Asianet Suvarna News Asianet Suvarna News

ನೆರೆ ರಾಜ್ಯದ ಪಕ್ಷಕ್ಕೆ ಜೆಡಿಎಸ್ ಬಂಡಾಯ ಶಾಸಕರು !

ಈಗಾಗಲೇ ಶರದ್ ಪವಾರ್ ಜೊತೆ ಜಮೀರ್ ಅಹಮದ್ ಒಂದು ಬಾರಿ ಮುಂಬೈನಲ್ಲಿ ಮಾತುಕತೆಯನ್ನೂ ಮುಗಿಸಿದ್ದು, ಬೆಂಗಳೂರಿಗೆ ಬಂದಾಗ 8 ಜನ ಅಮಾನತುಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವ ಇಂಗಿತವನ್ನು ಪವಾರ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

JDS Rebel MLAs may change party

ಬೆಂಗಳೂರು(ಅ.27): ಜೆಡಿಎಸ್'ನ  8 ಜನ ಭಿನ್ನಮತೀಯ ಶಾಸಕರ ವಿರುದ್ಧ ಅನರ್ಹತೆಯ ದೂರಿನ ವಿಚಾರಣೆ ಮುಂದುವರಿದಿರುವಾಗಲೇ ರೆಬೆಲ್​ ಶಾಸಕರಿಗೆ ಹೊಸ ರಾಜಕೀಯದ ಆಫರ್​ ಸಿಕ್ಕಿದೆ. ಬಂಡಾಯ ಶಾಸಕರ ಮೇಲೆ ಕಣ್ಣು ಹಾಕಿರುವ ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್ ರಾಜ್ಯದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷವನ್ನು ಬಲವರ್ಧನೆಗೊಳಿಸುವ ಆಹ್ವಾನ ನೀಡಿದ್ದಾರೆ.

ಈಗಾಗಲೇ ಶರದ್​ ಪವಾರ್​ ಜೊತೆ ಜಮೀರ್​ ಅಹಮದ್​ ಒಂದು ಬಾರಿ ಮುಂಬೈನಲ್ಲಿ ಮಾತುಕತೆಯನ್ನೂ ಮುಗಿಸಿದ್ದು, ಬೆಂಗಳೂರಿಗೆ ಬಂದಾಗ 8 ಜನ ಅಮಾನತುಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವ ಇಂಗಿತವನ್ನು ಪವಾರ್​ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬಹುತೇಕ ದೀಪಾವಳಿ ಹಬ್ಬದ ಬಳಿಕ ಈ ಪ್ರಕ್ರಿಯೆಗೆ ವೇಗ ದೊರಕಲಿದ್ದು, ಶೀಘ್ರವೇ ಬೆಂಗಳೂರಿಗೆ ಬರಲಿರುವ ಶರದ್​ ಪವಾರ್​ ಜೊತೆ ಬಂಡಾಯ ಶಾಸಕರು ಮಾತುಕತೆ ನಡೆಸಲಿದ್ದಾರೆ. ಎಲ್ಲವೂ ಸಹಮತಕ್ಕೆ ಬಂದಲ್ಲಿ 8 ಬಂಡಾಯ ಶಾಸಕರು ರಾಜ್ಯದಲ್ಲಿ ಎನ್​ಸಿಪಿ ಪಕ್ಷವನ್ನು ಬಲವರ್ಧಿಸುವ ಕೆಲಸಕ್ಕೆ ಮುಂದಾಗುವ ಸಾಧ್ಯತೆಯಿದೆ. ಆದರೆ ಯಾವುದೇ ನೆಲೆ ಇಲ್ಲದ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷಕ್ಕೆ ನೆಲೆ ಕಾಣಿಸುವುದು ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಕಷ್ಟದ ಮಾತಾಗಿದೆ.

ಹಾಗಂತ ರಾಜ್ಯದಲ್ಲಿ ಎನ್​ಸಿಪಿ ಕಟ್ಟುವ ಮಾತು ಕೇಳಿ ಬಂದಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೊಮ್ಮೆ ಅಫ್ಜಲ್​ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್​ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಎನ್​ಸಿಪಿಗೆ ವಲಸೆ ಹೊರಟು ನಿಂತಿದ್ದರು. ಆದರೆ ಅದು ಕೊನೆಯ ಕ್ಷಣದಲ್ಲಿ ವರ್ಕೌಟ್ ಆಗಿರಲಿಲ್ಲ. ಇದೀಗ ಮತ್ತೆ ಬಂಡಾಯ ಶಾಸಕರನ್ನು ಸೆಳೆಯಲು ಎನ್​ಸಿಪಿ ಮುಂದಾಗಿದ್ದು ಎಷ್ಟರ ಮಟ್ಟಿಗೆ ಫಲ ಕೊಡುತ್ತೋ ಗೊತ್ತಿಲ್ಲ.

ವರದಿ:  ಕಿರಣ್​  ಹನಿಯಡ್ಕ, ಸುವರ್ಣ ನ್ಯೂಸ್​

Follow Us:
Download App:
  • android
  • ios