ಟ್ವಿಸ್ಟ್..! ವೆಂಕಟ್ ಬೇರೇನೋ ಮುಚ್ಚಿಡಲು ರಚನಾ ಹೆಸರು ಹೇಳಿದನಾ?
news
By Suvarna Web Desk | 12:04 AM June 19, 2017

ಚಿಕ್ಕಜಾಲದಲ್ಲಿರೋ ರಮೇಶ್ ಸಮಾಧಿಗೆ ಇಂದು ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿ ವಾಪಾಸ್ ಬಂದ ಬಳಿಕ ಹುಚ್ಚ ವೆಂಕಟ್ ತನ್ನ ಅತ್ತಿಗೆಯೊಂದಿಗೆ ಜಗಳವಾಡಿದ್ದಾನೆ

ಬೆಂಗಳೂರು(ಜೂ.18) ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆಸ್ತಿ ವಿಚಾರವಾಗಿ ಮನನೊಂದು ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಹೌದು ಹುಚ್ಚ ವೆಂಕಟ್ ಅಣ್ಣ ರಮೇಶ್ ಅವರ ಪತ್ನಿಗೂ ಹುಚ್ಚ ವೆಂಕಟ್'ಗೂ ಜಗಳವಾದ ಬೆನ್ನಲ್ಲೇ ಹುಚ್ಚ ವೆಂಕಟ್ ಪಿನಾಯಿಲ್ ಸೇವಿಸಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಮೂರು ತಿಂಗಳ ಹಿಂದಷ್ಟೇ ಹುಚ್ಚ ವೆಂಕಟ್ ಸಹೋದರ ರಮೇಶ್ ಮೃತಪಟ್ಟಿದ್ದರು. ಇದಕ್ಕೂ ಮೊದಲು ವೆಂಕಟ್ ತನ್ನ ಸಹೋದರ ರಮೇಶ್'ಗೆ ಕಾರು ತೆಗೆಸಿಕೊಟ್ಟಿದ್ದರು. ಅಣ್ಣನ ಸಾವಿನ ಬಳಿಕ ವೆಂಕಟ್ ಕಾರನ್ನು ತೆಗೆದುಕೊಂಡು ಹೋಗಿದ್ದರು. ಈ ವಿಚಾರವಾಗಿ ಹುಚ್ಚ ವೆಂಕಟ್'ಗೂ ಹಾಗೂ ರಮೇಶ್ ಪತ್ನಿಗೂ ಜಗಳವಾಗಿತ್ತು ಎಂದು ಸುವರ್ಣನ್ಯೂಸ್'ಗೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಚಿಕ್ಕಜಾಲದಲ್ಲಿರೋ ರಮೇಶ್ ಸಮಾಧಿಗೆ ಇಂದು ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿ ವಾಪಾಸ್ ಬಂದ ಬಳಿಕ ಹುಚ್ಚ ವೆಂಕಟ್ ತನ್ನ ಅತ್ತಿಗೆಯೊಂದಿಗೆ ಜಗಳವಾಡಿದ್ದಾನೆ. ಆ ಬಳಿಕ ಕುಟುಂಬದ ಜಗಳ ದಿಕ್ಕು ತಪ್ಪಿಸೋಕೆ ವೆಂಕಟ್ ಪ್ರೀತಿಯ ಹೈಡ್ರಾಮ ಆಡಿದ್ದಾನೆ ಎನ್ನಲಾಗುತ್ತಿದೆ.  

Show Full Article