Asianet Suvarna News Asianet Suvarna News

ದೇಶಾದ್ಯಂತ ಶಿವರಾತ್ರಿ ಸಂಭ್ರಮ ಸಡಗರ: ಶಿವಾಲಯಗಳಲ್ಲಿ ಇಂದು ವಿಶೇಷ ಪೂಜೆ

ದೇಶಾದ್ಯಂತ ಇಂದು ಶಿವರಾತ್ರಿ ಹಬ್ಬ ಸಂಭ್ರಮ ಮನೆಮಾಡಿದೆ.  ದೇಶದ  ಎಲ್ಲಾ ಶಿವದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ  ವಿಶೇಷ ಪೂಜೆ ನೆರವೇರುತ್ತಿದೆ. 

People Are Celebrating Shivaratri Festival

ಬೆಂಗಳೂರು(ಫೆ.24): ದೇಶಾದ್ಯಂತ ಇಂದು ಶಿವರಾತ್ರಿ ಹಬ್ಬ ಸಂಭ್ರಮ ಮನೆಮಾಡಿದೆ.  ದೇಶದ  ಎಲ್ಲಾ ಶಿವದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ  ವಿಶೇಷ ಪೂಜೆ ನೆರವೇರುತ್ತಿದೆ. 

ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡೀ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯಲಿದೆ. ಶಿವ ಪಂಚಾಕ್ಷರಿ ಮಂತ್ರ "ಓಂ ನಮ: ಶಿವಾಯ", ಹರ ಹರ ಮಹಾದೇವ, ಶಂಭೋ ಶಂಕರ...ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ.

ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ.

Follow Us:
Download App:
  • android
  • ios