(ವಿಡಿಯೋ) 'ಬಾಹುಬಲಿ 2 ವಿರೋಧಿಸಿದವರ ವಿರುದ್ಧವೇ ಕಿಡಿಕಾರಿದರಾ?
news
By Suvarna Web Desk | 11:50 PM April 20, 2017

ಬಾಹುಬಲಿ - 2 ರಿಲೀಸ್ ಗೆ ಕಟ್ಟಪ್ಪ  ಅಲಿಯಾಸ್ ಸತ್ಯರಾಜ್ ಕಂಟಕವಾಗಿದ್ದಾನೆ. ಸತ್ಯರಾಜ್ ಕ್ಷಮೆ ಕೇಳುವವರೆಗೂ ಕರ್ನಾಟಕದಲ್ಲಿ ಬಾಹುಬಲಿ ರಿಲೀಸ್ ಸಾಧ್ಯವಿಲ್ಲ ಎಂದು ಕನ್ನಡಪರ ಹೋರಾಟಗಾರರು ಸಿಡಿದೆದ್ದಿದ್ದಾರೆ. ಆದರೆ ಕರ್ನಾಟಕದಲ್ಲಿದ್ದುಕೊಂಡು ಕನ್ನಡದ ಹೋರಾಟಾಗಾರರ ವಿರುದ್ಧವೇ ನಾಲಿಗೆ ಹರಿ ಬಿಟ್ಟಿದ್ದಾರೆ ರಿಯಲ್ ಎಸ್ಟೇಟ್ ಉದ್ಯಮಿ. ಯಾರು ಆ ಉದ್ಯಮಿ, ಅವರು ಮಾಡಿರೋ ಆರೋಪ ಏನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.

ಬೆಂಗಳೂರು(ಎ.21): ಬಾಹುಬಲಿ - 2 ರಿಲೀಸ್ ಗೆ ಕಟ್ಟಪ್ಪ  ಅಲಿಯಾಸ್ ಸತ್ಯರಾಜ್ ಕಂಟಕವಾಗಿದ್ದಾನೆ. ಸತ್ಯರಾಜ್ ಕ್ಷಮೆ ಕೇಳುವವರೆಗೂ ಕರ್ನಾಟಕದಲ್ಲಿ ಬಾಹುಬಲಿ ರಿಲೀಸ್ ಸಾಧ್ಯವಿಲ್ಲ ಎಂದು ಕನ್ನಡಪರ ಹೋರಾಟಗಾರರು ಸಿಡಿದೆದ್ದಿದ್ದಾರೆ. ಆದರೆ ಕರ್ನಾಟಕದಲ್ಲಿದ್ದುಕೊಂಡು ಕನ್ನಡದ ಹೋರಾಟಾಗಾರರ ವಿರುದ್ಧವೇ ನಾಲಿಗೆ ಹರಿ ಬಿಟ್ಟಿದ್ದಾರೆ ರಿಯಲ್ ಎಸ್ಟೇಟ್ ಉದ್ಯಮಿ. ಯಾರು ಆ ಉದ್ಯಮಿ, ಅವರು ಮಾಡಿರೋ ಆರೋಪ ಏನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.

ಕನ್ನಡಿಗರ ಹೋರಾಟ ಅರಿತ ನಿರ್ದೇಶಕ ರಾಜಮೌಳಿ ಕೂಡ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಿ ಅಂತ ಪರಿಪರಿಯಾಗಿ ಬೇಡಿಕೊಂಡಿದ್ದು ಆಯ್ತು. ಆದರೆ ಇದೆಲ್ಲದರ ಮಧ್ಯೆ ಕರ್ನಾಟಕದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಇದೆಲ್ಲವೂ ಬುಡಮೇಲಾಗುವಂತೆ ಹೇಳಿಕೆ ನೀಡಿದ್ದಾರೆ. ಕಟ್ಟಪ್ಪನ ವಿರುದ್ಧದ ಕನ್ನಡಿಗರ ಹೋರಾಟವನ್ನೇ ಪ್ರಶ್ನೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ರಿಯಲ್ ಎಸ್ಟೇಟ್ ಉದ್ಯಮಿ ಪ್ರಶಾಂತ್ ಸಂಬರ್ಗಿ.

ಪ್ರಶಾಂತ್ ಸಂಬರ್ಗಿ ಹೇಳುವ ಪ್ರಕಾರ ಬಾಹುಬಲಿ -2 ಸಿನಿಮಾ ರಿಲೀಸ್ ಬಿಡುಗಡೆ ವಿರುದ್ಧ ಕನ್ನಡ ಪರ ಹೋರಾಟಗಾರರು ಮಾಡುತ್ತಿರೋ ಪ್ರತಿಭಟನೆ ವ್ಯವಸ್ಥಿತ ಡೀಲ್ ಅಂತೆ. ಹೀಗೆ ಹೇಳುತ್ತಾ  ವಾಟಾಳ್ ನಾಗರಾಜ್ , ಸಾರಾ ಗೋವಿಂದ್ ವಿರುದ್ಧ  ನೇರವಾಗಿ ಆರೋಪ ಮಾಡಿದ್ದಾರೆ ಸಂಬರ್ಗಿ. ಇಷ್ಟಕ್ಕೆ ಸುಮ್ಮನಾಗದ ಸಂಬರ್ಗಿ ಈ ವಿವಾದದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ್ ಚಿತ್ರವನ್ನು ಎಳೆದು ತಂದಿದ್ದಾರೆ.

ನಿಜವಾಗಲೂ ನೀವೂ ಹೋರಾಟ ಮಾಡುವುದಾದರೆ ಶರತ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಬಂದಾಗ ಯಾಕೆ ಹೋರಾಟ ಮಾಡಲಿಲ್ಲ . ಕಾವೇರಿ ಬಗ್ಗೆ ಕನ್ನಡಿಗರ ಬಗ್ಗೆ ಸತ್ಯರಾಜ್​ಕಿಂತಲೂ ಕೆಟ್ಟದಾಗಿ ಶರತ್ ಕುಮಾರ್ ಮಾತನಾಡಿದ್ದಾರೆ. ಹಾಗಿರುವಾಗ ಅದು ಪುನೀತ್ ರಾಜ್​ ಕುಮಾರ್ ಸಿನಿಮಾ ಅಂತಲೇ ನೀವೂ ಅದರ ತಂಟೆಗೆ ಹೋಗಲಿಲ್ಲವೇ ಅಂತ ಖಾರವಾಗಿಯೇ  ಕೇಳಿದ್ದಾರೆ.

  

ಪ್ರಶಾಂತ್ ಸಂಬರ್ಗಿಯ ಈ ನೇರ ಮಾತುಗಳು  ಹೋರಾಟಗಾರರು ನಿಜಕ್ಕೂ ಮತ್ತಷ್ಟು ರೊಚ್ಚಿಗೇಳುವ ಸಾಧ್ಯತೆಯೇ ಹೆಚ್ಚಿದೆ. ಅದರಲ್ಲೂ ತಮ್ಮ ಈ ಮಾತಿನ ವೀಡಿಯೋವನ್ನ ಪ್ರಶಾಂತ್ ತಮ್ಮ ಫೇಸ್ ಬುಕ್ ಪೇಜ್​ ನಲ್ಲಿಯೇ ಹಾಕಿಕೊಂಡಿದ್ದಾರೆ. ಪ್ರಶಾಂತ್ ಸಂಬರ್ಗಿಗೆ ಕನ್ನಡ ಮತ್ತು ಕನ್ನಡಿಗರ ಹೋರಾಟದ ಬಗ್ಗೆ ಕಿಂಚಿತೂ ಗೌರವ ಇಲ್ಲವೇ. ಹೋರಾಟದ ಬಗ್ಗೇನೆ ನಂಬಿಕೇ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಒಟ್ಟಾರೆ ಪ್ರಶಾಂತ್ ಸಂಬರ್ಗಿಯ ಈ ಹೇಳಿಕೆ ಈಗಾಗಲೇ ತೀವ್ರ ಹೋರಾಟ ನಡೆಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಮತ್ತಷ್ಟು ಕೆರಳಿಸೋ ಸಾಧ್ಯತೆ ಇದೆ. ಕನ್ನಡಪರ ಹೋರಾಟಗಾರರು ಸಂಬರ್ಗಿ ಹೇಳಿಕೆಯನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

-

Show Full Article