆ. ನಿರೀಕ್ಷೆಯಂತೆ ಬಜೆಟ್'ನಲ್ಲಿ ರೈಲ್ವೆ ವಲಯ ಅಭಿವೃದ್ಧಿಗೆ 1.31 ಲಕ್ಷ ಕೋಟಿ ಖರ್ಚು ಅಂದಾಜಿಸಲಾಗಿದ್ದು,  51 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಸ್ವಚ್ಛತೆ ಹಾಗೂ  ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು  ಒತ್ತು ನೀಡಲಾಗಿದೆ.

ರೈಲು ಪ್ರಯಾಣಿಕರ ಸುರಕ್ಷತೆಗಾಗಿ 5 ವರ್ಷಗಳ ಅವಧಿಗೆ ರೂ.1 ಲಕ್ಷ ಕೋಟಿ ಸುರಕ್ಷಾ ನಿಧಿ ಸ್ಥಾಪಿಸಿಲಾಗಿದೆ.  2019ರ ವೇಳೆಗೆ ಎಲ್ಲಾ ರೈಲ್ವೆ ಕೋಚ್'ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

ಹಾಗೇಯೆ ಯಾವುದೇ ದೂರು ನೀಡಿದರೆ ತಕ್ಷಣ ರೈಲು ಬೋಗಿಗಳ ಶುಚಿತ್ವ ಮಾಡುವಂತೆ ಹೊಸ ಯೋಜನೆ ಜಾರಿಗೆ ತರಲಾಗುವುದೆಂದು ಹೇಳಲಾಗಿದೆ. ದೇಶದ 500 ರೈಲ್ವೆ ನಿಲ್ದಾಣಗಳು ವಿಕಲಚೇತನ ಸ್ನೇಹಿಗಳಾಗಿ ಮೇಲ್ದರ್ಜೆಗೇರಿಸಲಾಗುವುದಲ್ಲದೇ,  ಸಂಚಾರ ಅನುಕೂಲಕ್ಕಾಗಿ ಎಸ್ಕಲೇಟರ್ ವ್ಯವಸ್ಥೆ  ಮಾಡಲಾಗುವುದು.

Follow Us:
Download App:
  • android
  • ios